ಮಕ್ಕಳ ಓದಿಗಾಗಿ ಜಮೀನು ಮಾರಿದ ತಂದೆ: ನೀಟ್-ಜೆಇಇ ಪಾಸ್ ಮಾಡಿ ಡಾಕ್ಟರ್, ಇಂಜಿನಿಯರ್ ಆದ ಸಹೋದರರು

ಪಾಟ್ನಾ: ಬಡತನ ಮತ್ತು ಜೀವನದಲ್ಲಿ ಕಷ್ಟಗಳು ಸಾಧನೆಯ ಹಾದಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನ ಬಿಹಾರದ ಗಯಾ ಜಿಲ್ಲೆಯ ಇಬ್ಬರು ಸಹೋದರರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಬೆವರು ಸುರಿಸಿ, ಜಮೀನು ಮಾರಿ, ಮಂಡಿಯಲ್ಲಿ ಹಮಾಲಿ ಕೆಲಸ ಮಾಡಿದ ತಂದೆಯ ಕನಸನ್ನ ಪುತ್ರರಿಬ್ಬರೂ ನನಸು ಮಾಡಿದ್ದಾರೆ.

ಹಿರಿಯ ಪುತ್ರ ಸೋನು ರಾಜ್ ವೈದ್ಯಕೀಯ (NEET) ಹಾಗೂ ಕಿರಿಯ ಪುತ್ರ ಮೋನು ರಾಜ್ ಇಂಜಿನಿಯರಿಂಗ್ (JEE) ಪ್ರವೇಶ ಪರೀಕ್ಷೆಯಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದು, ಈ ಸಹೋದರರ ಸಾಧನೆ ಇದೀಗ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.

Father Sold Land And Worked As Coolie Bihar Brothers Sonu amp amp Monu Crack NEET-JEE To Fulfill Parents Dream

ಮಕ್ಕಳ ಓದಿಗಾಗಿ ಜಮೀನು ಮಾರಿದ ತಂದೆ ಮನೋಜ್ ಕುಮಾರ್!

ಸೋನು ಮತ್ತು ಮೋನು ಅವರ ಈ ಗೆಲುವಿನ ಹಿಂದೆ ಅವರ ತಂದೆ ಮನೋಜ್ ಕುಮಾರ್ ಅವರ ತಂದೆಯ ತ್ಯಾಗ ಮತ್ತು ಹೋರಾಟವಿದೆ. ಗಯಾದ ಧಾನ್ಯದ ಮಂಡಿಯಲ್ಲಿ ಕೂಲಿ (ಹಮಾಲಿ) ಕೆಲಸ ಮಾಡುವ ಮನೋಜ್ ಕುಮಾರ್, ದಿನವಿಡೀ ಭಾರವಾದ ಧಾನ್ಯದ ಮೂಟೆಗಳನ್ನ ಹೊರುತ್ತಿದ್ದರು. ಇದರ ಜೊತೆಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವುದು ಹಾಗೂ ರೈತರ ಬೆಳೆ ಮಾರಾಟಕ್ಕೆ ನೆರವಾಗಿ ಬರುತ್ತಿದ್ದ ಸಣ್ಣ ಕಮಿಷನ್‌ನಿಂದ ಕುಟುಂಬ ನಿರ್ವಹಿಸುತ್ತಿದ್ದರು.

ಕುಟುಂಬದಲ್ಲಿದ್ದ ಎರಡು ಸಣ್ಣ ತುಂಡು ಕೃಷಿ ಭೂಮಿಯೇ ಇವರ ಬದುಕಿಗೆ ಆಧಾರವಾಗಿತ್ತು. ಆದರೆ, ಕಿರಿಯ ಪುತ್ರ ಮೋನು ಕೋಟಾಗೆ ತೆರಳಿ ಇಂಜಿನಿಯರಿಂಗ್ ತರಬೇತಿ ಪಡೆಯುವ ಆಸೆ ವ್ಯಕ್ತಪಡಿಸಿದಾಗ ಆರ್ಥಿಕ ಸಂಕಷ್ಟ ಎದುರಾಯಿತು.

ಭಾರತದಲ್ಲಿ ಓದು, ಉದ್ಯೋಗವಿಲ್ಲದೆ ಕಳೆಯುತ್ತಿರುವ 8.7 ಕೋಟಿ ಯುವಜನತೆ: ನೀತಿ ಆಯೋಗದ ವರದಿ
ಭಾರತದಲ್ಲಿ ಓದು, ಉದ್ಯೋಗವಿಲ್ಲದೆ ಕಳೆಯುತ್ತಿರುವ 8.7 ಕೋಟಿ ಯುವಜನತೆ: ನೀತಿ ಆಯೋಗದ ವರದಿ

ಮಕ್ಕಳ ಓದಿಗೆ ಹಣದ ಕಡಿಮೆಯಾಗಬಾರದು ಎಂಬ ಕಾರಣಕ್ಕೆ ಮನೋಜ್ ಕುಮಾರ್ ತಮ್ಮಲ್ಲಿದ್ದ ಒಂದು ತುಂಡು ಜಮೀನನ್ನ ಮಾರಾಟ ಮಾಡಿದರು. ತಾಯಿ ರೇಷ್ಮಿ ದೇವಿ ಕೂಡ ಪ್ರತಿ ಹಂತದಲ್ಲೂ ಮಕ್ಕಳಿಗೆ ಧೈರ್ಯ ತುಂಬಿ ಪ್ರೋತ್ಸಾಹಿಸಿದರು.

ಅನಾರೋಗ್ಯದ ನಡುವೆಯೂ ಜೆಇಇ ಮೇನ್‌ನಲ್ಲಿ ಯಶಸ್ಸು: ಬಿಐಟಿ ಮೆಸ್ರಾದಲ್ಲಿ ಮೋನುಗೆ ಸೀಟ್

ಬಾಲ್ಯದಿಂದಲೂ ಓದಿನಲ್ಲಿ ಚುರುಕಾಗಿದ್ದ ಮೋನು ರಾಜ್, 10ನೇ ತರಗತಿಯಲ್ಲಿ ಶೇ. 96 ಹಾಗೂ 12ನೇ ತರಗತಿಯಲ್ಲಿ ಶೇ. 84.5 ಅಂಕ ಗಳಿಸಿದ್ದರು. ಬಳಿಕ ಇಬ್ಬರೂ ಸಹೋದರರು ರಾಜಸ್ಥಾನದ ಕೋಟಾದಲ್ಲಿರುವ ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ಗೆ ಸೇರಿ ಸುಮಾರು ಎರಡು ವರ್ಷಗಳ ಕಾಲ ಒಟ್ಟಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದರು.

ಆದರೆ, ಕೋಟಾದಲ್ಲಿದ್ದಾಗ ಮೋನು ಅವರಿಗೆ ಆರೋಗ್ಯ ಸಮಸ್ಯೆ ಎದುರಾಯಿತು. ಮೊದಲಿಗೆ ಟೈಫಾಯಿಡ್, ಆನಂತರ ಕಾಮಾಲೆ (Jaundice) ಹಾಗೂ ಹೃದಯ ಬಡಿತ ಹೆಚ್ಚಾಗುವ ಸಮಸ್ಯೆಯಿಂದ ಬಳಲಿದರು. ಬರೋಬ್ಬರಿ ಮೂರು ತಿಂಗಳ ಕಾಲ ಜ್ವರದಿಂದ ನರಳಿದರೂ ಮೋನು ಛಲ ಬಿಡದೆ ಪ್ರತಿದಿನ ತರಗತಿಗೆ ಹಾಜರಾಗಿ ಅಭ್ಯಾಸ ಮುಂದುವರಿಸಿದರು.

ಈ ಕಠಿಣ ಪರಿಶ್ರಮದ ಫಲವಾಗಿ ಜೆಇಇ ಮೇನ್‌ನಲ್ಲಿ ಯಶಸ್ಸು ಕಂಡ ಮೋನು, ಶೇ. 93 ಪರ್ಸೆಂಟೈಲ್ ಗಳಿಸಿ ಪ್ರತಿಷ್ಠಿತ ಬಿಐಟಿ ಮೆಸ್ರಾದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಸೀಟ್ rಪಡೆದುಕೊಂಡಿದ್ದಾರೆ.

ದೆಹಲಿಯ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗೆ ಸೋನು ರಾಜ್ ಆಯ್ಕೆ

ಇತ್ತ ಹಿರಿಯ ಸಹೋದರ ಸೋನು ರಾಜ್ ಕೂಡ ವೈದ್ಯನಾಗುವ ಕನಸನ್ನ ನನಸು ಮಾಡಿಕೊಂಡಿದ್ದಾರೆ. 2026ರ ನೀಟ್ ಪರೀಕ್ಷೆಯಲ್ಲಿ 636 ಅಂಕಗಳನ್ನ ಗಳಿಸಿರುವ ಸೋನು, ದೆಹಲಿಯ ಪ್ರತಿಷ್ಠಿತ ಏಮ್ಸ್ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (AIIMS CAPFIMS) ಪ್ರವೇಶಾತಿ ಪಡೆದಿದ್ದಾರೆ.

ಆಟೋ ಚಾಲಕನ ಮಗನ ಅಮೋಘ ಸಾಧನೆ: ಬಡತನ ಮೆಟ್ಟಿ ನಿಂತು MBBS ಸೀಟು ಗಿಟ್ಟಿಸಿಕೊಂಡ ಗ್ರಾಮೀಣ ಪ್ರತಿಭೆಯ ರೋಚಕ ಸ್ಟೋರಿ
ಆಟೋ ಚಾಲಕನ ಮಗನ ಅಮೋಘ ಸಾಧನೆ: ಬಡತನ ಮೆಟ್ಟಿ ನಿಂತು MBBS ಸೀಟು ಗಿಟ್ಟಿಸಿಕೊಂಡ ಗ್ರಾಮೀಣ ಪ್ರತಿಭೆಯ ರೋಚಕ ಸ್ಟೋರಿ

ಮಕ್ಕಳಿಬ್ಬರ ಯಶಸ್ಸಿನಿಂದ ಭಾವುಕರಾಗಿರುವ ತಂದೆ ಮನೋಜ್ ಕುಮಾರ್, "ಇಬ್ಬರೂ ಮಕ್ಕಳು ಪ್ರತಿಷ್ಠಿತ ಸಂಸ್ಥೆಗಳಿಗೆ ಆಯ್ಕೆಯಾಗಿರುವುದು ನನ್ನ ಬದುಕಿನ ಅತಿದೊಡ್ಡ ಸಂತೋಷ. ಕೋಟಾದ ಶಿಕ್ಷಕರು ನೀಡಿದ ಸಹಕಾರಕ್ಕೆ ನಾನು ಋಣಿಯಾಗಿದ್ದೇನೆ" ಎಂದಿದ್ದಾರೆ.

ಇತ್ತ ಸೋನು ರಾಜ್ ಪ್ರತಿಕ್ರಿಯಿಸಿ, "ನಮ್ಮ ಪೋಷಕರು ನಮಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಈಗ ಅವರಿಗಾಗಿ ಮತ್ತು ಸಮಾಜಕ್ಕಾಗಿ ಏನಾದರೂ ಮಾಡುವ ಸರದಿ ನಮ್ಮದು" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+