ಸಿಬಿಐನಿಂದ ಸತತ 8 ಗಂಟೆ ಕಾರ್ತಿ ಚಿದಂಬರಂ ವಿಚಾರಣೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಆಗಸ್ಟ್ 24: ಬುಧವಾರ ಸಿಬಿಐಯ ಅಧಿಕಾರಿಗಳ ಮುಂದೆ ಹಾಜರಾದ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂರನ್ನು ಅಧಿಕಾರಿಗಳು ಪ್ರಶ್ನೆಗಳಲ್ಲೇ ರುಬ್ಬಿ ಹಾಕಿದ್ದಾರೆ.

'ಲುಕ್ಔಟ್ ನೋಟಿಸ್' ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕಾರ್ತಿ ಚಿದಂಬರಂ

ಸತತ 8 ಗಂಟೆಗಳ ಕಾಲ ಚೆನ್ನೈ ಕಚೇರಿಯಲ್ಲಿ ವಿಚಾರಣೆ ನಡೆಸಿದ ಅಧಿಕಾರಿಗಳು ಸುಮಾರು 100 ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಸಿಬಿಐ ಮೂಲಗಳು 'ಒನ್ಇಂಡಿಯಾ'ಗೆ ತಿಳಿಸಿವೆ.

CBI fires 100 questions in 8 hours at Karti Chidambaram in INX Media case

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಅವರನ್ನು ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಕಾರ್ತಿ ಚಿದಂಬರಂಗೆ ಕೇಳಲಾದ ಪ್ರಶ್ನೆಗಳಲ್ಲಿ ಅವರು ಪಡೆದುಕೊಂಡ ಹಣ, ಖಾಸಗಿ ಕಂಪೆನಿಯೊಂದರ ಜತೆಗಿನ ಡೀಲ್ ಗೆ ಸಂಬಂಧಿಸಿದ ಪ್ರಶ್ನೆಗಳೇ ಹೆಚ್ಚಾಗಿದ್ದವು.

ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಕಾರ್ತಿ ಚಿದಂಬರಂ ಬುಧವಾರ ಬೆಳಿಗ್ಗೆ 10.20ಕ್ಕೆ ವಿಚಾರಣೆಗೆ ಹಾಜರಾಗಿದ್ದರು. ಅವರನ್ನು ಆಗಸ್ಟ್ 28ರಂದು ಮತ್ತೆ ವಿಚಾರಣೆಗೆ ಬರುವಂತೆ ಸಿಬಿಐ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಐಎನ್ಎಕ್ಸ್ ಮೀಡಿಯಾಗೆ ವಿದೇಶದಿಂದ ನೇರಹೂಡಿಕೆಗೆ ಪರವಾನಿಗೆ ಪಡೆದುಕೊಳ್ಳಲು ಕಾರ್ತಿ ಚಿದಂಬರಂ ಕಂಪನಿ 3.6 ಕೋಟಿ ರೂಪಾಯಿ ಪಡೆದಿತ್ತು ಎಂಬ ಆರೋಪ ಅವರ ಮೇಲಿದೆ. ಅಂದ ಹಾಗೆ ಈ ಹಣ ಪಡೆಯುವಾಗ ಅವರ ತಂದೆ ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದರು.

ಇನ್ನು ಇದೇ ವೇಳೆ ಕಾರ್ತಿ ಚಿದಂಬರಂ ಕಂಪನಿಯ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಕಳೆದ ಮೇ 15ರಂದು ಕಾರ್ತಿ ಚಿದಂಬರಂ ವಿರುದ್ಧ ಈ ಪ್ರಕರಣ ದಾಖಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
For Karti Chidambaram, the Central Bureau of Investigation had over 100 questions to ask. Grilled by the CBI for over 8 hours, the son of the former union minister, P Chidambaram was cooperative, CBI sources tell OneIndia.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ