ಹುಬ್ಬಳ್ಳಿಯಲ್ಲಿ ಸಹೋದರರ ಮೇಲೆ ಹಲ್ಲೆ, ಒಬ್ಬನ ಕೊಲೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್ 25 : ಬುಧವಾರ ಮಧ್ಯರಾತ್ರಿ ಹುಬ್ಬಳ್ಳಿಯಲ್ಲಿ ಕೊಲೆ ನಡೆದಿದೆ. ಚಾಕುವಿನಿಂದ ಇರಿದು ಒಬ್ಬರನ್ನು ಹತ್ಯೆ ಮಾಡಲಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅಶೋಕನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೋಪನಕೊಪ್ಪ ಅಮರ ಕಾಲೋನಿಯ ಮೂವರು ಸಹೋದರರ ಮೇಲೆ ಬುಧವಾರ ಮಧ್ಯರಾತ್ರಿ 8 ಜನರ ಗುಂಪು ಹಲ್ಲೆ ಮಾಡಿದೆ, ಚಾಕುವಿನಿಂದ ಇರಿದಿದೆ. ಇದರಿಂದಾಗಿ ಒಬ್ಬರು ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

hubballi

ಹಳೇ ದ್ವೇಷದ ಹಿನ್ನೆಲೆಯಲ್ಲಿ ತೌಸೀಫ್ ಕಾರಡಗಿ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ. ಹಲ್ಲೆ ತಡೆಯಲು ಬಂದ ತೌಸೀಫ್ ಸಹೋದರರಾದ ವಾಸಿಂ ಮತ್ತು ಅಜಾದ್ ಎಂಬುವರ ಮೇಲೆಯೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.

ಸದ್ದಾಂ, ಇಸ್ಮಾಯಿಲ್, ಸೈಯ್ಯದ್, ಮೌಲಾಲಿ ಎಂಬುವವರು ಸಹಚರರ ಜೊತೆ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿ ಗಾಯಗೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹ್ಮದ್ ತೌಸೀಫ್ ಕಾರಡಗಿ (20) ಮೃತಪಟ್ಟಿದ್ದಾರೆ.

ಅಜಾದ ಕಾರಡಗಿ (22) ಎಂಬುವವರು ಗಾಯಗೊಂಡಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi Ashok Nagar police began the search operations for accused of murder. Gopanakoppa colony Towsif murdered by 8 members group on Wednesday midnight.
Please Wait while comments are loading...