ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ; ಆಗಸ್ಟ್ 1ರಿಂದ ವಿವಿಧ ನಗರಗಳಿಗೆ ಪ್ರತಿದಿನ ವಿಮಾನ ಸಂಚಾರ

|
Google Oneindia Kannada News

ಹುಬ್ಬಳ್ಳಿ, ಜುಲೈ 30; ಇಂಡಿಗೋ ಏರ್‌ಲೈನ್ಸ್ ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ವಿಮಾನ ಸೇವೆಯನ್ನು ಆಗಸ್ಟ್ 1ರಿಂದ ಆರಂಭಿಸಲಿದೆ. ವಿಮಾನಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ.

ಕೋವಿಡ್ ಲಾಕ್‌ಡೌನ್ ಮುಗಿದ ಬಳಿಕ ವಿವಿಧ ನಗರಗಳಿಗೆ ವಿಮಾನ ಸಂಪರ್ಕವನ್ನು ಇಂಡಿಗೂ ಏರ್‌ಲೈನ್ಸ್ ಆರಂಭಿಸುತ್ತಿದೆ. ಚೆನ್ನೈ, ಬೆಂಗಳೂರು, ಗೋವಾ, ಕೊಚ್ಚಿನ್, ಮುಂಬೈ ಮತ್ತು ಕಣ್ಣೂರಿಗೆ ವಿಮಾನಗಳು ಹಾರಾಟ ನಡೆಸಲಿವೆ.

ಹುಬ್ಬಳ್ಳಿ-ಗಂಗಾವತಿ ಸೇರಿ ಹಲವು ರೈಲುಗಳ ಸಂಚಾರ ಆರಂಭ ಹುಬ್ಬಳ್ಳಿ-ಗಂಗಾವತಿ ಸೇರಿ ಹಲವು ರೈಲುಗಳ ಸಂಚಾರ ಆರಂಭ

ಚೆನ್ನೈನಿಂದ ಬೆಳಗ್ಗೆ 6.05ಕ್ಕೆ ಹೊರಡುವ ವಿಮಾನ ಹುಬ್ಬಳ್ಳಿಗೆ 8.10ಕ್ಕೆ ಆಗಮಿಸಲಿದೆ. ಹುಬ್ಬಳ್ಳಿಯಿಂದ ಬೆಳಗ್ಗೆ 8.35ಕ್ಕೆ ಹೊರಡುವ ವಿಮಾನ ಕೊಚ್ಚಿನ್‌ಗೆ 10.20ಕ್ಕೆ ತಲುಪಲಿದೆ. ಕೊಚ್ಚಿನ್‌ನಿಂದ 10.50ಕ್ಕೆ ಹೊರಟು, 12.40ಕ್ಕೆ ಹುಬ್ಬಳ್ಳಿಗೆ ವಾಪಸ್ ಆಗಲಿದೆ.

ಹುಬ್ಬಳ್ಳಿ; ಜುಲೈ 1ರಿಂದ ಹಲವು ವಿಮಾನ ಸಂಚಾರ ಪುನರಾರಂಭ ಹುಬ್ಬಳ್ಳಿ; ಜುಲೈ 1ರಿಂದ ಹಲವು ವಿಮಾನ ಸಂಚಾರ ಪುನರಾರಂಭ

 From August 1 Daily Flight To Bengaluru Mumbai Kannur Goa From Hubballi

ಹುಬ್ಬಳ್ಳಿಯಿಂದ ಮಧ್ಯಾಹ್ನ 1 ಗಂಟೆಗೆ ಮುಂಬೈಗೆ ವಿಮಾನ ಸಂಚಾರ ನಡೆಸಲಿದ್ದು, 2.45ಕ್ಕೆ ತಲುಪಲಿದೆ. ಮುಂಬೈನಿಂದ 3.15ಕ್ಕೆ ಹೊರಟು, 4.40ಕ್ಕೆ ಹುಬ್ಬಳ್ಳಿಗೆ ವಿಮಾನ ವಾಪಸ್ ಆಗಲಿದೆ.

ಆ. 13ರಿಂದ ಬೆಳಗಾವಿ-ದೆಹಲಿ ವಿಮಾನ ಹಾರಾಟ; ವೇಳಾಪಟ್ಟಿ ಆ. 13ರಿಂದ ಬೆಳಗಾವಿ-ದೆಹಲಿ ವಿಮಾನ ಹಾರಾಟ; ವೇಳಾಪಟ್ಟಿ

ಸಂಜೆ 5.20ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 6.40ಕ್ಕೆ ಕಣ್ಣೂರು ತಲುಪಲಿದೆ. 7 ಗಂಟೆಗೆ ಕಣ್ಣೂರಿನಿಂದ ಹೊರಡುವ ವಿಮಾನ 8.20ಕ್ಕೆ ಹುಬ್ಬಳ್ಳಿಗೆ ವಾಪಸ್ ಆಗಲಿದೆ. ರಾತ್ರಿ 8.35ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 9.55ಕ್ಕೆ ಬೆಂಗಳೂರು ತಲುಪಲಿದೆ.

ಮುಂಜಾನೆ ವಿಮಾನ; ಬೆಂಗಳೂರಿನ ಕೆಐಎನಿಂದ ಬೆಳಗ್ಗೆ 7.15ಕ್ಕೆ ಹೊರಡುವ ವಿಮಾನ 8.40ಕ್ಕೆ ಹುಬ್ಬಳ್ಳಿ ತಲುಪಲಿದೆ. 9 ಗಂಟೆಗೆ ಹೊರಡುವ ವಿಮಾನ 9.50ಕ್ಕೆ ಬೆಂಗಳೂರು ತಲುಪಲಿದೆ ಎಂದು ವೇಳಾಪಟ್ಟಿ ಹೇಳಿದೆ.

10.20ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 11.10ಕ್ಕೆ ಹುಬ್ಬಳ್ಳಿಗೆ ಬರಲಿದ್ದು, 11.40ಕ್ಕೆ ಪುನಃ ಹುಬ್ಬಳ್ಳಿಯಿಂದ ಹೊರಟು, ಮಧ್ಯಾಹ್ನ 1 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

Recommended Video

ವಿಜೇತ ಟ್ವೀಟ್ ಗೆ ಸ್ವಾಗತ ಕೋರಿದ HDK | Oneindia Kannada

ಬೆಂಗಳೂರು-ಚೆನ್ನೈ ವಯಾ ಹುಬ್ಬಳ್ಳಿ ವಿಮಾನ ಬೆಂಗಳೂರಿನಿಂದ ಮಧ್ಯಾಹ್ನ 3.30ಕ್ಕೆ ಹೊರಡಲಿದ್ದು, ಸಂಜೆ 5 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಚೆನ್ನೈಗೆ 5.20ಕ್ಕೆ ಹೊರಡಲಿದ್ದು, 7.10ಕ್ಕೆ ಬೆಂಗಳೂರು ತಲುಪಲಿದೆ.

English summary
From Hubballi airport Indigo Airlines will start its daily flights to Chennai, Bengaluru, Goa, Cochin, Mumbai and Kannur from Hubballi from August 1, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X