ಆ. 13ರಿಂದ ಬೆಳಗಾವಿ-ದೆಹಲಿ ವಿಮಾನ ಹಾರಾಟ; ವೇಳಾಪಟ್ಟಿ

ಬೆಳಗಾವಿ, ಜುಲೈ 28; ಕೇಂದ್ರ ವಿಮಾನಯಾನ ಸಚಿವಾಲಯ ಬೆಳಗಾವಿ-ನವ ದೆಹಲಿ ವಿಮಾನ ಸೇವೆಯನ್ನು ಆರಂಭಿಸಲು ಒಪ್ಪಿಗೆ ನೀಡಿದೆ. ಆಗಸ್ಟ್ 13ರಿಂದ ವಿಮಾನ ಸಂಚಾರ ಆರಂಭವಾಗಲಿದೆ.

ಹಲವು ವರ್ಷಗಳಿಂದ ಬೆಳಗಾವಿ-ನವ ದೆಹಲಿ ವಿಮಾನ ಸೇವೆ ಆರಂಭಿಸಬೇಕು ಎಂಬ ಬೇಡಿಕೆ ಇತ್ತು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಕೇಂದ್ರ ವಿಮಾನಯಾನ ಸಚಿವರಿಗೆ ಈ ಕುರಿತು ಮನವಿ ಸಲ್ಲಿಸಿದ್ದರು.

ಈಗ ಸಚಿವಾಲಯ ವಿಮಾನ ಸೇವೆ ಆರಂಭಿಸಲು ಒಪ್ಪಿಗೆ ನೀಡಿದೆ. ಬೆಳಗಾವಿ ಸಂಸದ ಮಂಗಲ ಸುರೇಶ್ ಅಂಗಡಿ ಆಗಸ್ಟ್ 13ರಿಂದ ವಿಮಾನ ಸೇವೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

Belagavi New Delhi Flight Service From August 13

ವೇಳಾಪಟ್ಟಿ; ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸೋಮವಾರ ಮತ್ತು ಶುಕ್ರವಾರ ಸಂಜೆ 4.35ಕ್ಕೆ ವಿಮಾನ ದೆಹಲಿಯಿಂದ ಆಗಮಿಸಲಿದೆ. 5.05ಕ್ಕೆ ದೆಹಲಿಗೆ ವಾಪಸ್ ಆಗಲಿದೆ.

ಬೆಳಗಾವಿ ವಿಮಾನ ನಿಲ್ದಾಣವನ್ನು 2019ರಲ್ಲಿ ಉಡಾನ್ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ. ಕರ್ನಾಟಕದ ಹಳೆಯ ವಿಮಾನ ನಿಲ್ದಾಣವಾದ ಬೆಳಗಾವಿ ದೇಶದ 12 ಮಹಾನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.

ಕರ್ನಾಟಕದ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಬೆಳಗಾವಿ ವಿಮಾನ ನಿಲ್ದಾಣವಿದೆ. 2021ರ ಏಪ್ರಿಲ್‌ನಿಂದ ಜೂನ್ ತನಕ 1,640 ವಿಮಾನಗಳು ಬೆಳಗಾವಿಯಿಂದ ಲ್ಯಾಂಡಿಂಗ್ ಅಥವ ಟೇಕಾಫ್ ಆಗಿವೆ. 51,190 ಪ್ರಯಾಣಿಕರು ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕೋವಿಡ್ ಪರಿಸ್ಥಿತಿಯಲ್ಲಿಯೂ ಹೆಚ್ಚು ಪ್ರಯಾಣಿಕರು ಆಗಮಿಸಿದ್ದಾರೆ. 2020-21ರಲ್ಲಿ 2.8 ಲಕ್ಷ ಪ್ರಯಾಣಿಕರು, 2019 ಏಪ್ರಿಲ್‌ನಿಂದ 2020ರ ಮಾರ್ಚ್‌ ತನಕ ಕೋವಿಡ್ ಇಲ್ಲದ ಅವಧಿಯಲ್ಲಿ 2.76 ಲಕ್ಷ ಪ್ರಯಾಣಿಕರು ನಿಲ್ದಾಣಕ್ಕೆ ಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+