72, 16, 237.31, 440, 1,000, 776, 2026.. ಕೊನೆಗೂ ಸೀಕ್ರೆಟ್ ರಿವೀಲ್ ಮಾಡಿದ ಯೂನಿವರ್ಸಲ್ ಬೇಬಿ ಬಾಸ್ ವೈಭವ್ ಸೂರ್ಯವಂಶಿ
Vaibhav Sooryavanshi: ಐಪಿಎಲ್ 2026ರ ಟೂರ್ನಿ ಮುಕ್ತಾಯವಾಗಿದ್ದರೂ ಸಹ ವೈಭವ್ ಸೂರ್ಯವಂಶಿ ಅವರ ಹೆಸರು ಮಾತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲಿದೆ. ಯಾಕೆಂದ್ರೆ ಈ ಸೀಸನ್‌ನಲ್ಲಿ ಅವರು ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸುವುದರ ಜೊತೆಗೆ ಅವಶ್ಯವಿದ್ದಾಗ ಜವಾಬ್ದಾರಿಯುತ ಆಟವಾಡಿ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾರೆ. ಇದೆಲ್ಲದರ ನಡುವೆ ಈ 15 ವರ್ಷದ ಬಾಲಕ ಈ ಆವೃತ್ತಿಯಲ್ಲಿ ಅತೀ ಹೆಚ್ಚು ರನ್ ಗಳಿಸಿರುವುದರ ಹಿಂದಿನ ರೋಚಕ ಸತ್ಯವೊಂದನ್ನ ರಿವೀಲ್ ಮಾಡಿದ್ದಾರೆ.
ಐಪಿಎಲ್ 2026ರ ಸೀಸನ್ ಮುಕ್ತಾಯಗೊಂಡ ಬೆನ್ನಲ್ಲೇ ಇಡೀ ಕ್ರಿಕೆಟ್ ಜಗತ್ತು ಒಬ್ಬನೇ ಒಬ್ಬ ಹುಡುಗನ ಬಗ್ಗೆ ಮಾತನಾಡುತ್ತಿದೆ. ಆತನೇ 15 ವರ್ಷದ ಯುವ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ. ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿದು ಈ ಸೀಸನ್‌ನಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ವೈಭವ್ ಬರೋಬ್ಬರಿ 776 ರನ್ ಸಿಡಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಆದರೆ ಈ ಐತಿಹಾಸಿಕ ಯಶಸ್ಸಿನ ಹಿಂದೆ ಒಂದು ರೋಚಕ ಕಥೆಯಿದೆ ಎಂಬುದನ್ನು ಸ್ವತಃ ಈ ಯುವ ಆಟಗಾರನೇ ಬಹಿರಂಗಪಡಿಸಿದ್ದಾರೆ.

700 ರನ್ ಹಿಂದಿನ ಸೀಕ್ರೆಟ್ ರಿವೀಲ್
ಐಪಿಎಲ್ ಫೈನಲ್ ಪಂದ್ಯ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಹಾರ ಮೂಲದ ವೈಭವ್ ಸೂರ್ಯವಂಶಿ ಅವರು, ತಾವಿನ್ನೂ ಟೂರ್ನಿಗೆ ಕಣಕ್ಕಿಳಿಯುವ ಮುನ್ನವೇ ದೊಡ್ಡ ಗುರಿಯೊಂದನ್ನು ಹೊಂದಿದ್ದಾಗಿ ತಿಳಿಸಿದ್ದಾರೆ. 'ಐಪಿಎಲ್ 2026ರ ಸೀಸನ್ ಆರಂಭವಾಗುವ ಮುನ್ನವೇ ನಾನು ನನ್ನ ಮೊಬೈಲ್‌ನ ನೋಟ್ಸ್‌ನಲ್ಲಿ ಒಂದು ಸಾಲನ್ನು ಬರೆದಿಟ್ಟುಕೊಂಡಿದ್ದೆ. ಅದೇನೆಂದರೆ ಈ ಬಾರಿಯ ಐಪಿಎಲ್‌ನಲ್ಲಿ ನಾನು ಕನಿಷ್ಠ 700 ರನ್ ಗಳಿಸಲೇಬೇಕು,' ಅಂತಾ ಬರೆದಿದ್ದೆ ಅಂತಾ ಹೇಳಿದ್ದಾರೆ.
'ಪ್ರತಿ ಪಂದ್ಯ ಮುಗಿದ ನಂತರವೂ ನಾನು ನನ್ನ ಫೋನ್ ತೆರೆದು ಆ ನೋಟ್ಸ್ ಅನ್ನು ನೋಡುತ್ತಿದ್ದೆ. ನನಗಿನ್ನು ಎಷ್ಟು ರನ್ ಬೇಕು ಎಂದು ಲೆಕ್ಕಾಚಾರ ಹಾಕುತ್ತಾ ನನ್ನನ್ನು ನಾನೇ ನಿರಂತರವಾಗಿ ಪ್ರೇರೇಪಿಸಿಕೊಳ್ಳುತ್ತಿದ್ದೆ,' ಎಂದು ಆರ್‌ಆರ್ ತಂಡದ ಸ್ಫೋಟಕ ಬ್ಯಾಟರ್ 15 ವರ್ಷದ ವೈಭವ್ ಸೂರ್ಯವಂಶಿ ಅವರು ತಮ್ಮ ರಹಸ್ಯವನ್ನು ರಿವೀಲ್ ಮಾಡಿದ್ದಾರೆ. ಇದು ಇದೀಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ವೈಭವ್ ಸೂರ್ಯವಂಶಿ ಐತಿಹಾಸಿಕ ದಾಖಲೆಗಳು
* ಕೇವಲ 15 ವರ್ಷ ವಯಸ್ಸಿನಲ್ಲಿ ವೈಭವ್ ಸೂರ್ಯವಂಶಿ ಅವರು ಈ ಸೀಸನ್‌ನಲ್ಲಿ ಬರೆದಿರುವ ದಾಖಲೆಗಳು ನಂಬಲಸಾಧ್ಯವಾಗಿವೆ. ಟೂರ್ನಿಯ 16 ಇನ್ನಿಂಗ್ಸ್‌ಗಳಲ್ಲಿ 237.31ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 776 ರನ್ ಗಳಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಇಷ್ಟು ದೊಡ್ಡ ಸ್ಟ್ರೈಕ್ ರೇಟ್‌ನಲ್ಲಿ 700 ಪ್ಲಸ್ ರನ್ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
* ಟಿ20 ಕ್ರಿಕೆಟ್‌ನಲ್ಲಿ ಕೇವಲ 440 ಎಸೆತಗಳನ್ನು ಎದುರಿಸುವ ಮೂಲಕ ಐಪಿಎಲ್‌ನಲ್ಲಿ ಅತಿ ವೇಗವಾಗಿ 1,000 ರನ್ ಪೂರೈಸಿದ ಆಂಡ್ರೆ ರಸೆಲ್ ಅವರ ಸಾರ್ವಕಾಲಿಕ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.
* ಸಿಕ್ಸರ್‌ಗಳ ರಾಜ: ಇಡೀ ಟೂರ್ನಿಯಲ್ಲಿ ಬರೋಬ್ಬರಿ 72 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಕ್ರಿಸ್ ಗೇಲ್ ಅವರ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಒಂದೇ ಸೀಸನ್‌ನಲ್ಲಿ ಅತೀ ಹೆಚ್ಚು ಸಿಕ್ಸರ್‌ಗಳನ್ನ ಸಿಡಿಸಿದ ದಾಖಲೆಯನ್ನ ಹೊಂದಿದ್ದಾರೆ.
* ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 29 ಎಸೆತಗಳಲ್ಲಿ 97 ರನ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ 47 ಎಸೆತಗಳಲ್ಲಿ 96 ರನ್ ಚಚ್ಚಿ ಗಮನ ಸೆಳೆದಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಬಳಿಕ ಒಂದೇ ಸೀಸನ್‌ನಲ್ಲಿ ಮೂರು ಬಾರಿ 90ರ ರನ್‌ಗಳ ಹಂತದಲ್ಲಿ ಔಟಾದ ಅನ್ವಾಂಟೆಡ್ ದಾಖಲೆಗೂ ಇವರು ಪಾತ್ರರಾಗಿದ್ದಾರೆ.
ವೈಭವ್ ಕಲಿತ ಮಹತ್ವದ ಪಾಠಗಳು
ತಮ್ಮ ಬ್ಯಾಟಿಂಗ್ ಶೈಲಿಯ ಬಗ್ಗೆ ಮಾತನಾಡಿದ ವೈಭವ್ ಸೂರ್ಯವಂಶಿ ಅವರು, 'ಈ ಸೀಸನ್ ನನಗೆ ಕೇವಲ ರನ್ ಗಳಿಸುವುದನ್ನು ಮಾತ್ರ ಕಲಿಸಿಲ್ಲ. ಬದಲಿಗೆ ಒತ್ತಡದ ಸಂದರ್ಭಗಳಲ್ಲಿ ಪರಿಸ್ಥಿತಿಗೆ ತಕ್ಕಂತೆ ಪಂದ್ಯವನ್ನು ಹೇಗೆ ಬದಲಾಯಿಸಬೇಕು ಎಂಬುದನ್ನು ಕಲಿಸಿಕೊಟ್ಟಿದೆ. ಪ್ರತಿ ಪಂದ್ಯಕ್ಕೂ ಒಂದೇ ಮೈಂಡ್‌ಸೆಟ್‌ನೊಂದಿಗೆ ಹೋಗಲು ಸಾಧ್ಯವಿಲ್ಲ. ತಂಡಕ್ಕೆ ಏನು ಅಗತ್ಯವಿದೆಯೋ ಅದನ್ನು ಅರ್ಥಮಾಡಿಕೊಂಡು ಆಡುವುದನ್ನು ನಾನು ಪ್ಲೇಆಫ್ ಪಂದ್ಯಗಳಲ್ಲಿ ಕಲಿತಿದ್ದೇನೆ,' ಎಂದು ಹೇಳಿದ್ದಾರೆ.
ಅಲ್ಲದೆ ದೀರ್ಘಕಾಲದವರೆಗೆ ದೇಶಕ್ಕಾಗಿ ಕ್ರಿಕೆಟ್ ಆಡಲು ಮತ್ತು ಗಾಯಗಳಿಂದ ದೂರವಿರಲು ತಮ್ಮ ಫಿಟ್‌ನೆಸ್ ಕಡೆಗೆ ಈಗ ಹೆಚ್ಚು ಗಮನ ಹರಿಸುತ್ತಿರುವುದಾಗಿ ಈ ಯೂನಿರ್ವರ್ಸಲ್ ಬೇಬಿ ಬಾಸ್ ತಿಳಿಸಿದ್ದಾರೆ. ಶೀಘ್ರದಲ್ಲೇ ನಡೆಯಲಿರುವ ಭಾರತ ಎ ಪ್ರವಾಸಕ್ಕೂ ಮುನ್ನ ವೈಭವ್ ಅವರ ಈ ಮಾತುಗಳು ಭಾರತೀಯ ಕ್ರಿಕೆಟ್‌ನ ಭವಿಷ್ಯ ಸುರಕ್ಷಿತವಾಗಿ ಎಂಬುದನ್ನು ಸಾಬೀತುಪಡಿಸಿದೆ. ಒಟ್ಟಿನಲ್ಲಿ ವೈಭವ್ ಈ ಬಾರಿ ಐಪಿಎಲ್‌ನಲ್ಲಿ 700ಕ್ಕೂ ಅಧಿಕ ರನ್ ಸಿಡಿಸಿರುವ ಬಗ್ಗೆ ಮಾಹಿತಿಯನ್ನು ರಿವೀಲ್ ಮಾಡಿರುವುದು ಇದೀಗ ಸಖತ್ ಸದ್ದು ಮಾಡುತ್ತಿದೆ. ಅದೇನೆ ಇರಲಿ ಇವರು ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎನ್ನುವುದೇ ಎಲ್ಲರ ಆಶಯವಾಗಿದೆ.
72, 16, 237.31, 776, 440, 1,000, 2026ರ ಅರ್ಥ
* 2026: ಈ ವರ್ಷದ ವೈಭವ್ ಐಪಿಎಲ್ ಸಾಧನೆ
* ಸಿಕ್ಸ್: 72
* ಇನ್ನಿಂಗ್ಸ್: 16
* ಸ್ಟ್ರೈಕ್ ರೇಟ್: 237.31
* ಈ ಸೀಸನ್‌ನ ರನ್: 776
* ಟಿ20 ಕ್ರಿಕೆಟ್‌ನಲ್ಲಿ ಕೇವಲ 440 ಎಸೆತಗಳಲ್ಲಿ 1,000 ರನ್‌ಗಳ ದಾಖಲೆ












Click it and Unblock the Notifications