ಹುಬ್ಬಳ್ಳಿ; ಜುಲೈ 1ರಿಂದ ಹಲವು ವಿಮಾನ ಸಂಚಾರ ಪುನರಾರಂಭ

ಹುಬ್ಬಳ್ಳಿ, ಜೂನ್ 28; ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಸಿಹಿಸುದ್ದಿ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹಲವು ವಿಮಾನಗಳ ಸೇವೆಯು ಜುಲೈ 1ರಿಂದ ಪುನರಾರಂಭವಾಗಲಿದೆ.

ಕೋವಿಡ್ ಹರಡುವಿಕೆ ತಡೆಯಲು ಲಾಕ್‌ಡೌನ್ ಘೋಷಣೆ ಮಾಡಿದ ಕಾರಣಕ್ಕೆ ಪ್ರಯಾಣಕರ ಕೊರತೆಯಿಂದ ಹಲವು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಈಗ ಕರ್ನಾಟಕದಲ್ಲಿ ಲಾಕ್‌ಡೌನ್ ತೆರವುಗೊಳಿಸಿರುವುದರಿಂದ ವಿಮಾನ ಹಾರಾಟ ಮತ್ತೆ ಆರಂಭವಾಗುತ್ತಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯದ ಪ್ರಮುಖ ನಗರಗಳಿಗೆ ವಿಮಾನಗಳು ಸಂಚಾರ ನಡೆಸುತ್ತದೆ. ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಮಾನ ನಿಲ್ದಾಣ ಹುಬ್ಬಳ್ಳಿಯಾಗಿದೆ.

Indigo And Alliance Air Flight Service Resume From Hubballi

ಜುಲೈ 1 ಮತ್ತು 9ರಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹಲವು ವಿಮಾನಗಳ ಸೇವೆ ಪುನರಾರಂಭವಾಗಲಿದೆ. ವಿಮಾನಯಾನ ಸಂಸ್ಥೆಗಳ ವೆಬ್‌ಸೈಟ್ ಮೂಲಕ ಜನರು ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಯಾವ-ಯಾವ ವಿಮಾನಗಳು; ಇಂಡಿಗೋ ವಿಮಾನಯಾನ ಸಂಸ್ಥೆ ಜುಲೈ 1ರಿಂದ ಹುಬ್ಬಳ್ಳಿ - ಮುಂಬೈ, ಹುಬ್ಬಳ್ಳಿ - ಚೆನ್ನೈ, ಹುಬ್ಬಳ್ಳಿ - ಬೆಂಗಳೂರು, ಹುಬ್ಬಳ್ಳಿ - ಕಣ್ಣೂರ್, ಹುಬ್ಬಳ್ಳಿ - ಕೊಚ್ಚಿ, ಹುಬ್ಬಳ್ಳಿ - ಗೋವಾ ಸಂಚಾರ ಆರಂಭಿಸಲಿದೆ. ಆಗಸ್ಟ್ 2ರಿಂದ ಹುಬ್ಬಳ್ಳಿ - ಅಹಮದಾಬಾದ್ ವಿಮಾನ ಆರಂಭವಾಗಲಿದೆ.

ಅಲಯನ್ಸ್ ಏರ್ ಸಂಸ್ಥೆ ಜುಲೈ 9ರಿಂದ ಹುಬ್ಬಳ್ಳಿ - ಹೈದರಾಬಾದ್ ವಿಮಾನ ಸಂಚಾರವನ್ನು ಪುನರಾರಂಭ ಮಾಡಲಿದೆ. ಪ್ರಯಾಣಿಕರ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್, ಸಮಯದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+