ರಷ್ಯಾದ ಯುವಕನ ಜೊತೆ ಸಪ್ತಪದಿ ತುಳಿದ ಹಾಸನದ ಯುವತಿ!

By: ಹಾಸನ ಪ್ರತಿನಿಧಿ
Subscribe to Oneindia Kannada

ಹಾಸನ, ಡಿಸೆಂಬರ್. 04 : ಪ್ರೀತಿಗೆ ಜಾತಿ, ದೇಶ ಅಡ್ಡಿ ಬರುವುದಿಲ್ಲ ಎನ್ನುವಂತೆ ಮನೆಯವರ ಸಮ್ಮತಿ ಮೇರೆಗೆ ನಗರದಲ್ಲಿ ರಷ್ಯಾದ ವರನ ಜೊತೆ ಹಾಸನ ಜಿಲ್ಲೆಯ ವಧು ಹಿಂದೂ ಸಂಪ್ರದಾಯದಂತೆ ಭಾನುವಾರ ಸಪ್ತಪದಿ ತುಳಿದಿದ್ದಾಳೆ.

ಹಾಸನದ ಅರಸೀಕೆರೆ ತಾಲೂಕು ಬಾಗೀವಾಳು ಗ್ರಾಮದ ಪುನಿತಾ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು ಐರ್ಲೆಂಡ್‍ನಲ್ಲಿ ನೆಲೆಸಿದ್ದಾರೆ. ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ನಿವಾಸಿಯಾಗಿರುವ ಕುಚಿರೊವ್ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, ಯಾವುದೋ ಒಂದು ಘಳಿಗೆಯಲ್ಲಿ ಇವರಿಬ್ಬರ ನಡುವೆ ಪ್ರೀತಿ ಚಿಗುರಿ ಈಗ ಸತಿಪತಿಗಳಾಗಿದ್ದಾರೆ.

ಭಾನುವಾರ ಇವರಿಬ್ಬರ ವಿವಾಹ ಭಾರತೀಯ ಹಿಂದೂ ಸಂಸ್ಕೃತಿಯ ಪ್ರಕಾರ ನಡೆದಿದೆ. ಈ ಶುಭವಿವಾಹಕ್ಕೆ ಎರಡು ಕಡೆಯ ಕುಟುಂಬದವರು ಸಾಕ್ಷಿಯಾಗಿ ನವಜೋಡಿಗಳಿಗೆ ಶುಭ ಹಾರೈಸಿದರು.

Russian boy falls in love with an Hassan girl gets married

ಇಷ್ಟಕ್ಕೂ ಹಾಸನದ ಹುಡುಗಿಗೂ ರಷ್ಯಾದ ಹುಡುಗನಿಗೂ ಎಲ್ಲಿಯ ಸಂಬಂಧ ಎಂಬ ಅಚ್ಚರಿ ಎಲ್ಲರನ್ನು ಕಾಡಬಹುದು. ಆದರೆ ಅವರಿಬ್ಬರನ್ನು ಒಂದೆಡೆ ಸೇರಿಸಿದ್ದು ಸಂಗೀತ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ.

ಸಂಗೀತಗಾರನಾಗಿರುವ ಡೆನ್ನಿಸ್ ಅವರು ತನ್ನ 17ನೇ ವಯಸ್ಸಿನಿಂದಲೇ ಭಾರತಕ್ಕೆ ಬರುತ್ತಿದ್ದರು. ಅಲ್ಲದೆ ದೇಶದ ಅನೇಕ ಕಡೆ ಸಂಗೀತ ಕಾರ್ಯಕ್ರಮ ನೀಡಿದ್ದರು. ಈ ನಡುವೆ ಪುನೀತಾಗೂ ಸಂಗೀತದಲ್ಲಿ ಆಸಕ್ತಿ ಇದ್ದುದರಿಂದ ಡೆನ್ನಿಸ್ ಅವರ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತು.

ಇವರಿಬ್ಬರು ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮೊದಲಿಗೆ ಇವರಿಬ್ಬರ ಪ್ರೀತಿಗೆ ಹುಡುಗಿ ಮನೆಯವರು ಸಮ್ಮತಿಸಿರಲಿಲ್ಲ. ಆದರೆ ಕ್ರಮೇಣ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಎರಡು ಕುಟುಂಬದ ಕಡೆಯವರ ಸಮ್ಮತಿ ಮೇರೆಗೆ ವಿವಾಹ ನಡೆದು ಪ್ರೇಮಿಗಳು ಸತಿಪತಿಗಳಾಗಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Russian boy falls in love with an Hassan girl gets married on Sunday, December 04, at Hassan.
Please Wait while comments are loading...