ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗದಲ್ಲಿ ಮಳೆಗೆ ಮನೆಯ ಗೋಡೆ ಕುಸಿತ: ಮಹಿಳೆ ಸಾವು

By Nayana
|
Google Oneindia Kannada News

ಗದಗ, ಜೂನ್ 05: ಮುಂಗಾರು ರಾಜ್ಯಾದ್ಯಂತ ಚುರುಕುಗೊಂಡಿದೆ ಉತ್ತರ ಕರ್ನಾಟಕದ ಕೆಲವೆಡೆ ಭಾರಿ ಮಳೆಯಾಗುತ್ತಿದೆ.ಸುರಿಯುತ್ತಿರುವ ಭಾರಿ ಮಳೆಗೆ ಮನೆಗೋಡೆ ಕುಸಿದು ಮಹಿಳೆ ಮೃತಪಟ್ಟಿರುವ ಘಟನೆ ಗದಗದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಮಲ್ಲವ್ವ ಜಲಾಲ್‌(55) ಮೃತರು. ಈ ಘಟನೆ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನಡೆದಿದೆ. ರಾತ್ರಿ ಮಲಗಿದ್ದ ವೇಳೆ ಮಹಿಳೆ ಮೇಲೆ ಗೋಡೆ ಕುಸಿದಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಗೆ ನೆನೆದಿದ್ದ ಮಣ್ಣಿನ ಗೋಡೆ ಕುಸಿದಿದೆ, ಮಂಗಳವಾರ ಬೆಳಗಿನ ಜಾವ ಮಹಿಳೆ ಶವವನ್ನು ಗ್ರಾಮಸ್ಥರು ಹೊರ ತೆಗೆದಿದ್ದಾರೆ. ಗದಗ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Stranded woman dies after house collapse

ನೈಋತ್ಯ ಮುಂಗಾರು ಕರ್ನಾಟಕವನ್ನು ಪ್ರವೇಶಿಸಿರುವ ಕಾರಣ ಬೆಂಗಳೂರು, ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ಹಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗ್ರಾಮೀಣ ಭಾಗದ ಜನ ತುಂಬಾ ಎಚ್ಚರಿಕೆಯಿಂದರಬೇಕಾಗಿದೆ.

English summary
A 55 years old woman died after house collapsed last late night due to heavy rain in Timmapur village of Gadag district. Villagers have tried to rescue the woman who was stranded in collapsed house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X