Heavy rain: 2024ರಲ್ಲಿ ಇದೇ ಮೊದಲ ಬಾರಿ ರಾಜ್ಯದ ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ.!
Heavy rain: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಇದರ ನಡವೆಯೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಯುಗಾದಿ ಹಬ್ಬದ ಬಳಿಕ ಹಲವು ಜಿಲ್ಲೆಗಳಲ್ಲಿ ನಿಧಾನಗತಿಯಾಗಿ ಮಳೆರಾಯ ಬೇರೂರುತ್ತಿದ್ದಾನೆ. ಮತ್ತೊಂದೆಡೆ ಮುಂದಿನ 3 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಈ ಜಿಲ್ಲೆಗಳಿಗೆ 2024ರಲ್ಲಿ ಮೊದಲ ಬಾರಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಇಷ್ಟು ದಿನ ಬರೀ ಬಿಸಿಲಿನ ಬೇಗೆಗೆ ಬೆಂದಿದ್ದ ಹಲವು ಜಿಲ್ಲೆಗಳಿಗೆ ಇದೀಗ ಮಳೆರಾಯ ತಂಪೆರೆದಿದ್ದಾನೆ. ಇನ್ನು ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಈ ವರ್ಷದಲ್ಲಿ ಮೊದಲ ಬಾರಿಗೆ ರಾಜ್ಯದ ಬಳ್ಳಾರಿ, ದಾವಣಗೆರೆ, ಗದಗ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ರಾಜ್ಯದಲ್ಲಿ ಮಳೆ ಇಲ್ಲ.. ಮಳೆ ಇಲ್ಲ.. ಬರೀ ಬಿಸಿಲು ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಇನ್ನು ಇದೀಗ ಇಷ್ಟು ದಿನ ಮುನಿಸಿಕೊಂಡಿದ್ದ ಮಳೆರಾಯ ಇದೀಗ ರಾಜ್ಯದಲ್ಲಿ ಅಲ್ಲಲ್ಲಿ ತಂಪೆರೆಯುತ್ತಾ ಬರುತ್ತಿದ್ದಾನೆ. ಇದರಿಂದ ಜನರ ಮುಖದಲ್ಲಿ ತುಸು ಸಂತಸ ಮೂಡಿದಂತಾಗಿದೆ.
ಶಿವಮೊಗ್ಗ ಜಿಲ್ಲೆಯ ಹಲವೆಡೆ ಭಾರೀ ಮಳೆ: ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ ತಾಲೂಕುಗಳಲ್ಲಿ ಭಾರೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನ ವಿವಿಧೆಡೆ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಹಾಗೆಯೇ ಮಡಿಕೇರಿ ನಗರದ ಕೆಲವು ಭಾಗಗಳಲ್ಲಿ ಮಳೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾಪೊಕ್ಲು, ಬೇತು, ಚೆರಿಯಪರಂಬು, ಕೊಳಕೇರಿ ಎಮ್ಮೆಮಾಡು, ನೆಲಜಿ ಬಲ್ಲಮಾವಟಿ, ಪಾರಾಣೆ, ಕೈಕಾಡು ಹೊದ್ದೂರು, ಮೂರ್ನಾಡು, ಮೇಕೇರಿ ಸೇರಿದಂತೆ ಹಲವೆಡೆ ಮಳೆರಾಯ ತಂಪೆರೆದಿದ್ದಾನೆ ಎಂದು ತಿಳಿದುಬಂದಿದೆ.
ರೆಡ್ ಅಲರ್ಟ್: ಮುಂದಿನ 3 ಗಂಟೆಗಳಲ್ಲಿ ಬಳ್ಳಾರಿ, ದಾವಣಗೆರೆ, ಗದಗ, ಕೊಪ್ಪಳದ ಕೆಲವೆಡೆ ಮೇಲ್ಮೈ ಗಾಳಿಯೊಂದಿಗೆ ತೀವ್ರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
— Karnataka State Natural Disaster Monitoring Centre (@KarnatakaSNDMC) April 12, 2024
Source- IMD. Bengaluru
Issued by: KSDMA
Validity Time: 12 Apr, 19:00 to 12 Apr, 22:00#RedAlert @KarnatakaVarthe pic.twitter.com/Q7xArBLdmT












Click it and Unblock the Notifications