Jowar Price update: ಬರಗಾಲದಲ್ಲಿ ರೈತರನ್ನು ಸಂಕಷ್ಟಕ್ಕೆ ತಳ್ಳಿದ 'ಜೋಳ' ಬೆಲೆ ಕುಸಿತ
ಗದಗ, ಮಾರ್ಚ್ 14: ಉತ್ತರ ಕರ್ನಾಟಕ ಭಾಗದಲ್ಲಿ ಜೋಳ (Jowar) ಬೆಳೆಯುವ ರೈತರು ಫಸಲು ಕಟಾವು ಮಾಡಿ ಮಾರುಕಟ್ಟೆಗೆ ತರುವ ಹೊತ್ತಿನಲ್ಲೇ ಬೆಲೆ ದಿಢೀರ್ ಕುಸಿತವಾಗಿದೆ. ಇದು ಗದಗ ಮಾರುಕಟ್ಟೆಯಲ್ಲೂ ಆಗಿದ್ದು, ರೈತರು ಕಂಗಾಲಾಗಿದ್ದಾರೆ.
ಈ ಹಿಂದಿನ ಹತ್ತು ದಿನಗಳಿಂದ ಜೋಳದ ಬೆಲೆ ಏಕಾಎಕಿ ಇಳಿಕೆಯಾಗಿದೆ. ಬ್ಯಾಡಗಿಯ ಕೆಂಪು ಮೆಣಸಿನಕಾಯಿ ಬೆಲೆ ಕುಸಿತ ಘಟನೆಯಿಂದ ಆರ್ಥಿಕ ಸಂಕಷ್ಟ ನೋಡುತ್ತಿರುವ ರೈತರಂತೆ ಜೋಳ ಬೆಳೆಗಾರರಿಗೆ ಅಧಿಕ ಲಾಭದ ನಿರೀಕ್ಷೆ ಹುಸಿಯಾಗಿದೆ. ಬರಗಾಲ ಪರಿಸ್ಥಿತಿ ಮಧ್ಯೆ ರೈತರು ಬೆಲೆ ಇಳಿಕೆಯ ನೋವು ಸಹಿಸಿಕೊಳ್ಳಬೇಕಾಗಿದೆ ಎಂದು TNIE ವರದಿ ಮಾಡಿದೆ.

ರೈತರ ನಿದ್ದೆಗೆಡಿಸಿ ಬೆಲೆ ಕುಸಿತ
ಮಾರುಕಟ್ಟೆಗಳಲ್ಲಿ ಬಿಳಿ ಮತ್ತು ಹೈಬ್ರೀಡ್ ಜೋಳದ ಪ್ರತಿ ಕ್ವೀಂಟಾಲ್ ದರವು ಸುಮಾರು 7,000 ರಿಂದ 8,000 ರೂಪಾಯಿ ಇತ್ತು. ಕೆಲವೇ ದಿಗನಳಲ್ಲಿ ಕ್ವಿಂಟಾಲ್ ಜೋಳದ ಪ್ರಸ್ತುತ ಬೆಲೆ ಕೇವಲ 2,500 ನಿಂದ 3,500 ರೂಪಾಯಿಗೆ ಕುಸಿತಗೊಂಡಿರುವುದು ರೈತರ ನಿದ್ದೆಗೆಡಿಸಿದೆ.
ಹಿಂಗಾರು ಮಳೆಗೆ ಬಿತ್ತನೆಗೊಳ್ಳುವ ಈ ಜೋಳವು ಬಂದ ಅಲ್ಪ ಪ್ರಮಾಣದ ಮಳೆಯಿಂದ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ರೈತರು ಹೆಚ್ಚು ಜೋಳವನ್ನು ಮಾರುಕಟ್ಟೆಗೆ ತರುವುದನ್ನು ಮುಂದುವರಿಸಿದ್ದರಿಂದ ಬೆಲೆಗಳು ದಿಡೀರನೆ ಇಳಿಮುಖ ಕಂಡಿವೆ.

ಜೋಳವೇ ಪ್ರಮುಕ ಆಹಾರ ಬೆಳೆ
ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ರಾಬಿ ಬೆಳೆಗಳಲ್ಲಿ ಜೋಳ ಸಹ ಪ್ರಮುಖ ಬೆಳೆಯಾಗಿ ಗುರುತಿಸಿಕೊಂಡಿದೆ. ಈ ಭಾಗದ ಜಿಲ್ಲೆಗಳಿಗೆ ಜೋಳವೇ ಪ್ರಮುಖ ಆಹಾರ ಬೆಳೆಯಾಗಿದೆ.
ಈ ಜೋಳವನ್ನು ಕೊಪ್ಪಳ, ಹಾವೇರಿ, ಗದಗ, ಬೀದರ್, ಧಾರವಾಡ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಬರಗಾಲದ ನಡುವೆ ಹೆಚ್ಚಾಗಿದ್ದ ಜೋಳದ ಬೆಲೆ ಕಂಡು ಸಾಕಷ್ಟು ರೈತರು ಉತ್ತಮ ಬೆಲೆ ಸಿಗುವ, ಈ ಬಾರಿ ಆದಾಯ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದರು.
ಬೇರೆಡೆ ಮಾರಾಟಕ್ಕೆ ಸಾಗಾಣೆ ವೆಚ್ಚದ ಹೊಡೆತ
ಉತ್ತರ ಕರ್ನಾಟಕ ಭಾಗದಲ್ಲಿ ಬಿಳಿ ಜೋಳ, ಮೆಣಸಿನಕಾಯಿ ಬೆಳೆ ಬೆಳೆದ ರೈತರು ಸರತಿಯಾಗಿ ಬೆಲೆ ಕುಸಿತದಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕೆಲವು ರೈತರು ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 4,000 ರೂ.ಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾದರೂ ಸಹ ಅವರಿಗೆ ಸಾಗಾಣೆ ವೆಚ್ಚದ ಹೊರೆ ಬೀಳುತ್ತದೆ.
ಹೆಚ್ಚು ಸಾಗಾಣೆ ವೆಚ್ಚಕೊಟ್ಟರು ಬೆಲೆ ಅಲ್ಲಿಗಲ್ಲಿಗೆ ಸರಿಹೋಗುತ್ತದೆ. ಬರಗಾಲದಲ್ಲಿ ರೈತರ ಭವಿಷ್ಯ ಏನು ಎಂಬಂತಾಗಿದೆ. ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ತಮ್ಮ ಜೋಳವನ್ನು ಗೋದಾಮಿನಲ್ಲಿ ಸಂಗ್ರಹಿಡುವ ಕೆಲಸವು ಆಗುತ್ತಿದೆ.
ಉತ್ತಮ ಬೆಲೆಗಾಗಿ ಜೋಳ ದಾಸ್ತಾನು
ಜೋಳದ ಚೀಲ ಸಮೇತ ಮಾರುಕಟ್ಟೆಗೆ ಮಾರಾಟ ಬಂದಿದ್ದ ಗದಗ ರೈತರೊಬ್ಬರು, ಮಾರುಕಟ್ಟೆಯಲ್ಲಿ ಜೋಳಕ್ಕೆ ಕ್ವಿಂಟಾಲ್‌ಗೆ 2200 ರೂಪಾಯಿ ಇದೆ. ಇದೇ ದರ ಬಳ್ಳಾರಿ, ಬೆಂಗಳೂರು ಮತ್ತು ಕೊಪ್ಪಳ ಮಾರುಕಟ್ಟೆಯಲ್ಲೂ ಇದೇ. ಮುಂದಿನ ದಿನಗಳಲ್ಲಿ ಮತ್ತೆ ಒಳ್ಳೆಯ ಬೆಲೆ ಬರಬಹುದು, ನಾವು ಆರ್ಥಿಕವಾಗಿ ಸದೃಢವಾಗಬಹುದು ಎಂದು ರೈತರು ತಮ್ಮ ಜೋಳವನ್ನು ಸಂಗ್ರಹಿಸಿಡುತ್ತಿದ್ದಾರೆ.
ಆದರೆ ಸಣ್ಣ ರೈತರಿಗೆ ಹೀಗೆ ಸಂಗ್ರಹಿಸಿ ಇಡಲು ಕಷ್ಟವಾಗುತ್ತಿದೆ. ಆದ್ದರಿಂದ ಅವರು ಹಾಲಿ ಬೆಲೆಗೆ ಮಾರಾಟ ಮಾಡಿ ನಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕದ ಅನೇಕ ರೈತರನ್ನು ಬರ ಕಾಡಿದೆ. ಗದಗ ರೈತರು ಖಾರಿಫ್ ಮತ್ತು ರಬಿ ಎರಡೂ ಬೆಳೆಗಳಲ್ಲಿ ರೈತರು ನಷ್ಟ ಎದುರಿಸಿದ್ದಾರೆ.
ಬಿತ್ತನೆ ಮುನ್ನ ಕೃಷಿ ಇಲಾಖೆ ಸಂಪರ್ಕಿಸಿ
ರೈತರು ತಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಉತ್ತಮ ಗುಣಮಟ್ಟದ ಬೀಜಗಳನ್ನು ಪಡೆಯುವ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಪಡೆಯಬಹುದು. ಬರ ಪರಿಸ್ಥಿತಿಗಳು ಅನಿವಾರ್ಯ, ಆದರೆ ಬಿತ್ತನೆ ಮಾಡುವ ಮೊದಲು ರೈತರು ನಮ್ಮನ್ನು ಭೇಟಿ ಮಾಡಿದರೆ ನಾವು ಅವರಿಗೆ ಸಹಾಯ ಮಾಡುತ್ತೇವೆ ಎಂದು ಗದಗದ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.












Click it and Unblock the Notifications