Get Updates
Get notified of breaking news, exclusive insights, and must-see stories!

ಸೈಕಲ್‌ ಮೇಲೆ ಪ್ರಪಂಚ ಪರ್ಯಟನೆ ಮಾಡುತ್ತಿರುವ ತಮಿಳುನಾಡಿನ 'ಅಪ್ಪು' ಅಭಿಮಾನಿ

ಗದಗ, ಫೆಬ್ರವರಿ 06: ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟರ ಮೇಲೆ ಎಲ್ಲಿಲ್ಲದ ಅಭಿಮಾನ ಇರುತ್ತವೆ. ಕೆಲವರಂತೆ ತಮ್ಮ ನಟರನ್ನೇ ದೇವರಂತೆ ಕಂಡ, ಅವರಿಂದ ಪ್ರೇರಣೆಗೊಂಡು ಬದುಕಿನಲ್ಲಿ ಸಾಧನೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಇದೀಗ ಇಂತದ್ದೆ ಅಭಿಮಾನಿಯೊಬ್ಬರು 'ಅಪ್ಪು' ಅವರ ಹೆಸರಿನಲ್ಲಿ ಪ್ರಪಂಚ ಪರ್ಯಟನೆ ಆರಂಭಿಸಿದ್ದಾರೆ

ಇದರಲ್ಲೇನು ವಿಶೇಷತೆ ಇದೆ ಎನ್ನುವವರು ಪೂರ್ತಿ ಓದಬೇಕು. ಏಕೆಂದರೆ ಕೈಯಲ್ಲಿದ್ದ ಕೆಲಸ ಬಿಟ್ಟು, ಸೈಕಲ್ ಮೇಲೆ ವಿಶ್ವಪರ್ಯಟನೆ ಮಾಡಲು ದಿವಂಗತ ನಟ ಪುನೀತ್ ರಾಜ್ ಕುಮಾರ್ (Puneeth Raj Kumar) ಅಭಿಮಾನಿ ನಿರ್ಧರಿಸಿದ್ದಾರೆ.

TN fan of Puneeth Rajkumar He Started World Bicycle Tour: Target to Make Guinness World Record

ಕರ್ನಾಟಕದ ಕನ್ನಡ ನಟ ಪುನೀತ್ ರಾಜ್ ಕುಮಾರ್ ಅಜಾತಶತ್ರು. ಅವರು ತಮ್ಮ ವ್ಯಕ್ತಿತ್ವ, ಸಮಾಜಸೇವೆ, ನಟನೆ, ನಗುವಿನಿಂದಲೇ ಕೋಟ್ಯಾನು ಕೋಟಿ ಅಭಿಮಾನಿಗಳ ಮನ ಗೆದ್ದವರು. ನಟನೆ ಮತ್ತು ಅಭಿಮಾನಕ್ಕೆ ರಾಜ್ಯ, ಪ್ರಾಂತ್ಯಗಳ ಗಡಿ ಇಲ್ಲ ಎಂಬುದು 'ಅಪ್ಪು' ಅವರ ಅಗಲಿಕೆ ಬಳಿಕ ಸಾಬೀತಾಗಿದೆ.

ಡಿ.21ರಂದು ಸವಾರಿ ಆರಂಭ: ಯಾವೆಲ್ಲ ದೇಶ ಕವರ್?

ಕಳೆದ ವರ್ಷ 2023 ಡಿಸೆಂಬರ್ 21ರಲ್ಲಿ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿಯಿಂದ ಸವಾರಿ ಆರಂಭಿಸುವ ಮೂಲಕ ವಿಶ್ವವ್ಯಾಪಿ ಸಂಚಾರಕ್ಕೆ ಅವರು ಚಾಲನೆ ನೀಡಿದ್ದಾರೆ. ಅವರ ಹೆಸರು ಮುತ್ತು ಸೆಲ್ವನ್ (26). ಇವರು ಮೂಲತಃ ಕೊಯಮತ್ತೂರು ಮೂಲದವರು. ಅಪ್ಪು ಅವರ ಅಭಿಮಾನಿಯಾಗಿರುವ ಇವರು ಭಾರತ, ಚೀನಾ, ವಿಯೆಟ್ನಾಂ ಮತ್ತು ಇತರ ದೇಶಗಳನ್ನು ಸೈಕಲ್‌ ಮೇಲೆಯ ತಲುಪಿ ಬರಲು ಪ್ರವಾಸ ಕೈಗೊಂಡಿದ್ದಾರೆ.

ಗಿನ್ನಿಸ್ ವಿಶ್ವ ದಾಖಲೆಯ ಗುರಿ ಹೊಂದಿರುವ ಅಭಿಮಾನಿ

ಕಳೆದ ಡಿಸೆಂಬರ್ ನಲ್ಲಿ ತಮ್ಮೂರಿನಿಂದ ಪ್ರವಾಸ ಆರಂಭಿಸಿರುವ ಇವರು ಇದೀಗ ಕರ್ನಾಟಕದ ಗದಗ ಜಿಲ್ಲೆಗೆ ಶನಿವಾರ ಆಗಮಿಸಿದ್ದಾರೆ. ಇವರು ಸೆಲ್ವನ್ ಎಂಬಿಎ ಮತ್ತು ಬಯೋ-ಮೆಡಿಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವಿಶ್ವಪರ್ಯಟನೆ ಪ್ರಯವಾಸ ಸಂಬಂಧ ಕೈಯಲ್ಲಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮನೆ ತೊರೆದಿದ್ದಾರೆ. ಸೈಕಲ್‌ನಲ್ಲಿ ಪ್ರಯಾಣ ಮಾಡಿ ವಿಶ್ವ ಗಿನ್ನಿಸ್ ದಾಖಲೆ ಬರೆಯಲು ನಿರ್ಧರಿಸಿದ್ದಾರೆ.

ಸೆಲ್ವನ್ ಅವರ ಸೈಕಲ್‌ ಮೇಲೆ ರಾಷ್ಟ್ರಧ್ವಜ ಜತೆಗೆ ಅಪ್ಪು ಅವರ ಭಾವಚಿತ್ರ ಅವಳಡಿಸಿದ್ದಾರೆ. ಅಪ್ಪು ಟೀಶರ್ಟ್-ಬಟ್ಟೆ ಧರಿಸಿದ್ದಾರೆ. ಇದೆಲ್ಲ ನೋಡುತ್ತಿದ್ದರೆ ಸೆಲ್ವನ್ 'ಅಪ್ಪು' ಅವರ 'ಗುಣ', ವ್ಯಕ್ತಿತ್ವ, ಸಾಮಾಜಿಕ ಸೇವೆಗಳನ್ನು ಪ್ರಪಂಚಕ್ಕೆ ತಲುಪಿಸಲು ಹೊರಟಿದ್ದಾರೆ ಎಂಬದು ಗೊತ್ತಾಗಿ ಬಿಡುತ್ತದೆ.

ಪ್ರಯಾಣದ ದಿನಚರಿ ಹೇಗಿರಲಿದೆ?

ಸೆಲ್ವನ್ ತಮ್ಮ ಪ್ರಯಾಣದಲ್ಲಿ ಪೆಟ್ರೋಲ್ ಬಂಕ್‌ಗಳು, ಮಠಗಳು ಮತ್ತು ಕ್ರೀಡಾಂಗಣಗಳಲ್ಲಿ ಮಲಗುತ್ತಾರೆ. ತಮಗಾಗಿ ತಾವೇ ಆಹಾರ ತಯಾರಿಸುತ್ತಾನೆ. ಅದಕ್ಕಾಗಿ ಅವರು 150 ಕೆಜಿ ತೂಕದ ಸಾಮಾನುಗಳನ್ನು ಜತೆ ಒಯ್ಯುತ್ತಿದ್ದಾರೆ. ಅದರಲ್ಲಿ ಆಹಾರ ಪದಾರ್ಥಗಳು, ಅಗತ್ಯ ವಸ್ತುಗಳು ಇವೆ. ಸೆಲ್ವನ್ ಅವರು ಬೆಳಗ್ಗೆಯಿಂದ ಸಂಜೆವರೆಗೆ ಸೈಕಲ್ ತುಳಿಯಲಿದ್ದಾರೆ.

'ನಾನು ಅಪ್ಪು ಅವರ ಅಭಿಮಾನಿ. ಮತ್ತು ಅವರ ವ್ಯಕ್ತಿತ್ವ, ಜೀವನ ಮತ್ತು ಸಾಧನೆಗಳ ಬಗ್ಗೆ ಜನರಿಗೆ ತಿಳಿಸುತ್ತೇನೆ. ಅಮೆರಿಕದ ಲಿಖಲ್ ಅವರು 752 ದಿನಗಳಲ್ಲಿ ವಿಶ್ವ ಪ್ರವಾಸವನ್ನು (ಕೆಲವು ದೇಶಗಳು) ಕೈಗೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಹೊಂದಿದ್ದಾರೆ. ಅವರ ಆ ದಾಖಲೆ ಮುರಿಯಲು ನಿರ್ಧರಿಸಿದ್ದೇನೆ.

ಎಷ್ಟು ದಿನದ ವಿಶ್ವಪರ್ಯಟನೆ ಇದು?

ನಾನು ಒಟ್ಟು 1,111 ದಿನಗಳಲ್ಲಿ ಕೆಲವು ದೇಶಗಳನ್ನು ತಲುಪಲಿದ್ದೇನೆ. ಅದಕ್ಕಾಗಿ ಪ್ಲಾನ್ ಮಾಡಿಕೊಂಡಿದ್ದೇನೆ. ಕಳೆದ ಎರಡು ವರ್ಷಗಳಿಂದ ನಾನು ನನ್ನ ಊರಿಗೆ ಹೋಗಿಲ್ಲ ಎಂದು ಸೆಲ್ವನ್ ಮಾಹಿತಿ ನೀಡಿದ್ದಾರೆ.

ಶನಿವಾರ ಮತ್ತು ಭಾನುವಾರ ಸೆಲ್ವಂ ಅವರು ಗದಗ ಜಿಲ್ಲೆಯ ನರೇಗಲ್, ರೋನ್, ನರಗುಂದ ಮತ್ತಿತರ ಕಡೆ ಕಾಣಿಸಿದ್ದಾರೆ. ರೋಣ ನಿವಾಸಿಗಳು ಅವರನ್ನು ಸ್ವಾಗತಿಸಿ, ಸನ್ಮಾನಿಸಿದರು. ಸೆಲ್ವಂ ಅವರ ಈ ನಿರ್ಧಾರಕ್ಕೆ ಸ್ಥಳೀಯರು ಧನ್ಯವಾದ ಅರ್ಪಿಸಿದರು

ಗದಗನಿಂದ ಅವರು ದೇಶದ ವಿವಿಧ ರಾಜ್ಯಗಳ ಮೂಲಕ ನೇಪಾಳ, ವಿಯೆಟ್ನಾಂ ಮತ್ತು ಚೀನಾ ದೇಶಗಳಿಗೆ ಭೇಟಿ ನೀಡುವ ಯೋಜನೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+