'ಭೂ ಹಗರಣದಲ್ಲಿ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್'

Posted By: ಧಾರವಾಡ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ - 25: ರಾಜ್ಯ ಸಭಾ ಸದಸ್ಯ ರಾಜೀವ ಚಂದ್ರಶೇಖರ್ ಬೆಂಗಳೂರಿನ ಪಿ ಕೆ ವ್ಹಿ ಡೆವಲಪರ್ ಜೊತೆ ಕೈ ಜೊಡಿಸಿ ಕೆ ಎಮ್ ಎಫ್ ಭೂ ಹಗರಣದಲ್ಲಿ ತೊಡಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀವ ಚಂದ್ರಶೇಖರ್ ಒಡೆತನದ ಜುಪಿಟರ್ ಕ್ಯಾಪಿಟಲ್ ಕಂಪನಿ ಮೂಲಕ ಅವ್ಯವಹಾರ ಮಾಡಿದ್ದು, ಕೆ ಎಮ್ ಎಫ್ ಭೂಮಿಯನ್ನು ಅಕ್ರಮವಾಗಿ ಅಡವಿಟ್ಟು ಸಾಲ ಪಡೆದ ದಾಖಲೆ ಸಹ ಹಿರೇಮಠ ಬಿಡುಗಡೆ ಮಾಡಿದರು.

2 ಎಕರೆ 16 ಗುಂಟೆ ಕೆಲ ಕಂಪನಿಯ ಜೊತೆ ಕೈ ಜೋಡಿಸಿ ಬ್ಯಾಂಕ್ ನಲ್ಲಿ ಅಡ ಇಟ್ಟು ಸಾಲ ಪಡೆದಿದ್ದಾರೆ. ಮಂತ್ರಿ ಹೆಬಿಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಜೊತೆ ಜಂಟಿ ಒಪ್ಪಂದ ಮಾಡಿಕೊಂಡು ಕೆ ಎಮ್ ಎಫ್ ಭೂಮಿಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಅಡವಿಟ್ಟು ದಿನಾಂಕ 4/1/17 ರಂದು 50 ಕೋಟಿ ಸಾಲ ಪಡೆದಿದ್ದಾರೆ.

SR Hiremath allegation against MP Rajeev Chandrashekar Land Scam

ಅದೇ ದಿನ ಲಕ್ಷ್ಮಿ ವಿಲಾಸ್ ಬ್ಯಾಂಕ್ ನಿಂದ 165 ಕೋಟಿ ರೂಪಾಯಿ ಸಾಲ ಪಡೆದೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 50 ಕೋಟಿ ಮರು ಪಾವತಿಸಿದ್ದಾರೆ. ಒಂದೇ ದಿನಾ ಎರೆಡೆರಡೂ ಭಾರಿ ಸಾಲ ಪಡೆದಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ರು. ಕೊರಮಂಗಲದ ಬಳಿ ಇರೋ ಕೆಎಂಎಫ್ 2.16 ಎಕರೆ ಭೂಮಿಯನ್ನ ಅಡವಿಟ್ಟದ್ದಾರೆ.

ಸಾರ್ವಜನಿಕ ಜೀವನದಲ್ಲಿರೋರು ಆ ಬಗ್ಗೆ ದಾಖಲೆಗಳನ್ನ ಬಹಿರಂಗ ಪಡಿಸಬೇಕು ಮತ್ತು ಕೆಎಂಎಫ್ ಮೇಲೆ ಒತ್ತಡ ಹೇರಿ, ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ಒಂದು ಸಾರ್ವಜನಿಕ ಜೀವನದಲ್ಲಿರಬೇಕು. ಇಲ್ಲಾ ಉಧ್ಯಮಿಯಾಗಿರಬೇಕು. ಅದನ್ನ ಅವರೇ ಸ್ಪಷ್ಟಪಡಿಸಲು ಹಿರೇಮಠ್ ಒತ್ತಾಯಿಸಿದರು. ಇನ್ನು 15 ದಿನಗಳಲ್ಲಿ ರಾಜೀವ್ ಚಂದ್ರಶೇಖರ್ ದಾಖಲೆ ಬಹಿರಂಗ ಪಡಿಸದಿದ್ದರೆ ಕಾನೂನು ಸಮರ ಸಾರುವುದಾಗಿ ಎಚ್ಚರಿಕೆ ನೀಡಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Social activist SR Hiremath alleged that Rajya sabha member Rajeev Chandrasekhar involved in a land scam and challenged him to produced documents.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ