ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್ ಐ ವರ್ಗಾವಣೆ ವಿಚಾರ; ಬಿಜೆಪಿ ವಿರುದ್ಧ ಮತ್ತೊಂದು ಆರೋಪ ಮಾಡಿದ ಗೂಳಿಹಟ್ಟಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

Recommended Video

ಪಿಎಸ್ ಐ ವರ್ಗಾವಣೆ ವಿಚಾರ; ಬಿಜೆಪಿ ವಿರುದ್ಧ ಮತ್ತೊಂದು ಆರೋಪ ಮಾಡಿದ ಗೂಳಿಹಟ್ಟಿ

ಹೊಸದುರ್ಗ, ಆಗಸ್ಟ್ 26: "ಪಿಎಸ್ ‍ಐ ವರ್ಗಾವಣೆ ವಿಷಯದಲ್ಲಿ ಸಿಎಂ ಕಚೇರಿ ಹಾಗೂ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹಸ್ತಕ್ಷೇಪ ಮಾಡಿದ್ದಾರೆ" ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ. ಈ ಮೂಲಕ ಮತ್ತೆ ಬಿಜೆಪಿ ವಿರುದ್ಧ ಮಾತನಾಡಿದ್ದಾರೆ.

ಕಾರ್ಯಕರ್ತರ ಸಭೆಯಲ್ಲಿ ಈ ಪಕ್ಷದ ಕುರಿತು ಅಸಮಾಧಾನ ಹೊರಹಾಕಿದ ಗೂಳಿಹಟ್ಟಿ ಶೇಖರ್, "ಹೊಸದುರ್ಗಕ್ಕೆ ಪಿಎಸ್ಐ ವರ್ಗಾವಣೆ ವಿಚಾರದಲ್ಲಿ ಬೇಸರವಾಗಿದೆ. ಬಿಜೆಪಿ ಸರ್ಕಾರ ಸ್ವಪಕ್ಷ ಶಾಸಕರನ್ನು ಕಡೆಗಣಿಸಲಾಗುತ್ತಿದೆ. ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಪಿಎಸ್ ‍ಐ ವರ್ಗಾವಣೆ ವಿಚಾರದಲ್ಲಿ ಶಾಸಕರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದ್ದಾರೆ" ಎಂದಿದ್ದಾರೆ.

ಗೂಳಿಹಟ್ಟಿ ಶೇಖರ್ ಗೆ ಸಿಗದ ಸಚಿವ ಸ್ಥಾನ; ಹೊಸದುರ್ಗದಲ್ಲಿ ಬೆಂಬಲಿಗರ ಪ್ರತಿಭಟನೆಗೂಳಿಹಟ್ಟಿ ಶೇಖರ್ ಗೆ ಸಿಗದ ಸಚಿವ ಸ್ಥಾನ; ಹೊಸದುರ್ಗದಲ್ಲಿ ಬೆಂಬಲಿಗರ ಪ್ರತಿಭಟನೆ

"ಪದೇ ಪದೇ ನನ್ನ ಕ್ಷೇತ್ರದ ವಿಚಾರದಲ್ಲಿ ಎಲ್ಲರೂ ಮೂಗು ತೂರಿಸುತ್ತಿದ್ದಾರೆ. ಶಾಸಕರ ಮಾತಿಗೂ ಮನ್ನಣೆ ಬೇಕು" ಎಂದು ಹೇಳಿಕೊಂಡಿದ್ದಾರೆ.

Shivamogga MPs Intervention in PSI Transfer Alleges Goolihatti Shekhar In Chitradurga

 ಅತೃಪ್ತ ಶಾಸಕರಿಗೆ ಮಂತ್ರಿಗಿರಿ: ಯಾರಿಗೆ ಒಲಿಯಲಿದೆ ಅದೃಷ್ಟ? ಅತೃಪ್ತ ಶಾಸಕರಿಗೆ ಮಂತ್ರಿಗಿರಿ: ಯಾರಿಗೆ ಒಲಿಯಲಿದೆ ಅದೃಷ್ಟ?

ಆದರೆ ಶಾಸಕರ ಈ ಮಾತಿಗೆ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. "ಅಧಿಕಾರಿಗಳ ‌ವರ್ಗಾವಣೆಯಲ್ಲಿ ಬಿಎಸ್ ವೈ ಹಾಗೂ ರಾಘವೇಂದ್ರ ಹಸ್ತಕ್ಷೇಪ ಮಾಡಿಲ್ಲ. ಶಾಸಕರ ಮನವಿಯಂತೆ ಎಲ್ಲಾ ಮಾಡಲಾಗಿದೆ. ಕ್ಷೇತ್ರಕ್ಕೆ 25 ಕೋಟಿ‌ ಅನುದಾನ ನೀಡಲಾಗಿದೆ. ತಾರತಮ್ಯ ಮಾಡಿಲ್ಲ" ಎಂದು ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲಿಂಗಮೂರ್ತಿ ಸಮಜಾಯಿಷಿ ನೀಡಿದರು.

English summary
"CM office and Shivamogga MP BY Raghavendra have interfered in the transfer of PSI" alleges Goolihatti shekhar in chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X