• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೊಳಕಾಲ್ಮೂರು ತಹಶೀಲ್ದಾರ್, ಕಂದಾಯ ಅಧಿಕಾರಿ ಎಸಿಬಿ ಬಲೆಗೆ

|

ಚಿತ್ರದುರ್ಗ, ನವೆಂಬರ್ 30: ಗುತ್ತಿಗೆದಾರನಿಂದ 2 ಲಕ್ಷ ಲಂಚ ಪಡೆಯುವ ಸಂದರ್ಭ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿ ಎಸಿಬಿ ಬೆಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಹಶೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ಕಂದಾಯ ಅಧಿಕಾರಿ ಉಮೇಶ್ ಎಸಿಬಿ ಬೆಲೆಗೆ ಬಿದ್ದಿರುವ ಅಧಿಕಾರಿಗಳು. ಮೊಳಕಾಲ್ಮೂರು ಪಟ್ಟಣದ ಕಚೇರಿಯಲ್ಲಿ ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಗದಗ ನಗರಾಭಿವೃದ್ಧಿ ಅಧಿಕಾರಿ ರುದ್ರೇಶ್​ ಮನೆ ಮೇಲೆ ಎಸಿಬಿ ದಾಳಿ

ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆ ಕ್ರಾಸ್ ಬಳಿ ಅಧಿಕಾರಿ ಉಮೇಶ್ ಗೆ ಗುತ್ತಿಗೆದಾರ 2 ಲಕ್ಷ ಹಣ ನೀಡುವಾಗ ದಾಳಿಯನ್ನು ನಡೆಸಿದ್ದು, ಇತ್ತ ಎಸಿಬಿ ಎಸ್ಪಿ ಜಯಪ್ರಕಾಶ್ ತಹಶೀಲ್ದಾರ್ ಕಚೇರಿ ಮೇಲೆ ದಾಳಿಯನ್ನು ಏಕ ಕಾಲದಲ್ಲಿ ನಡೆಸಿದ್ದಾರೆ. ಗುತ್ತಿಗೆದಾರ ಪ್ರೀತಮ್ ನಿಂದ ಒಟ್ಟು ಹತ್ತು ಲಕ್ಷ ಬೇಡಿಕೆ ಇಟ್ಟಿದ್ದ ತಹಶೀಲ್ದಾರ್ ಮಲ್ಲಿಕಾರ್ಜುನ್, ಮೊದಲು 6 ಲಕ್ಷವನ್ನು ಪಡೆದುಕೊಂಡಿದ್ದಾರೆ. ಉಳಿದ ಲಂಚದ ಹಣದಲ್ಲಿ ಇಂದು ಎರಡು ಲಕ್ಷ ಕೊಡುವಂತೆ ಹಾಗೂ ಇನ್ನುಳಿದ ಹಣವನ್ನು ಬುಧವಾರ ಕೊಡುವಂತೆ ಹೇಳಿದ್ದರು.

   Siddaramaiah Is Caught In A Corruption Case | Oneindia Kannada

   ಪ್ರೀತಮ್ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅದರಂತೆ ಎಸ್ಪಿ ಜಯರಾಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದಿರುವ ಎಸಿಬಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

   English summary
   ACB raid on molakalmuru tahsildar and a revenue officer while receiving Rs 2 lakh bribe from a contractor
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X