ತಮಿಳುನಾಡು ಸರ್ಕಾರಿ ಕಚೇರಿ, ಅಸೆಂಬ್ಲಿಯಿಂದ ಜಯಾ ಫೋಟೊ ಔಟ್!

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 15: ಅಕ್ರಮ ಆಸ್ತಿ ಪ್ರಕರಣದಲ್ಲಿ ದಿವಂಗತ ಜೆ ಜಯಲಲಿತಾ ಅವರು ಅಪರಾಧಿ ಎಂದು ಸುಪ್ರೀಂಕೋರ್ಟ್ ಘೋಷಿಸಿರುವುದು ತಿಳಿದಿರಬಹುದು. ಈಗ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಗಳನ್ನು ತಮಿಳುನಾಡಿನ ಸರ್ಕಾರಿ ಕಚೇರಿ, ಅಸೆಂಬ್ಲಿ ಹಾಲ್, ಸಚಿವಾಲಯಗಳಿಂದ ತೆರವುಗೊಳಿಸಲಾಗುತ್ತಿದೆ ಏಕೆ? ಮುಂದೆ ಓದಿ...

ಆಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ಮಂಗಳವಾರ (ಫೆಬ್ರವರಿ 15) ನೀಡಿದ ತೀರ್ಪಿನಲ್ಲಿ ಜಯಲಲಿತಾ ಅವರ ಮೇಲಿನ ಶಿಕ್ಷೆ ಪ್ರಕಟಣೆಯನ್ನು ಮಾತ್ರ ರದ್ದುಗೊಳಿಸಲಾಗಿದೆ. ಅವರ ಮೇಲಿನ ಅರೋಪಗಳನ್ನು ರದ್ದುಗೊಳಿಸಿಲ್ಲ. [ಶಶಿಕಲಾಗೆ ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ಕೈದಿ ಡ್ರೆಸ್]

ಜತೆಗೆ 100 ಕೋಟಿ ರು ದಂಡ ವಸೂಲಿ ಕಾರ್ಯ ಕೂಡಾ ಜಾರಿಯಲ್ಲಿದೆ. ಹೀಗಾಗಿ ನಿಯಮದ ಪ್ರಕಾರ ಅಪರಾಧಿ ಎನಿಸಿದ ಜನಪ್ರತಿನಿಧಿಗಳ ಭಾವಚಿತ್ರವನ್ನು ಸರ್ಕಾರಿ ಕಚೇರಿ, ಅಸೆಂಬ್ಲಿ ಹಾಲ್ ನಲ್ಲಿ ಇರಿಸುವಂತಿಲ್ಲ. ಸರ್ಕಾರದ ಅಧಿಕೃತ ಸಮಾರಂಭಗಳಲ್ಲೂ ಜಯಾ ಅವರ ಭಾವಚಿತ್ರ ಬಳಸುವಂತಿಲ್ಲ.

ಪೋಯಿಸ್ ಗಾರ್ಡನ್

ಪೋಯಿಸ್ ಗಾರ್ಡನ್

ಜಯಲಲಿತಾ ಅವರು ನೆಲೆಸಿದ್ದ ಪೋಯಿಸ್ ಗಾರ್ಡನ್ ಅಥವಾ ವೇದ ನಿಲಯಂ ಮೇಲೆ ಸುಪ್ರೀಂಕೋರ್ಟ್ ಕಣ್ಣು ಬಿದ್ದಿದೆ. ಅಕ್ರಮ ಆಸ್ತಿ ಗಳಿಕೆ ಬಗ್ಗೆ ನಡೆದ ಎಲ್ಲಾ ಸಂಚು ರೂಪುಗೊಂಡಿದ್ದು ಇದೇ ಬಂಗಲೆಯಲ್ಲಿ ಎಂದು ಸುಪ್ರೀಂ ಹೇಳಿದೆ.

ಈ ಬಂಗಲೆಯ ಪಾಲು

ಈ ಬಂಗಲೆಯ ಪಾಲು

ಜಯಲಲಿತಾ, ಶಶಿಕಲಾ ನಟರಾಜನ್, ಇಳವರಸಿ, ಸುಧಾಕರನ್ ಅವರು ಅಪರಾಧಿಯಾಗಲು ಕಾರಣವಾದ ಅಕ್ರಮ ಆಸ್ತಿ ಪ್ರಕರಣದಲ್ಲಿ ಈ ಬಂಗಲೆಯ ಪಾಲು ಇದೆ. ಜಯಲಲಿತಾ ಅವರು ಅಧಿಕಾರದಲ್ಲಿದ್ದಾಗ ಅವರ ಅಧಿಕೃತ ಗೃಹ ಕಚೇರಿಯಾಗಿತ್ತು.

ವೇದ ನಿಲಯಂ ಬಂಗಲೆ

ವೇದ ನಿಲಯಂ ಬಂಗಲೆ

ವೇದ ನಿಲಯಂ ಬಂಗಲೆಯನ್ನು ಸ್ಮಾರಕ ಮಾಡಲು ಹೊರಟಿರುವ ಪನ್ನೀರ್ ಸೆಲ್ವಂ ಹಾಗೂ ಸಂಗಡಿಗರಿಗೆ ಸುಪ್ರೀಂ ಆದೇಶದಿಂದ ಹಿನ್ನಡೆಯಾಗಿದೆ. ಸರ್ಕಾರಿ ಬೊಕ್ಕಸದಿಂದ ಹಣ ಪಡೆದು ಜಯಲಲಿತಾ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವಂತಿಲ್ಲ. ಆನ್ ಲೈನ್ ಅರ್ಜಿ ಹಾಕಿ, ಬೃಹತ್ ಅಭಿಯಾನ ಆರಂಭಿಸಲಾಗಿತ್ತು. ಶಶಿಕಲಾ ಅವರನ್ನು ಬಂಗಲೆಯಿಂದ ಹೊರಕ್ಕೆ ಹಾಕುವ ಉದ್ದೇಶವೂ ಇದರ ಹಿಂದೆ ಅಡಗಿತ್ತು.

'ಅಮ್ಮ' ಅವರ ಭಾವಚಿತ್ರ ಕಳಚಬೇಕಿದೆ

'ಅಮ್ಮ' ಅವರ ಭಾವಚಿತ್ರ ಕಳಚಬೇಕಿದೆ

ಪೋಯಿಸ್ ಗಾರ್ಡನ್ ನಿವಾಸವನ್ನು ಸ್ಮಾರಕ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಇದಲ್ಲದೆ, ಅಸೆಂಬ್ಲಿ ಹಾಲ್ ನಲ್ಲಿ ಸದಾ ಎದ್ದು ಕಾಣುತ್ತಿದ್ದ ತಮಿಳರ ಪಾಲಿನ 'ಅಮ್ಮ' ಅವರ ಭಾವಚಿತ್ರ ಕಳಚಬೇಕಿದೆ.
ಓ ಪನ್ನೀರ್ ಸೆಲ್ವಂ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಜಯಾ ಅವರಿದ್ದ ಸಿಎಂ ಕಚೇರಿಯನ್ನು ಬಳಸಿರಲಿಲ್ಲ. ಬದಲಿಗೆ ವಿತ್ತ ಸಚಿವರ ಕಚೇರಿ ಬಳಸಿದ್ದರು. ಸಭೆ ಸಮಾರಂಭಗಳಲ್ಲಿ ಜಯಾ ಅವರ ಭಾವಚಿತ್ರವನ್ನು ಕೊಂಡೊಯ್ಯುತ್ತಿದ್ದರು. ಈಗ ಭಾವಚಿತ್ರ ಯಾವುದೇ ಕಚೇರಿಯಲ್ಲಿ ಕಾಣುವಂತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The photographs of Jayalalithaa will no longer don the secretariat and the government offices in Tamil Nadu. The rules state that a photograph of a person convicted cannot be kept in government buildings. The Supreme Court in its Tuesday order had not absolved Jayalalithaa of any of the corruption charges in the disproportionate assets case. It only abated the sentence against her.
Please Wait while comments are loading...