ಶಶಿಕಲಾ ಕುಟುಂಬಸ್ಥರ ಮೇಲಿನ ದಾಳಿಯಲ್ಲಿ ಸಿಕ್ಕಿದ್ದು ರೂ. 1400 ಕೋಟಿ!

Subscribe to Oneindia Kannada

ಚೆನ್ನೈ, ನವೆಂಬರ್ 13: ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಕುಟುಂಬಸ್ಥರು ಮತ್ತು ಜಯಾ ಟಿವಿ ಆವರಣದಲ್ಲಿ ನಡೆದ ಐಟಿ ದಾಳಿ ವೇಳೆ ಕಂಡು ಕೇಳರಿಯದ ಪ್ರಮಾಣದ ಆಸ್ತಿ, ನಗದು, ಚಿನ್ನ, ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.

ದಾಳಿಯಲ್ಲಿ ಒಟ್ಟು 1,400 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Unaccounted income of Rs1400 crore unearthed during raids on VK Sasikala's family

ದಿವಂಗತ ಜಯಲಲಿತಾ ಒಡೆತನದ ಜಯಾ ಟಿವಿ ಸೇರಿದಂತೆ 180ಕ್ಕೂ ಹೆಚ್ಚು ಸ್ಥಳಗಳ ಮೇಲೆ ನವೆಂಬರ್ 9ರಂದು ಏಕಕಾಲದಲ್ಲಿ ದಾಳಿ ನಡೆದಿತ್ತು. 1800 ಕ್ಕೂ ಹೆಚ್ಚು ಅಧಿಕಾರಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಸತತ 5 ದಿನಗಳ ಕಾಲ ಶಶಿಕಲಾ, ಎಐಎಡಿಎಂಕೆ ಮುಖಂಡ ಟಿಟಿವಿ ದಿನಕರ್ ಸೇರಿದಂತೆ ಹಲವಾರು ಜನರ ಮನೆ, ಕಚೇರಿ ಆವರಣದಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ಪರಿಶೀಲನೆ ವೇಳೆ ಇದೀಗ 1400 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Income Tax officials say, unaccounted income of over Rs 1400 crore has been unearthed during raids on VK Sasikala's family members and premises of Jaya TV in Chennai.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ