ರಾಜೀವ್ ಗಾಂಧಿ ಹತ್ಯೆ ಅಪರಾಧಿ ಮೇಲೆ ವೇಲೂರು ಜೈಲಲ್ಲಿ ಹಲ್ಲೆ

Posted By:
Subscribe to Oneindia Kannada

ವೇಲೂರು, ಸೆಪ್ಟೆಂಬರ್ 13: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎ.ಜಿ.ಪೇರರಿವಳನ್ ಮೇಲೆ ಸಹಕೈದಿಯೊಬ್ಬ ಹಲ್ಲೆ ನಡೆಸಿದ ಘಟನೆ ವೇಲೂರು ಕೇಂದ್ರ ಜೈಲಿನಲ್ಲಿ ಮಂಗಳವಾರ ಆಗಿದೆ. ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದು, ಹಣೆ ಹಾಗೂ ಕೈಗೆ ಗಾಯವಾಗಿದೆ.

ಜೈಲಿನ ಆಸ್ಪತ್ರೆಯಲ್ಲಿ ಪೇರರಿವಳನ್ ಗೆ ಚಿಕಿತ್ಸೆ ನೀಡಲಾಗಿದೆ. ಆತನ ಹಣೆಗೆ ಹೊಲಿಗೆ ಹಾಕಲಾಗಿದೆ. ರಾಜೇಶ್ ಖನ್ನಾಗೆ ಪೇರರಿವಳನ್ ಜತೆಗೆ ವೈಮನಸ್ಯ ಇತ್ತು. ಅದು ವಿಕೋಪಕ್ಕೆ ಹೋಗಿ ಘಟನೆ ಸಂಭವಿಸಿದೆ. ರಾಜೇಶ್ ಖನ್ನಾ ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಹದಿಮೂರು ವರ್ಷದಿಂದ ಜೈಲಿನಲ್ಲಿದ್ದಾನೆ.[ರಾಜೀವ್ ಹಂತಕರ ಬಿಡುಗಡೆ ಅಧಿಕಾರ ತಮಿಳುನಾಡು ಸರ್ಕಾರಕ್ಕಿಲ್ಲ!]

Vellore jail

ತನಿಖೆ ನಡೆಯುತ್ತಿದೆ. ಪೇರರಿವಳನ್ ಹೈ ಸೆಕ್ಯೂರಿಟಿ-1 ಬ್ಲಾಕ್ ನಲ್ಲಿ ಇದ್ದ, ರಾಜೇಶ್ ಖನ್ನಾ ಹೈ ಸೆಕ್ಯೂರಿಟಿ-2 ಬ್ಲಾಕ್ ನಲ್ಲಿ ಇದ್ದ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೇರರಿವಳನ್ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಸಮಯದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Convict in the Rajiv Gandhi assassination case, AG Perarivalan,suffered injuries after fellow inmate beat with an iron rod at the Vellore central prison on Tuesday.
Please Wait while comments are loading...