63ರ ವೃದ್ಧನಿಂದ 12ರ ಬಾಲಕಿ ಮೇಲೆ 3 ತಿಂಗಳು ಲೈಂಗಿಕ ದೌರ್ಜನ್ಯ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ವೆಲ್ಲೂರು, ಫೆಬ್ರವರಿ 11: ನೆರೆಮನೆಯ ಹನ್ನೆರಡು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 63 ವರ್ಷದ ವ್ಯಕ್ತಿಯನ್ನು ವೆಲ್ಲೂರಿನ ವಾಲಜ್ ಪೇಟ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತ ತನ್ನ ನೆರೆಮನೆಯಲ್ಲಿರುವ ಬಾಲಕಿ ಮೇಲೆ ಕಳೆದ ಮೂರು ತಿಂಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಪೋಷಕರು ತೀರಿಕೊಂಡ ನಂತರ ಆ ಬಾಲಕಿ ತನ್ನ ಅಣ್ಣನೊಂದಿಗೆ ವಾಸವಿದ್ದಳು. ಆತ ಷೂ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ 8 ಗಂಟೆಗೆ ತೆರಳಿದರೆ ರಾತ್ರಿ 10ಕ್ಕೆ ಮನೆಗೆ ವಾಪಸ್ ಬರುತ್ತಿದ್ದರು. ಎಂಟನೆ ತರಗತಿ ಓದುತ್ತಿರುವ ಬಾಲಕಿ ಬಹುತೇಕ ಸಮಯ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು.[ಟೀಚರ್ ನ ಕೂಡಿ ಹಾಕಿ, ಲೈಂಗಿಕತೆಗಾಗಿ ಪೀಡಿಸಿದ ವಿದ್ಯಾರ್ಥಿ!]

Vellore 63 year old arrested for sexually assaulting a minor

ಈಚೆಗೆ ಆಕೆಗೆ ಅನಾರೋಗ್ಯ ಎಂಬ ಕಾರಣಕ್ಕೆ ವಾಲಜ್ ಪೇಟ್ ನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು, ಬಾಲಕಿಯ ಮೇಲೆ ಹಲವು ಸಮಯದಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ತಿಳಿಸಿದ್ದಾರೆ. ಬಾಲಕಿಯನ್ನು ಪ್ರಶ್ನಿಸಿದಾಗ, ಕಳೆದ ಮೂರು ತಿಂಗಳಿಂದ ನೆರೆಮನೆಯ ಖದೀರ್ ಬಾಷಾ ಎಂಬಾತ ದೈಹಿಕ ಸಂಪರ್ಕಕ್ಕಾಗಿ ಪೀಡಿಸುತ್ತಿದ್ದ ಎಂದು ತಿಳಿಸಿದ್ದಾಳೆ.[ಮಹಿಳೆ ಮೇಲೆ ದೌರ್ಜನ್ಯ: ಬೆಂಗಳೂರಿನಲ್ಲಿ ಯೆಮೆನ್ ಪ್ರಜೆಯ ಬಂಧನ]

ತಕ್ಷಣವೇ ಬೈದ್ಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಎನ್ ಸಿಆರ್ ಬಿ ಅಂಕಿ-ಅಂಶದ ಪ್ರಕಾರ, ಭಾರತದಲ್ಲಿ ನಡೆಯುವ ಬಹುತೇಕ ಅತ್ಯಾಚಾರ ಪ್ರಕರಣಗಳು ಸಂತ್ರಸ್ತರಿಗೆ ಪರಿಚಯಸ್ಥರಿಂದಲೇ ನಡೆಯುತ್ತವೆ. ಅದರಲ್ಲೂ ಸಂಬಂಧಿಗಳು, ನೆರೆಮನೆಯವರು ಹಾಗೂ ಕೆಲಸ ಮಾಡುವ ಸ್ಥಳದಲ್ಲಿನ ಮಾಲೀಕರಿಂದಲೇ ನಡೆಯುತ್ತವೆ ಎಂದು ತಿಳಿದು ಬಂದಿದೆ,

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Police have held a 63 year old man for sexually assaulting his 12 year-old neighbour for a period of three months. The accused, Kadhar Basha, has been arrested in Vellore District.
Please Wait while comments are loading...