Ugadi Special Train: ವಿಶೇಷ ರೈಲು ಸಂಚಾರ, ಬೆಂಗಳೂರು-ಬೆಳಗಾವಿ ಪ್ರಯಾಣಿಕರೇ ಗಮನಿಸಿ

ಬೆಂಗಳೂರು: ಯುಗಾದಿ ಪ್ರಯುಕ್ತ ಬೆಂಗಳೂರಿನಂತಹ ಮಹಾನಗರಗಳಿಗೆ ಬಂದವರು ತಮ್ಮೂರುಗಳಿಗೆ ತೆರಳುತ್ತಾರೆ. ಬೆಂಗಳೂರಿನಿಂದ ತೆರಳುವವರ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ನೈಋತ್ಯ ರೈಲ್ವೆ ಅಧಿಕಾರಿಗಳು ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ರೈಲು ಕಾರ್ಯಾಚರಣೆ ನಡೆಸಲಿದೆ. ಇಂದಿನಿಂದ ಮಾರ್ಚ್ 22ರವರೆಗೆ ವಿಶೇಷ ಸೇವೆ ಪ್ರಯಾಣಿಕರಿಗೆ ಸಿಗಲಿದೆ.

ಯುಗಾದಿ ಹಬ್ಬದ ಸಂದರ್ಭದಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಎಸ್‌ಎಂವಿಟಿ (SMVT) ಬೆಂಗಳೂರು ಮತ್ತು ಬೆಳಗಾವಿ ನಡುವೆ ಒಂದು ಸುತ್ತಿನ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ. ಮಾರ್ಚ್ 18 ರಂದು ಬೆಂಗಳೂರಿನಿಂದ ಹೊರಡಲಿದೆ. ಮರಳಿ ಮಾರ್ಚ್ 22 ರಂದು ಬೆಳಗಾವಿಯಿಂದ ಹೊರಟು ಬೆಂಗಳೂರಿಗೆ ಆಗಮಿಸಲಿದೆ.

SWR Special Trains

ರೈಲುಗಳ ವೇಳಾಪಟ್ಟಿ ಮತ್ತು ವಿವರ

ಎಸ್‌ಎಂವಿಟಿ ಬೆಂಗಳೂರು - ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು (06503) ಮಾರ್ಚ್ 18 ರಂದು ಬುಧವಾರ ಸಂಜೆ 07 ಗಂಟೆಗೆ ಇಲ್ಲಿಂದ ಹೊರಡುತ್ತದೆ. ಮಾರನೇ ದಿನ ಮಾರ್ಚ್ 19ರಂದು ಬೆಳಗ್ಗೆ 7:35 ಕ್ಕೆ ಬೆಳಗಾವಿ ನಿಲ್ದಾಣ ತಲುಪುತ್ತದೆ.

ಬೆಳಗಾವಿ -ಎಸ್‌ಎಂವಿಟಿ ವಿಶೇಷ ಎಕ್ಸ್‌ಪ್ರೆಸ್ ರೈಲು (06504) ಭಾನುವಾರ ಸಂಜೆ 05:30 ಗಂಟೆಗೆ ಹೊರಟು ಮಾರನೇ ದಿನ ಸೋಮವಾರ ಬೆಳಗ್ಗೆ 5 ಗಂಟೆಗೆ ಬೆಂಗಳೂರಿಗೆ ಬಂದು ಸೇರಲಿದೆ. ಹಬ್ಬದ ಸಮಯದಲ್ಲಿ ಖಾಸಗಿ ಬಸ್‌ಗಳ ದರ ಏರಿಕೆ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರಿಗೆ ಈ ವಿಶೇಷ ರೈಲು ಸಂಚಾರವು ದೊಡ್ಡ ಮಟ್ಟದ ನಿರಾಳತೆ ತರಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

ನಿಲುಗಡೆಯ ಪ್ರಮುಖ ನಿಲ್ದಾಣಗಳು

ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಎರಡೂ ದಿಕ್ಕುಗಳಲ್ಲಿ 'ಎಸ್‌ಎಂವಿಟಿ ಬೆಂಗಳೂರು, ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ ಮತ್ತು ಬೆಳಗಾವಿ' ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ. ಈ ಭಾಗದ ಅನೇಕ ಪ್ರಯಾಣಿಕರಿಗೆ ಈ ವಿಶೇಷ ರೈಲು ಕಾರ್ಯಾಚರಣೆಯ ಸದುಪಯೋಗ ಮಾಡಿಕೊಳ್ಳಬಹುದು.

ಈ ವಿಶೇಷ ರೈಲುಗಳು ಎಸಿ ಥ್ರಿ ಟೈರ್, ಎಸಿ ಟು ಟೈರ್, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್, ಜನರಲ್ ಸೇರಿ ಒಟ್ಟು 19 ಬೋಗಿಗಳನ್ನು ಹೊಂದಿರುತ್ತದೆ. ರೈಲಿನ ಸಮಯ ಮತ್ತು ಹೆಚ್ಚಿನ ಮಾಹಿತಿಗೆ, ಟಿಕೆಟ್ ಬುಕ್ ಮಾಡಲು ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ www.enquiry.indianrail.gov.inಗೆ ಭೇಟಿ ನೀಡಬೇಕು. ಇಲ್ಲವೇ ಎನ್‌ಟಿಎಸ್ ಅಪ್ಲಿಕೇಷನ್ ಅಥವಾ ಸಹಾಯವಾಣಿ ಸಂಖ್ಯೆ 139ಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+