BMTC ಬಸ್‌ಗಳಲ್ಲಿ ಟಿಕೆಟ್ ಇಲ್ಲದೆ ಓಡಾಡುವವರೇ ಎಚ್ಚರ! ಫೆಬ್ರವರಿಯಲ್ಲೇ 5 ಲಕ್ಷ ರೂ.ದಂಡ ವಸೂಲಿ

ಬೆಂಗಳೂರು: ದಶಕಗಳಿಂದಲೂ ರಾಜಧಾನಿ ಬೆಂಗಳೂರಿನ ಜನರ ಜೀವನಾಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳಲ್ಲಿ ಇತ್ತೀಚೆಗೆ ಟಿಕೆಟ್ ರಹಿತ ಪ್ರಯಾಣಿಕರು ಹೆಚ್ಚುತ್ತಿದ್ದಾರೆ. ಇದರಿಂದ ನಿಗಮದ ಆದಾಯ ಹರಿವಿಗೆ ತೊಂದರೆ ಆಗುತ್ತಿದೆ. ಇದರ ಕಡಿವಾಣ ಹಾಕುವ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳ ಸದಸ್ಯರು ಪರಿಶೀಲಿಸಿ ಸಾವಿರಾರು ಪ್ರರಕಣ ಪತ್ತೆ ಮಾಡಿದ್ದಾರೆ.

ಬಿಎಂಟಿಸಿ ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟ್ ಪಡೆಯದೇ ಅನಧಿಕೃತವಾಗಿ ಪ್ರಯಾಣ ಮಾಡುವುದು ಗಮನಕ್ಕೆ ಬಂದಿದೆ. ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದಾದ್ಯಂತ ಸಂಚರಿಸುವ ವಾಹನಗಳನ್ನು ಸಂಸ್ಥೆಯ ತನಿಖಾಧಿಕಾರಿಗಳು ಪರಿಶೀಲಿಸಿದ್ದಾರೆ. ಕಳೆದ ಫೆಬ್ರವರಿ ಒಂದೇ ತಿಮಗಳಿನಲ್ಲಿ 16,397 ಟ್ರಿಪ್‌ಗಳನ್ನು ತಪಾಸಣೆ ಮಾಡಲಾಗಿದೆ. 2317 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು 5,08,910 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಸಂಸ್ಥೆಯ ಬಸ್ ನಿರ್ವಾಹಕರ ವಿರುದ್ಧ ಬರೋಬ್ಬರಿ 1445 ಪ್ರಕರಣಗಳನ್ನು ದಾಖಲಿಸಲಾಗಿದೆ.

BMTC

ಒಟ್ಟು 5,31,810 ರೂ. ದಂಡ ಸಂಗ್ರಹ

ಇನ್ನೂ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 229 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 22,900 ರೂಪಾಯಿ ಹಣವನ್ನು ಅನ್ನು ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ರೂಪದಲ್ಲಿ ವಸೂಲಿ ಮಾಡಲಾಗಿದೆ. ಒಟ್ಟಾರೆಯಾಗಿ ಫೆಬ್ರವರಿ ತಿಂಗಳಲ್ಲಿ ಪತ್ತೆ ಮಾಡಲಾದ ಒಟ್ಟು 2546 ಪ್ರಯಾಣಿಕರಿಂದ ಒಟ್ಟು 5,31,810 ರೂಪಾಯಿ ಹಣ ದಂಡ ರೂಪದಲ್ಲಿ ಸಂಗ್ರಹವಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ / ದಿನದ ಪಾಸು /ವಾರದ ಪಾಸು/ ಮಾಸಿಕ ಪಾಸುಗಳನ್ನು ಪಡೆದು ಪ್ರಯಾಣಿಸುವುದು ಕಡ್ಡಾಯವಾಗಿದೆ. ಈ ನಿಯಮ ಎಲ್ಲ ಪ್ರಯಾಣಿಕರು ಪಾಲಿಸಬೇಕು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಬಿಎಂಟಿಸಿ ವಿನಂತಿಸಿಕೊಂಡಿದೆ.

ಸಂಕ್ಷಿಪ್ತ ಮಾಹಿತಿ

* ತನಿಖೆ ಮಾಡಿದ ಒಟ್ಟು ಬಸ್‌ಗಳು: 16,397
* ಪತ್ತೆಯಾದ ಪ್ರಕರಣಗಳು

1) ಸಾಮಾನ್ಯ ಪ್ರಕರಣಗಳು-1368
2) ಕೆಂಪು ಚುಕ್ಕೆ ಪ್ರಕರಣಗಳು-59
3) ಗಂಭೀರ ಕೆಂಪುಚುಕ್ಕೆ ಪ್ರಕರಣಗಳು-12
4) ವಿಶೇಷ ಪ್ರಕರಣಗಳು-02
5) ಖಾಸಗಿ ಬಸ್‌ಗಳ ಪ್ರಕರಣಗಳು-04

* ಒಟ್ಟು ಪ್ರಕರಣ -1445

* ಟಿಕೇಟ್ ರಹಿತ ಪ್ರಯಾಣಿಕರಿಂದ ವಸೂಲಾದ ದಂಡದ ಹಣ - 5,08,910 ರೂಪಾಯಿ
* ಮಹಿಳಾ ಪ್ರಯಾಣಿಕರ ಆಸನದಲ್ಲಿ ಕೂತ ಪುರುಷರಿಂದ ವಸೂಲಾದ ಹಣ- 22,900 ರೂಪಾಯಿ
* ಒಟ್ಟು ವಸೂಲಾದ ದಂಡದ ಹಣ- 5,31,810 ರೂಪಾಯಿ
* ಟಿಕೆಟ್ ರಹಿತ ಪ್ರಯಾಣಿಕರ ಸಂಖ್ಯೆ- 2,317
* ದಂಡ ವಿಧಿಸಲಾದ ಒಟ್ಟು ಪ್ರಯಾಣಿಕರ ಸಂಖ್ಯೆ- 2546

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+