Breaking News: ತಮಿಳುನಾಡಿನ ವೆಲ್ಲೂರಿನಲ್ಲಿ ಭೂಕಂಪನ
ಚೆನ್ನೈ, ಡಿಸೆಂಬರ್ 23: ತಮಿಳುನಾಡಿನ ವೆಲ್ಲೂರಿನಲ್ಲಿ ಗುರುವಾರವು ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.5ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ (NCS) ತಿಳಿಸಿದೆ.
ತಮಿಳುನಾಡು ವೆಲ್ಲೂರಿನ ಪಶ್ಚಿಮ-ವಾಯವ್ಯಕ್ಕೆ 50 ಕಿಮೀ ದೂರದಲ್ಲಿ ಭೂಮಿ ಕಂಪಿಸಿರುವ ಬಗ್ಗೆ ತಿಳಿದು ಬಂದಿದೆ. ಉತ್ತರ ವೆಲ್ಲೂರಿನ ಕೆಲವು ಭಾಗಗಳಲ್ಲಿ ಗುರುವಾರ ಮಧ್ಯಾಹ್ನ 3:14ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.

ಇತ್ತ ಚಿತ್ತೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲೂ ಕಂಪಿಸಿದ ಧರೆ:
ಬೆಂಗಳೂರು ಮತ್ತು ಚಿಕ್ಕಬಳ್ಳಾಪರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಮತ್ತು ಮಂಗಳವಾರವಷ್ಟೇ ಭೂಮಿ ಕಂಪಿಸಿತ್ತು. ಈ ಘಟನೆ ನಡೆದು 24 ಗಂಟೆಗಳು ಕಳೆಯುವುದರಲ್ಲೇ ಗಡಿರಾಜ್ಯ ವೆಲ್ಲೂರಿನಲ್ಲಿ ಭೂಮಿ ಕಂಪಿಸಿದೆ. ಬೆಂಗಳೂರು ಮತ್ತು ವೆಲ್ಲೂರಿನ ಮಧ್ಯೆ ಕೇವಲ 220 ಕಿಲೋ ಮೀಟರ್ ಅಂತರವಿದೆ.












Click it and Unblock the Notifications