ಲೋಕಸಭೆ ಚುನಾವಣೆ: ವೆಲ್ಲೂರು ಕ್ಷೇತ್ರದಲ್ಲಿ ಆಗಸ್ಟ್ 5 ಕ್ಕೆ ಮತದಾನ
ನವದೆಹಲಿ, ಜುಲೈ 04: ಭಾರೀ ಮೊತ್ತದ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ, ಹಣದ ದುರ್ಬಳಕೆಯ ಆರೋಪದ ಮೇಲೆ ರದ್ದಾಗಿದ್ದ ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಉಪಚುನಾವಣೆ ಆಗಸ್ಟ್ 5ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.
ಕಳೆದ ಮಾರ್ಚ್ 30ರಂದು ವೆಲ್ಲೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಹೆಚ್ಚುವರಿ 10.5 ಲಕ್ಷ ರೂ. ನಗದು ಪತ್ತೆಯಾಗಿತ್ತು. ಅದಾಗಿ ಎರಡು ದಿನಕ್ಕೆ ಅದೇ ಜಿಲ್ಲೆಯ ಡಿಎಂಕೆ ನಾಯಕನಿಗೆ ಸೇರಿದ ಸಿಮೆಂಟ್ ಗೋಡೌನ್ ನಲ್ಲಿ 11.5 ಕೋಟಿ ರೂ. ಸಿಕ್ಕಿತ್ತು. ಹಣವನ್ನು ದುರ್ಬಳಕೆ ಮಾಡಿಕೊಂಡು ಮತದಾರರ ಮೇಲೆ ಪ್ರಭಾವ ಬೀರಲಾಗುತ್ತಿದೆ ಎಂದು ಆರೋಪಿಸಿ ಈ ಕ್ಷೇತ್ರಕ್ಕೆ ನಡೆಯ ಬೇಕಿದ್ದ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು.

ಆದಾಯ ತೆರಿಗೆ ಇಲಾಖೆ ವರದಿ ಆಧಾರದಲ್ಲಿ ಆ ಜಿಲ್ಲೆಯ ಪೊಲೀಸರು ಆರೋಪಿ ಕದಿರ್ ಆನಂದ್ ಹಾಗೂ ಡಿಎಂಕೆ ಇಬ್ಬರು ಪದಾಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು. ವೆಲ್ಲೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ರದ್ದು ಮಾಡಬೇಕು ಎಂಬ ಶಿಫಾರಸನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗಿತ್ತು. ಅವರು ಅದಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು.












Click it and Unblock the Notifications