ಚೆನ್ನೈ ಐಟಿ ದಾಳಿ: ಶೇಖರ್ ರೆಡ್ಡಿ ಸೇರಿದಂತೆ 3 ಜನ ಬಂಧನ
ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಟಿಡಿ ಮಾಜಿ ಬೋರ್ಡ್ ಸದಸ್ಯ ಜೆ ಶೇಖರ್ ರೆಡ್ಡಿ ಸೇರಿದಂತೆ ಮೂವರನ್ನು ಸಿಬಿಐ ತಂಡ ಬುಧವಾರ ಬಂಧಿಸಿದೆ.
ಚೆನ್ನೈ, ಡಿಸೆಂಬರ್ 21: ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಟಿಡಿ ಮಾಜಿ ಬೋರ್ಡ್ ಸದಸ್ಯ ಜೆ ಶೇಖರ್ ರೆಡ್ಡಿ ಸೇರಿದಂತೆ ಮೂವರನ್ನು ಸಿಬಿಐ ತಂಡ ಬುಧವಾರ ಬಂಧಿಸಿದೆ.
ಶೇಖರ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ ಹಾಗೂ ಪ್ರೇಮ್ ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಜನವರಿ 03ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. [ಮುಖ್ಯ ಕಾರ್ಯದರ್ಶಿ ಸಂಬಂಧಿಕರ ಮನೇಲಿ ಸಿಕ್ತು ಕೆಜಿಗಟ್ಟಲೆ ಚಿನ್ನ]

ಆದಾಯ ತೆರಿಗೆ ಅಧಿಕಾರಿಗಳು ಚೆನ್ನೈನ ಸಚಿವಾಲಯದ ಮೇಲೆ ದಾಳಿ ನಡೆಸಿದ ಬಳಿಕ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಮನೆ, ಕಚೇರಿ ಮೇಲೆ ದಾಳಿ ನಡೆಸಿ 170 ಕೋಟಿ ರು ನಗದು ಹಾಗೂ 130 ಕೆಜಿ ಚಿನ್ನ ಹಾಗೂ ಆಭರಣವನ್ನು ಜಪ್ತಿ ಮಾಡಿದ್ದರು. ಚೆನ್ನೈ ನ ಎಂಟು ಕಡೆಗಳಲ್ಲಿ, ವೆಲ್ಲೂರು ಹಾಗೂ ಮುಂತಾದೆಡೆಗಳಲ್ಲಿ ದಾಳಿ ನಡೆಸಲಾಗಿತ್ತು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988, ಮನಿ ಲಾಂಡ್ರಿಂಗ್ ನಿಯಂತ್ರಣ ಕಾಯ್ದೆ (PMLA) ಉಲ್ಲಂಘನೆ ಆರೋಪದ ಮೇಲೆ ಸಿಬಿಐ ಈ ಮೂವರ ಮೇಲೆ ಎಫ್ ಐಆರ್ ದಾಖಲಿಸಿದೆ. ಜಾರಿ ನಿರ್ದೇಶನಾಲಯ ಕೂಡಾ ಐಪಿಸಿ ಸೆಕ್ಷನ್ 120 ಬಿ, 409, 420 ಅನ್ವಯ ಪ್ರಕರಣ ದಾಖಲಿಸಿಕೊಂಡಿದೆ.












Click it and Unblock the Notifications