ವೆಲ್ಲೂರಿನಲ್ಲಿ ಮಹಿಳಾ ಕಾನ್ ಸ್ಟೇಬಲ್ ಮೇಲೆ ಆಸಿಡ್ ದಾಳಿ

By: ಅನುಷಾ ರವಿ
Subscribe to Oneindia Kannada

ವೆಲ್ಲೂರು, ಡಿಸೆಂಬರ್ 24: ಮಹಿಳಾ ಕಾನ್ ಸ್ಟೇಬಲ್ ಒಬ್ಬರ ಮೇಲೆ ಶುಕ್ರವಾರ ವೆಲ್ಲೂರಿನಲ್ಲಿ ಅಪರಿಚಿತ ದುಷ್ಕರ್ಮಿಗಳು ಆಸಿಡ್ ದಾಳಿ ಮಾಡಿದ್ದಾರೆ. ಮಹಿಳಾ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಲಾವಣ್ಯಾ ಅವರಿಗೆ ಮುಖ ಹಾಗೂ ಕತ್ತಿನ ಭಾಗದಲ್ಲಿ ಸುಟ್ಟಗಾಯಗಳಾಗಿವೆ. ಅದಕ್ಕಾಗಿ ವೆಲ್ಲೂರಿನ ಸಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಬ್ಬರು ದುಷ್ಕರ್ಮಿಗಳು ಎದುರಿನಿಂದ ಬಂದವರು ಆಕೆ ಮೇಲೆ ಆಸಿಡ್ ಎರಚಿದ್ದಾರೆ. ಲಾವಣ್ಯಾ ಅವರು ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದರು. ತಮ್ಮ ಸಹೋದರನ ಮನೆ ಬಳಿ ಅವರು ನಡೆದು ಹೋಗುತ್ತಿದ್ದ ವೇಳೆ ಇಬ್ಬರು ಅಪರಿಚಿತರು ಎದುರಿನಿಂದ ಬಂದವರೇ ಏಕಾಏಕಿ ಆಸಿಡ್ ದಾಳಿ ಮಾಡಿದ್ದಾರೆ.[ಕಪ್ಪು ಹಣದೊಂದಿಗೆ ಸಿಕ್ಕಿಬಿದ್ದ ಟಿಟಿಡಿ ಸದಸ್ಯ ಕಿಕ್ಡ್ ಔಟ್!]

Vellore police

ಗಂಭೀರವಾದ ಗಾಯಗಳಾಗಿದ್ದ ಅವರನ್ನು ತಕ್ಷಣವೇ ಸಿಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಕೆ ಮೇಲೆ ದಾಳಿ ನಡೆದ ವೇಳೆ ಪೊಲೀಸ್ ಸಮವಸ್ತ್ರದಲ್ಲಿದ್ದರು. ವೈಷಮ್ಯದ ಕಾರಣಕ್ಕೆ ಈ ರೀತಿ ದಾಳಿ ನಡೆದಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ವೆಲ್ಲೂರು ಪೊಲೀಸರು ದೂರು ದಾಖಲಿಸಿಕೊಂಡು, ಅಪರಾಧಿಗಳ ಪತ್ತೆಗಾಗಿ ಶೋಧ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A woman constable in Vellore was attacked with acid by miscreants on Friday. Lavanya, a constable with all Women's police station in Vellore suffered burns on her face and neck. Lavanya is being treated at Vellore CMC hospital.
Please Wait while comments are loading...