ರಿಲಯನ್ಸ್ ಕಮ್ಯುನಿಕೇಷನ್ ನಷ್ಟ, ವರ್ಷದ ಕನಿಷ್ಠ ಮಟ್ಟಕ್ಕೆ ಷೇರು ಬೆಲೆ

Posted By:
Subscribe to Oneindia Kannada

ರಿಲಯನ್ಸ್ ಕಮ್ಯುನಿಕೇಷನ್ ನ ಷೇರುಗಳು ಸೋಮವಾರ ಸಿಕ್ಕಾಪಟ್ಟೆ ಇಳಿಕೆ ಕಂಡಿದೆ. ಸತತವಾಗಿ ನಾಲ್ಕನೇ ತ್ರೈ ಮಾಸಿಕದಲ್ಲೂ ನಷ್ಟ ದಾಖಲಿಸಿದ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮುನಿಕೇಷನ್ ಕಂಪನಿಯ ಷೇರುಗಳು ವಾರ್ಷಿಕ ಕನಿಷ್ಠ ಮಟ್ಟವನ್ನು ತಲುಪಿದೆ. ಶನಿವಾರ ಕಂಪನಿ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆಯಾಗಿ 2,709 ಕೋಟಿ ನಿವ್ವಳ ನಷ್ಟವಾಗಿದೆ.

ಹೊಸ ದಾಖಲೆ ಬರೆದ ನಿಫ್ಟಿ, ದಿನಾಂತ್ಯಕ್ಕೆ 10,153.10

ಕಳೆದ ವರ್ಷದ ಇದೇ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ರಿಲಯನ್ಸ್ ಕಮ್ಯುನಿಕೇಷನ್ ಕಂಪನಿ 62 ಕೋಟಿ ರುಪಾಯಿ ಲಾಭ ದಾಖಲಿಸಿತ್ತು. ಹೀನಾಯ ಫಲಿತಾಂಶದ ಕಾರಣಕ್ಕೆ ಕಂಪನಿ ಷೇರುಗಳು ಬಿಎಸ್ ಇಯಲ್ಲಿ ಶೇ 13.87ರಷ್ಟು ಕುಸಿತ ಕಂಡು ವಾರ್ಷಿಕ ಕನಿಷ್ಠ ಮಟ್ಟವಾದ ರು. 12.10ಕ್ಕೆ ತಲುಪಿತು.

Reliance Communication stock falls to yet another record low

ರಿಲಯನ್ಸ್ ಕಮ್ಯುನಿಕೇಷನ್ ಕಂಪನಿಯ ಸಾಲ ಒಟ್ಟು 45 ಸಾವಿರ ಕೋಟಿ ರುಪಾಯಿ ಇದೆ. ಅದರಲ್ಲಿ 25 ಸಾವಿರ ಕೋಟಿ ರುಪಾಯಿ ದೇಶದೊಳಗೆ ಪಡೆದಿರುವ ಸಾಲವಾದರೆ, 20 ಸಾವಿರ ಕೋಟಿ ರುಪಾಯಿ ವಿದೇಶಗಳಿಂದ ಸಾಲ ಹಾಗೂ ಬಾಂಡ್ ವಿತರಿಸಿ ಪಡೆಯಲಾಗಿದೆ.

ಷೇರು ಮಾರುಕಟ್ಟೆಯಲ್ಲಿ ಸೋಮವಾರ ಬೆಳಗಿನ ಅವಧಿಯಲ್ಲಿ ಹಲವು ಷೇರುಗಳು ಕುಸಿತ ಕಂಡವು. ದಿನದ ಕೊನೆಗೆ ಸೆನ್ಸೆಕ್ಸ್ 281 ಅಂಶ ಹಾಗೂ ನಿಫ್ಟಿ 96.80 ಅಂಶಗಳ ಕುಸಿತ ಕಂಡವು. ಇನ್ನು ರಿಲಯನ್ಸ್ ಕಮ್ಯುನಿಕೇಷನ್ ಷೇರುಗಳು ದಿನದ ಕೊನೆಗೆ ಶೇ 13.52ರಷ್ಟು ಕುಸಿತವಾಗಿ ರು.12.15ಕ್ಕೆ ವಹಿವಾಟು ಮುಗಿಸಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Reliance Communications shares plunged heavily and hit a record low on Monday after the Anil Ambani led telecom company RCom loss widened in the second-quarter of FY 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ