280 ಕೋಟಿ ರೂ. ವಂಚನೆ ಪ್ರಕರಣ, ನೀರವ್ ಮೋದಿ ಮೇಲೆ ಸಿಬಿಐ ಎಫ್ಐಆರ್

Subscribe to Oneindia Kannada

ನವದೆಹಲಿ, ಫೆಬ್ರವರಿ 5: 280 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಖ್ಯಾತ ಆಭರಣ ವಿನ್ಯಾಸಗಾರ ನೀರವ್ ಮೋದಿಯನ್ನು ಸಿಬಿಐ ಆರೋಪಿಯನ್ನಾಗಿ ಹೆಸರಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ರೂ. 280 ಕೋಟಿ ರೂಪಾಯಿ ವಂಚನೆ ನಡೆಸಿದ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ನೀರವ್ ಮೋದಿ ಜತೆ ನಿಶಾಲ್ ಮೋದಿ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.

ಸೆಲಬ್ರಿಟಿ ಆಭರಣ ವಿನ್ಯಾಸಗಾರ ಮತ್ತು ಶತಕೋಟ್ಯಾಧಿಪತಿ ಉದ್ಯಮಿ ನೀರವ್ ಮೋದಿಗೆ ಸೇರಿದ ದೆಹಲಿ, ಸೂರತ್ ಮತ್ತು ಜೈಪುರ್ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಜನವರಿ 31ರಂದು ದಾಳಿ ನಡೆಸಿದ್ದರು.

CBI books top jeweler Nirav Modi Charged in Rs 280-crore cheating case

230 ಕೋಟಿ ಡಾಲರ್ ಮೊತ್ತದ ಫೈರ್ ಸ್ಟಾರ್ ಡೈಮಂಡ್ ಎಂಬ ಕಂಪನಿಯನ್ನು ನೀರವ್ ಮೋದಿ ಸ್ಥಾಪಿಸಿದ್ದು ವಿಶ್ವದ ಹಲವು ಗಣ್ಯರು ಇವರ ಗ್ರಾಹಕರಾಗಿದ್ದಾರೆ.

ಮೋದಿಯವರ ಡಿಸೈನರ್ ಆಭರಣಗಳ ಶೋರೂಂ ಲಂಡನ್, ನ್ಯೂಯಾರ್ಕ್, ಲಾಸ್ ವೇಗಾಸ್, ಹವಾಯಿ, ಸಿಂಗಾಪುರ್, ಬೀಜಿಂಗ್ ಮತ್ತು ಮಕಾವ್ ನಲ್ಲಿವೆ. ಭಾರತದಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಮೋದಿ ತಮ್ಮ ವಿಶಿಷ್ಟ ವಿನ್ಯಾಸದ ಆಭರಣಗಳ ಶೋರೂಂಗಳನ್ನು ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Central Bureau of Investigation (CBI) books businessmen Nirav Modi, Nishal Modi and PNB officials for cheating the Punjab National Bank to the tune of Rs 280.7 crores.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ