• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಸುಧೇಂದ್ರ, ವೈದ್ಯರ ಕಥೆ ಆಧಾರಿತ ನಾಟಕ ನೋಡಿ

By Mahesh
|

ಬೆಂಗಳೂರು, ನ.18: ಸಾಹಿತಿ ಶ್ರೀನಿವಾಸ ವೈದ್ಯ ಹಾಗೂ ವಸುದೇಂಧ್ರ ರವರ ಸಣ್ಣಕಥೆಗಳ ಆಧಾರಿತ ರಂಗಪ್ರಯೋಗಕ್ಕೆ ಮತ್ತೊಮ್ಮೆ ರಂಗಶಂಕರ ಸಜ್ಜಾಗಿದೆ. ನ.20ರಂದು ವಟಿ ಕುಟೀರ ತಂಡ ಪ್ರಸ್ತುತಪಡಿಸುವ ಈ ನಾಟಕದ ಬಗ್ಗೆ ಎಂಎಸ್ ಪ್ರಸಾದ್ ಅವರು ಬರೆದಿರುವ ಲೇಖನ ಇಲ್ಲಿದೆ.

ಶ್ರದ್ಧ ಮತ್ತು 'ಸ್ಟೇನ್ ಲೆಸ್' ಸ್ಟೀಲ್ ಪಾತ್ರೆಗಳು: ಶ್ರೀನಿವಾಸ ವೈದ್ಯ ಹಾಗೂ ವಸುದೇಂಧ್ರ ರವರ ಸಣ್ಣಕಥೆಗಳ ಆಧಾರಿತ ರಂಗಪ್ರಯೋಗ. ರೆಕ್ಕೆ ಪುಕ್ಕಗಳಿಲ್ಲದೆ ಮನುಜ ಹಾರಾಡುತ್ತಾನೆ, ಇನ್ನೇನಾದರು ಆತನ ಕೈಯಲ್ಲಿ ಎಲ್ಲವು ಆಗುವಂತಿದ್ದರೆ ಆ ಭಗವಂತನು ಸೋತು ಶರಣಾಗುತ್ತಿದ್ದನೇನೋ. ನಾನು ನನ್ನದು ಎನ್ನುವ ನಾಗಾಲೋಟದಲ್ಲಿ ತನ್ನತನವನ್ನೇ ಮರೆತಿರುವ ಮಾನವ ತಾ ನಡೆದಾಡಿದ ಹಾದಿ, ತೊದಲಿನಿಂದ ಕಲಿತ ಮಾತು, ಕಲಿತ ವಿದ್ಯಾಬುದ್ದಿ ಎಲ್ಲವು ತಾನಾಗಿ ಕಲಿತವನಂತೆ ಮೆರೆಯುತ್ತಿದ್ದಾನೆ.

ಬೆಳವಣಿಗೆಯ ನೆಪದಲ್ಲಿ ಕಾಲಚಕ್ರದೊಂದಿಗೆ ಶರವೇಗದಲ್ಲಿ ಉರುಳಿಹೋಗುತ್ತಿರುವ ನನ್ನವರು ಎಂಬ ಬಂಧನದಿಂದ ದಿನೆ ದಿನೇ ದೂರ ಹೋಗುತ್ತಿದ್ದಾನೆ, ಮೌನದಲ್ಲಿ ಮಾತನ್ನು ಹುಡುಕುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾನೆ. ಆಸೆಯೆಂಬ ಬಿಸಿಲು ಕುದುರೆಯ ಬೆನ್ನಟ್ಟಿ ಬದಲಾವಣೆ, ಜಾಗತೀಕರಣವೆಂಬ ನೆಪವ ಹೇಳುತ್ತಾ, ತಾನು ಮಾಡುತ್ತಿರುವ ತಪ್ಪನ್ನು ಒಪ್ಪಿಕೊಳ್ಳದ ಸ್ಥಿತಿ ತಲುಪಿದ್ದಾನೆ.

ನಮ್ಮ ದಿನ ನಿತ್ಯದ ಜಂಜಾಟದಲ್ಲಿ ಏನೆಲ್ಲಾ ಮರೆತಿದ್ದೇವೆ ಎಂದು ನೆನಪಿಸಲು ವಟಿ ಕುಟೀರ ಎರೆಡು ಸುಂದರ ನಾಟಕಗಳನ್ನು ನ.20ರಂದು ರಂಗಶಂಕರದಲ್ಲಿ ನಿಮ್ಮ ಮುಂದೆ ತರಲಿದೆ.

ಮೌಲ್ಯಗಳ ಮರೆತಿರುವ ಈ ಕಾಲದಲ್ಲಿ ಈ ರಂಗ ಪ್ರಯೋಗ ಸ್ವಾಗತಾರ್ಹ, ವಸುಧೇಂದ್ರ ಅವರ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆ ಹಾಗು ಶ್ರೀನಿವಾಸ್ ವೈದ್ಯರ ಶ್ರದ್ಧಾ. ತಾಯಿ ತಂದೆ ಇಬ್ಬರು ಕಣ್ಣಿಗೆ ಕಾಣುವ ದೇವರು ಎನ್ನುವ ಹಿರಿಯರ ನಾಣುಡಿಯನ್ನು ಆಧುನಿಕತೆಗೆ ಸಿಲುಕಿ ಬದಲಾಗಿದೆ, ತಂದೆ, ತಾಯಿಯನ್ನು ಮೂಲೆಗುಂಪಾಗಿಸಿ ರಜ ಸಿಕ್ಕಾಗಲೆಲ್ಲ ದೇವರನ್ನು ಹುಡುಕುತ್ತ ಊರು ಕೇರಿಯಾದಿಗೆ ಹುಡುಕುತ್ತಾ ಸಾಗಿದ್ದಾನೆ. ಈ ರಂಗ ಪ್ರಯೋಗದ ಸಾರ್ಥಕತೆ ತಂದೆ ತಾಯಿಯನ್ನು ಪ್ರೀತಿಸುವವರು ಪ್ರತಿಯೊಬ್ಬರೂ ನೋಡಿದಾಗ ಮಾತ್ರ.

ಮಡದಿಯಾಗಿ ಹೊಸ ಮನೆ ಸೇರುವ ಹೆಣ್ಣು, ಆ ಮನೆಯ ಸೊಸೆಯಾಗಿ ಬೆಳಗುವ ನಂದಾದೀಪವಾಗಿ, ಅಮ್ಮನಾಗಿ, ಅಜ್ಜಿಯಾಗಿ ಆಯಾ ಪಾತ್ರಗಳಿಗೆ ಒಗ್ಗಿಕೊಳ್ಳುವಂತೆ ಅವಳ ಸುತ್ತ ಹುಟ್ಟಿ ನಿಲ್ಲುವ ಸಮಸ್ಯೆಗಳನ್ನು ಎದೆ ಗುಂದದೆ ಹೇಗೆ ನಿಭಾಯಿಸುತ್ತಾಳೆ, ಹಾಗೆಯೇ ರೈಲಿನಲ್ಲಿ ತಿರುಪತಿಗೆ ಹೋಗುವಾಗ ಕಳೆದು ಹೋದ ಲೋಟವನ್ನು ಮರೆಯುವುದೇ ಇಲ್ಲ. ಫಳ ಫಳ ಹೊಳೆಯುವ ಪಾತ್ರೆಗಳಲ್ಲಿ ತನ್ನ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಅಮ್ಮ ತಾನಿರಲಿ ಬಿಡಲಿ ನಮ್ಮ ಮನದಲ್ಲಿ ನಮ್ಮೊಂದಿಗೆ ಸದಾ ಇರುತ್ತಾಳೆ.

ಅಪ್ಪ ಬರಲಿ ಇರು ನೀ ಮಾಡಿದ್ದು ಹೇಳ್ತೀನಿ ಅಂದಾಗ ಎಲ್ಲಾ ಮಕ್ಕಳು ಹೆದರುವುದು ಸಹಜ, ಗಡಸು ಸ್ವಭಾವ, ಕೋಪಿಷ್ಠ, ಬಹಳ ಶಿಸ್ತು ಎನ್ನುವ ಪದಗಳೇ ಅಪ್ಪನನ್ನು ಪ್ರತಿಬಿಂಬಿಸುವುದು ಸಹಜ ಆದರೆ ಅದರ ಹಿಂದೊಂದು ಪ್ರೀತಿಸುವ ಮನಸಿದೆ, ಆಶಿಸುವ ಹೃದಯವಿದೆ, ಪ್ರೋತ್ಸಾಹಿಸುವ ಶ್ರೀಮಂತಿಕೆ ಇದೆ ಎನ್ನುವುದು ಅರಿಯದೆ ಹೋಗಿದ್ದೇವೆ. ಚಳಿಯಿರಲಿ, ಮಳೆಯಿರಲಿ, ಸುಡುವ ಬಿಸಿಲೆ ಇರಲಿ ನಮ್ಮನ್ನು ರಕ್ಷಿಸುವ ಅಪ್ಪನ ಆ ಔದಾರ್ಯತೆ ನಮ್ಮನ್ನು ಸೋಕಿದಾಗ ಅವರ ತ್ಯಾಗದ ಮುಂದೆ ನಾವು ಕುಬ್ಜರಾಗಿಬಿಡುತ್ತೇವೆ.

ಪಾತ್ರಧಾರಿಗಳು: ಗಣೇಶ್ ಶಣೈ, ಪ್ರಾಚೀ ದೇಶಪಾಂಡೆ, ಕೀರ್ತಿಭಾನು, ಹರೀಶ್ ಸೋಮಯಾಜಿ, ಕಿರಣ್ ವಟಿ.

ನಿರ್ದೇಶನ : ಕಿರಣ್ ವಟಿ

ಸಂಗೀತ : ಸತೀಶ್ ಕೆ. ಎಸ್.

ಬೆಳಕು : ಸುನಿಲ್

ನಾಟಕದ ಅವಧಿ: 7.30 ರಿಂದ 9.00

ದಿನಾಂಕ / ದಿನ: ನವೆಂಬರ್ 20, ಗುರುವಾರ

ಆನ್ ಲೈನ್ ಟಿಕೆಟ್ ಖರೀದಿಸಲು : ಬುಕ್ ಯುವರ್ ಇವೆಂಟ್.ಕಾಂ ಗೆ ಭೇಟಿ ಕೋಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vati Kutira team Bengaluru presents two Kannada Plays Shraddha and 'Stainless Steel Patre' based on short stories of Srinivas Vaidya and Vasudhendra. Both the play will be staged at Rangashankara,JP Nagar, Benagluru on Nov 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more