ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಕೈಮಗ್ಗ ದಿನಾಚರಣೆ ಬಗ್ಗೆ ಮಂಡ್ಯದ ರಮ್ಯಾ ಟ್ವೀಟ್

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 07: ಖಾದಿ ಬಳಸಿ, ಕೈಮಗ್ಗ ಉಳಿಸಿ, ಬಡತನ ಅಳಿಸಿ ಎಂದು ಚೆನ್ನೈನಲ್ಲಿ ಪ್ರಧಾನಿ ಮೋದಿ ಅವರು ಭಾಷಣ ಮಾಡುವ ವೇಳೆಗೆ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಬಗ್ಗೆ ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದಾರೆ.

ಮದ್ರಾಸ್ ವಿಶ್ವವಿದ್ಯಾಲಯದ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಲಾದ ಸಮಾರಂಭದಲ್ಲಿ ಮೋದಿ ಅವರು ರಾಷ್ಟ್ರೀಯ ಕೈಮಗ್ಗ ದಿನಾಚರಣೆಗೆ ಚಾಲನೆ ನೀಡಿದರು.[ಬಡತನದ ವಿರುದ್ಧ ಹೋರಾಟಕ್ಕೆ ಕೈಮಗ್ಗ ಅಸ್ತ್ರವಾಗಲಿ: ಮೋದಿ]

1905ರ ಸ್ವದೇಶಿ ಚಳುವಳಿ ನೆನಪಿಗಾಗಿ ಆಗಸ್ಟ್ 7ನ್ನು ಕೈಮಗ್ಗ ದಿನಾಚರಣೆಯನ್ನಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಪ್ರತಿ ವರ್ಷ ಈ ದಿನದಂದು ಸಂತ ಕಬೀರ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ ಹೊಸ ಕೈಮಗ್ಗ ಬ್ರ್ಯಾಂಡ್ ಹಾಗೂ ಕೈಮಗ್ಗ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಅದರೆ, ಕೈಮಗ್ಗ ದಿನಾಚರಣೆ ಬಗ್ಗೆ ಅಪಸ್ವರ ಎತ್ತಿರುವ ರಮ್ಯಾ ಅವರು ಮೊದಲು ಚೀನಾದಿಂದ ರೇಷ್ಮೆ ಆಮದು ನಿಲ್ಲಿಸಿ, ಅಮೆರಿಕಕ್ಕೆ ಬ್ರೆಜಿಲ್ ನೀಡಿದ ಉತ್ತರದಂತೆ ನಿಮ್ಮ ಪ್ರತಿಕ್ರಿಯೆ ಸಿಗಲಿ, ನಮ್ಮ ರೈತರಿಗೂ ಬೆಲೆ ಸಿಗಲಿ ಎಂದಿದ್ದಾರೆ. ಸತ್ತ ಮನುಷ್ಯನ ಹುಟ್ಟುಹಬ್ಬ ಆಚರಿಸಿದಂತೆ ಕೈಮಗ್ಗ ದಿನಾಚರಣೆ ನನಗೆ ಕಾಣಿಸುತ್ತಿದೆ ಎಂದು ರಮ್ಯಾ ಹೇಳಿದ್ದಾರೆ.

ಚೆನ್ನೈನಲ್ಲಿ ನಡೆದ ಕೈಮಗ್ಗ ದಿನಾಚರಣೆ

ಚೆನ್ನೈನಲ್ಲಿ ನಡೆದ ಕೈಮಗ್ಗ ದಿನಾಚರಣೆ

ಪ್ರತಿ ವರ್ಷ ಈ ದಿನದಂದು ಸಂತ ಕಬೀರ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ ಹೊಸ ಕೈಮಗ್ಗ ಬ್ರ್ಯಾಂಡ್ ಹಾಗೂ ಕೈಮಗ್ಗ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಕಸದ ಮಾರುಕಟ್ಟೆಯಾಗಿದೆ

ಭಾರತ ಕಸದ ಮಾರುಕಟ್ಟೆಯಾಗಿದೆ, ಚೀನಾ ತನ್ನ ಕಳಪೆ ರೇಷ್ಮೆಯನ್ನು ಇಲ್ಲಿ ತಂದು ಬಿಸಾಕುತ್ತಿದೆ. ಇದನ್ನು ಮೊದಲು ತಡೆಗಟ್ಟಿ.

ರೇಷ್ಮೆ ಮೇಲೆ ಆಮದು ಸುಂಕ ತಗ್ಗಿಸಿದ್ದು ಏಕೆ?

ರೇಷ್ಮೆ ಮೇಲೆ ಆಮದು ಸುಂಕ ತಗ್ಗಿಸಿದ್ದು ಏಕೆ? ರೇಷ್ಮೆ ಆಮದು ಮಾಡಿಕೊಳ್ಳಲೇ ಬೇಕೆ? ಕೈ ಮಗ್ಗ ನಂಬಿಕೊಂಡು ಹಲವಾರು ಮಂದಿ ನಷ್ಟ ಅನುಭವಿಸಿದ್ದಾರೆ.

ಸತ್ತ ಮನುಷ್ಯನ ಬರ್ಥ್ ಡೇ ಮಾಡಿದಂತೆ ಇದೆ

ಕೈಮಗ್ಗ ದಿನಾಚರಣೆ ಸತ್ತ ಮನುಷ್ಯನ ಬರ್ಥ್ ಡೇ ಮಾಡಿದಂತೆ ಇದೆ.

ರಮ್ಯಾ ಟ್ವೀಟ್ ಗೆ ಪ್ರತಿಕ್ರಿಯೆ

ರಮ್ಯಾ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸಾರ್ವಜನಿಕರೊಬ್ಬರು, ಕರ್ನಾಟಕ ಸರ್ಕಾರ ಕೂಡಾ ಈ ಬಗ್ಗೆ ಅನೇಕ ಬಾರಿ ಮೋದಿ ಸರ್ಕಾರದ ಗಮನ ಸೆಳೆದಿದೆ ಎಂದಿದ್ದಾರೆ.

ಮೋದಿ ಅವರು ಇದೇ ರೀತಿ ಪುಣೆ ಸಂಸ್ಥೆಗೂ ಹೋಗಿ ಬರ್ಲಿ

ಮೋದಿ ಅವರು ಬಾಹುಬಲಿ ತಂಡವನ್ನು ಮೀಟ್ ಮಾಡಿದಂತೆ ಪುಣೆ ಫಿಲಂ ಸಂಸ್ಥೆಗೂ ಹೋಗಿ ಬರ್ಲಿ.

ಕೃಷಿ ನಂತರ ಅತಿದೊಡ್ಡ ಕ್ಷೇತ್ರ

ಕೃಷಿ ನಂತರ ಅತಿದೊಡ್ಡ ಕ್ಷೇತ್ರವಾಗಿರುವ ಜವಳಿ ಉದ್ಯಮ. 43 ಲಕ್ಷ ಕಾರ್ಯನಿರತರಾಗಿದ್ದಾರೆ.

ಕೈಮಗ್ಗ ದಿನಾಚರಣೆ ಚಿತ್ರಗಳು

ಕೈಮಗ್ಗ ದಿನಾಚರಣೆ ಚಿತ್ರಗಳು ಟ್ವೀಟ್

ಖಾದಿ ಬಟ್ಟೆ ಖರೀದಿಸಿದೆ ಎಂದ ಸಾರ್ವಜನಿಕರು

ಖಾದಿ ಬಟ್ಟೆ ಖರೀದಿಸಿದೆ ಎಂದ ಸಾರ್ವಜನಿಕರು

English summary
Prime Minister Narendra Modi today(Aug 07) launched the National Handloom Day. Former MP from Mandya Ramya and many others tweeted about the Handloom day. Here the reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X