ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರು ತಿಂಗಳ ಕಾಲ ಬೆಂಗಳೂರಿನ ಟೌನ್ ಹಾಲ್ ಬಂದ್

|
Google Oneindia Kannada News

ಬೆಂಗಳೂರು, ಜೂ. 25 : ಬೆಂಗಳೂರಿನ ಟೌನ್ ಹಾಲ್ ನಲ್ಲಿ ಇನ್ನು ಮೂರು ತಿಂಗಳ ಕಾಲ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ಟೌನ್ ಹಾಲ್ ನವೀಕರಣ ಕಾಮಗಾರಿ ಕೈಗೊಂಡಿದ್ದು, ಬುಧವಾರದಿಂದ ಈ ಕಾಮಗಾರಿ ಆರಂಭಗೊಂಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೊಂಡಿರುವ ಕಾಮಗಾರಿಗೆ ಬುಧವಾರ ಮೇಯರ್ ಕಟ್ಟೆ ಸತ್ಯನಾರಾಯಣ ಚಾಲನೆ ನೀಡಿದ್ದಾರೆ. ಸುಮಾರು ಮೂರು ತಿಂಗಳಿನಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅಲ್ಲಿಯ ತನಕ ಟೌನ್ ಹಾಲ್ ನಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ.

renovation work at Town Hall

ಸುಮಾರು 4.92 ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿ ಈ ನವೀಕರಣ ಕಾಮಗಾರಿಯನ್ನು ಕೈಗೊಂಡಿದೆ. 1935ರಲ್ಲಿ ಟೌನ್ ಹಾಲ್ ನಿರ್ಮಾಣವಾದ ನಂತರ ಹಲವಾರು ಸಾಂಸ್ಕೃತಿಕ, ಧಾರ್ಮಿಕ, ಮನರಂಜನೆ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿರುವ ಟೌನ್ ಹಾಲ್ ನಲ್ಲಿ ಮುಂದಿನ ಮೂರು ತಿಂಗಳ ಕಾಲ ಯಾವುದೇ ಕಾರ್ಯಕ್ರಮ ಇರುವುದಿಲ್ಲ.

ಟೌನ್ ಹಾಲ್ ಕಾಮಗಾರಿಯ ಬಗ್ಗೆ ಮೊದಲೇ ಯೋಜನೆ ರೂಪಿಸಿದ್ದ ಬಿಬಿಎಂಪಿ ಕಳೆದ ಕೆಲವು ತಿಂಗಳಿನಿಂದ ಟೌನ್ ಹಾಲ್ ನಲ್ಲಿನ ಕಾರ್ಯಕ್ರಮಗಳ ಬುಕ್ಕಿಂಗ್ ರದ್ದುಗೊಳಿಸುತ್ತು. ಸದ್ಯ ಮೊದಲೇ ಬುಕ್ ಆಗಿದ್ದ ಎಲ್ಲಾ ಕಾರ್ಯಕ್ರಮಗಳು ಮುಗಿದಿದ್ದು, ನವೀಕರಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕನ್ಸಲ್ಟನ್ಸಿ ಎಂಬ ಕಂಪನಿಗೆ ಟೌನ್ ಹಾಲ್ ನವೀಕರಣದ ಕಾಮಗಾರಿಯ ಟೆಂಡರ್ ನೀಡಲಾಗಿದೆ. ಸುಮಾರು 4.92 ಕೋಟಿ ರೂ. ವೆಚ್ಚದ ಈ ಕಾಮಗಾರಿ ಸುಮಾರು ಮೂರು ತಿಂಗಳಿನಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ನಂತರ ಟೌನ್ ಹಾಲ್ ನಲ್ಲಿ ಕಾರ್ಯಕ್ರಮಗಳು ಪುನಃ ಆರಂಭವಾಗಲಿವೆ.

ಏನು ಕಾಮಗಾರಿಗಳು : ಟೌನ್ ಹಾಲ್ ನಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಮುಖ್ಯವಾಗಿ, ಧ್ವನಿವರ್ಧಕ ವ್ಯವಸ್ಥೆ, ಗೋಡೆಗಳ ಪಾಸ್ಟಿಂಕ್ ಕಾರ್ಯ, ಬೆಳಕಿನ ವ್ಯವಸ್ಥೆ, ಟೈಲ್ಸ್ ಗಳ ಬದಲಾವಣೆ ಮುಂತಾದ ಕಾಮಗಾರಿಗಳು ನಡೆಯಲಿವೆ. [ಕೆನರಾ ಬ್ಯಾಂಕಿಗೆ ಟೌನ್ ಹಾಲ್ ಅಡವಿಡಲು ಬಿಬಿಎಂಪಿ ಸಜ್ಜು?]

ಉಳಿದಂತೆ ಸೀಟುಗಳನ್ನು ಸರಿಪಡಿಸುವುದು, ಹಮಾನಿಯಂತ್ರಿತ ವ್ಯವಸ್ಥೆ ಮುಂತಾದವುಗಳು ಆಧುನೀಕರಣಗೊಳ್ಳಲಿವೆ. ಒಟ್ಟಾರೆ ಮೂರು ತಿಂಗಳ ಕಾಮಗಾರಿ ಪೂರ್ಣಗೊಂಡ ನಂತರ ಟೌನ್ ಹಾಲ್ ಆಧುನಿಕವಾಗಿ ಸಿಂಗಾರಗೊಂಡು ಜಗಮಗಿಸಲಿದೆ.

ಟೌನ್ ಹಾಲ್ ಕುರಿತು : ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ನಗರದ ಹೃದಯ ಭಾಗದಲ್ಲಿರುವ ಟೌನ್ ಹಾಲ್ ಸಹ ಒಂದಾಗಿದೆ.ಬೆಂಗಳೂರು ನಗರಸಭೆ ಅಧ್ಯಕ್ಷರಾಗಿದ್ದ ಪುಟ್ಟಣ್ಣ ಚೆಟ್ಟಿ ಅವರ ಹೆಸರನ್ನು ಇದಕ್ಕೆ ಇಡಲಾಗಿದ್ದು (ಟೌನ್ ಹಾಲ್) ಎಂದು ಪ್ರಸಿದ್ಧಿಯಾಗಿದೆ.

1933ರ ಮಾರ್ಚ್ 6ರಂದು ಮೈಸೂರಿನ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಟೌನ್ ಹಾಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸೆಪ್ಟೆಂಬರ್ 11, 1935ರಂದು ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. 1976, 1990ರಲ್ಲಿ ಇದನ್ನು ನವೀಕರಣ ಮಾಡಲಾಗಿದೆ. ಎರಡು ಅಂತಸ್ತಿನ ಟೌನ್ ಹಾಲ್ ನಲ್ಲಿ 1038 ಆಸನ ವ್ಯವಸ್ಥೆ ಇದೆ.

English summary
Bruhat Bangalore Mahanagara Palike (BBMP) begins renovation work at Town Hall form Wednesday, June 24. The town hall will be closed for the next three months for the work. Rs 4.92 crore spending for renovate Town Hall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X