ಹೂಡಿ ರೈಲ್ವೆ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಸಂಪರ್ಕ ಕೊರತೆ

ಬೆಂಗಳೂರು, ಏಪ್ರಿಲ್ 23: ಐಟಿ ನೌಕರರು, ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳು, ಕೂಲಿಕಾರರು ಸೇರಿದಂತೆ ನಿತ್ಯ ಸಹಸ್ರಾರು ನೌಕರರ ಸಂಚಾರಕ್ಕೆ ಅನುಕೂಲಕರವಾಗಿರುವ ಹೂಡಿ ಹಾಲ್ಟ್ ರೈಲ್ವೆ ನಿಲ್ದಾಣ ಸಂಪರ್ಕ ಬಸ್‌ಗಳ ಸಂಚಾರವಿಲ್ಲದೇ ದಿನದಿಂದ ದಿನಕ್ಕೆ ಅನುಪಯುಕ್ತವಾಗುವ ಅಪಾರ ಎದುರಿಸುತ್ತಿದೆ.

ಹೂಡಿ ಹಾಲ್ಟ್ ಸ್ಟೇಶನ್‌ನಿಂದ ನಿಗದಿತ ಸ್ಥಳಕ್ಕೆ ತಲುಪಬೇಕಾದರೆ ಆ್ಯಪ್ ಆಧರಿತ ಖಾಸಗಿ ಕ್ಯಾಬ್‌ಗಳನ್ನೇ ಬಳಸುವ ಅನಿವಾರ್ಯತೆಯಿಂದ ಈ ನಿಲ್ದಾಣ ಪ್ರಯಾಣಿಕರಿಗೆ ಕ್ರಮೇಣ ದುಬಾರಿ ಎನಿಸಲು ಆರಂಭವಾಗಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಸಂಸದ ಪಿ.ಸಿ.ಮೋಹನ್ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 2.75 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೂಡಿ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ಲಾಟ್‌ಫಾರ್ಮ್, ಶೆಲ್ಟರ್, ಬುಕಿಂಗ್ ಕೌಂಟರ್ ಹಾಗೂ ಮತ್ತಿತರ ಸೌಲಭ್ಯಗಳನ್ನು ನಿಲ್ದಾಣ ಒಳಗೊಂಡಿದ್ದು, ಉದ್ಯೋಗಿಗಳು ನಿತ್ಯ ಪ್ರಯಾಣಕ್ಕಾಗಿ ಇದೇ ನಿಲ್ದಾಣ ಆಶ್ರಯಿಸಿದ್ದಾರೆ.

Suburban train passengers rue lack of bus connectivity

ಆದರೆ ಇಲ್ಲಿಂದ ತಮ್ಮ ಉದ್ಯೋಗದ ಸ್ಥಳಕ್ಕೆ ತೆರಳಲು ಬಸ್ ಗಳ ಸಂಪರ್ಕವಿಲ್ಲದೇ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೆ.ಆರ್.ಪುರಂ ಹಾಗ ವೈಟ್ ಫೀಲ್ಡ್ ನಡುವೆ ಈ ನಿಲ್ದಾಣ ಇರುವುದರಿಂದ ಐಟಿಪಿಎಲ್‌ನಿಂದ ನಿತ್ಯ ಸಾವಿರಾರು ಪ್ರಯಾಣಿಕರು ಬರುತ್ತಾರೆ.

ಈ ನಿಲ್ದಾಣದಲ್ಲಿ ನಿತ್ಯ 27 ರೈಲುಗಳ ನಿಲುಗಡೆ ಒದಗಿಸಲಾಗಿದೆ. ಬೆಳಗ್ಗೆ ಅವಧಿಯಲ್ಲಂತೂ ಪ್ರಯಾಣಿಕರು ರೈಲ್ವೆ ನಿಲ್ದಾಣದಿಂದ ತೆರಳಲು ಕ್ಯಾಬ್‌ಗಳಿಗಾಗಿ ಸುಮಾರು ಸಮಯ ಕಾಯಬೇಕಾಗುತ್ತದೆ. ಆದರೆ ಬಿಎಂಟಿಸಿ ಇದಕ್ಕೆ ತನ್ನದೇ ಸಮಸ್ಯೆ ಹೇಳುತ್ತಿದೆ. ಹೂಡಿ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆ ತೀರಾ ಕಿರಿದಾಗಿವೆ. ಹೀಗಾಗಿ ಬಸ್‌ಗಳ ಸಂಚಾರಕ್ಕೆ ಪೂರಕವಾದ ವಾತಾವರಣ ಇಲ್ಲ ಎನ್ನುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+