ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳೆಯುವುದು ಕತ್ತಲೆಯ ಕಾಲ; ಬೆಂಗಳೂರಿನ ಬೀದಿ ಬೀದಿಗಳಲ್ಲೂ 'ಹೊಸ ಬೆಳಕು'!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ಭಾರತದ ಐಟಿ ನಗರ ಎನಿಸಿರುವ ಸಿಲಿಕಾನ್ ಸಿಟಿಯಲ್ಲಿ ಎಲ್ಲಾ ಸೋಡಿಯಂ ಆವಿ ದೀಪಗಳಿಗೆ ಅಂತ್ಯಕಾಲ ಬಂದಿದೆ. ಬೆಂಗಳೂರು ಮಹಾನಗರದ ಮೂಲೆ ಮೂಲೆಗಳಲ್ಲೂ ಕೇಂದ್ರೀಕೃತ ನಿಯಂತ್ರಣ ಮತ್ತು ಮಾನಿಟರಿಂಗ್ ಸಿಸ್ಟಮ್ (CCMS) ಜೊತೆಗೆ 'ಸ್ಮಾರ್ಟ್ ಇಂಟೆಲಿಜೆಂಟ್ LED ದೀಪಗಳು ಬೆಳಕು ಚೆಲ್ಲಲಿವೆ.

ಇನ್ನೆರಡು ತಿಂಗಳಲ್ಲಿ ನಗರದ ಎಂಟು ವಲಯಗಳಲ್ಲಿ ಮೇಲ್ದರ್ಜೆಗೇರಿದ ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರವನ್ನು ಹಳದಿ ಬೆಳಕಿನಲ್ಲಿ ಆವರಿಸಿರುವ 4.85 ಲಕ್ಷ ಸೋಡಿಯಂ ಆವಿ ದೀಪಗಳನ್ನು ಎಲ್‌ಇಡಿ ದೀಪಗಳಿಂದ ಬದಲಾಯಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ: ರಾಜಕಾಲುವೆ ಅಗಲೀಕರಣಕ್ಕಾಗಿ 60 ಮರ ಕತ್ತರಿಸಲು ನಿರ್ಧಾರಬಿಬಿಎಂಪಿ: ರಾಜಕಾಲುವೆ ಅಗಲೀಕರಣಕ್ಕಾಗಿ 60 ಮರ ಕತ್ತರಿಸಲು ನಿರ್ಧಾರ

ಸಿಲಿಕಾನ್ ಸಿಟಿಯಲ್ಲಿ ಬೆಳಕು ಚೆಲ್ಲುವ ಹೊಸ ಟೆಕ್ನಾಲಜಿಯ ಬೀದಿ ದೀಪಗಳು ಹೇಗಿರಲಿವೆ? ಈ ಹೊಸ ಬೀದಿ ದೀಪಗಳಿಂದ ಬೆಂಗಳೂರು ಮಂದಿಗೆ ಏನೆಲ್ಲಾ ಲಾಭ? ಕಳ್ಳ-ಕಾಕರಿಗೆ ಬೀದಿ ಪುಡಾರಿಗಳಿಗೆ ಹೇಗೆ ಕಂಟಕವಾಗುತ್ತವೆ? ಪೊಲೀಸ್ ಪಡೆಗೆ ಈ ಬೀದಿ ದೀಪಗಳು ಹೇಗೆ ದಾರಿ ದೀಪಗಳಾಗುತ್ತವೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಎಲ್‌ಇಡಿ ಲೈಟ್‌ಗಳಿಂದ ಇಂಧನ ವ್ಯರ್ಥ ಇಳಿಕೆ

ಎಲ್‌ಇಡಿ ಲೈಟ್‌ಗಳಿಂದ ಇಂಧನ ವ್ಯರ್ಥ ಇಳಿಕೆ

ಎಲ್‌ಇಡಿ ಲೈಟ್‌ಗಳು ಇಂಧನ ವ್ಯರ್ಥವನ್ನು ಕಡಿಮೆ ಮಾಡುವುದರ ಜೊತೆಗೆ ವಿದ್ಯುತ್ ಬೇಡಿಕೆಯನ್ನು ಸಹ ಕಡಿಮೆ ಮಾಡುತ್ತದೆ ಎಂದು ಬಿಬಿಎಂಪಿ ಭಾವಿಸುತ್ತದೆ. ಈ ಬೆಳಕಿನ ಜೊತೆಗೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಟ್ರ್ಯಾಕ್ ಮಾಡುವ ಕೇಂದ್ರೀಕೃತ ಮೇಲ್ವಿಚಾರಣಾ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿರುತ್ತದೆ. ಹೀಗಾಗಿ ಉತ್ತಮ ಮತ್ತು ಸಮಯೋಚಿತ ನಿರ್ವಹಣೆ ಸಹ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂಟು ವಲಯಗಳಲ್ಲಿ ಬೀದಿ ದೀಪ ನಿರ್ವಹಣೆಗೆ ಸಿಸಿಎಂಎಸ್

ಎಂಟು ವಲಯಗಳಲ್ಲಿ ಬೀದಿ ದೀಪ ನಿರ್ವಹಣೆಗೆ ಸಿಸಿಎಂಎಸ್

ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಎಂಟು ವಲಯಗಳ ಕಚೇರಿಗಳಲ್ಲಿ ಸಿಸಿಎಂಎಸ್ ವ್ಯವಸ್ಥೆಯನ್ನು ಸ್ಥಾಪನೆ ಮಾಡಲಾಗಿರುತ್ತದೆ. ಈ ವ್ಯವಸ್ಥೆಯ ಮೂಲಕವೇ ದೀಪಗಳನ್ನು ನಿಯಂತ್ರಣ ಮಾಡಲಾಗುತ್ತದೆ. ಆನ್ ಮತ್ತು ಆಫ್ ಮಾಡುವುದರ ಹೊರತಾಗಿ, ಅತ್ಯಾಧುನಿಕ ಮೇಲ್ವಿಚಾರಣಾ ವ್ಯವಸ್ಥೆಯು ಬೆಳಕಿನ ಕಿರಣಗಳನ್ನು ಹೊಂದಿಸುವುದು ಸೇರಿದಂತೆ ಹಲವು ರೀತಿಯಲ್ಲಿ ದೀಪಗಳನ್ನು ನಿರ್ವಹಿಸಲು ಅಧಿಕಾರಿಗಳಿಗೆ ಅನುಮತಿಯನ್ನು ನೀಡಲಾಗಿರುತ್ತದೆ.

ದೀರ್ಘಕಾಲದ ದೀಪದ ಯೋಜನೆಗೆ ಕಾಲ ಕೂಡಿ ಬಂತು!

ದೀರ್ಘಕಾಲದ ದೀಪದ ಯೋಜನೆಗೆ ಕಾಲ ಕೂಡಿ ಬಂತು!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಸಾಂಪ್ರದಾಯಿಕ ದೀಪಗಳ ಬದಲಿಗೆ ಹೊಸ ಸ್ಮಾರ್ಟ್ ಎಲ್ಇಡಿಗಳನ್ನು ಅಳವಡಿಸಲಾಗುತ್ತದೆ. ನಾವು ಈ ಯೋಜನೆಯನ್ನು ದೀರ್ಘಕಾಲದವರೆಗೆ ಹೊರತರಲು ಯೋಜಿಸುತ್ತಿದ್ದು, ಇದೀಗ ಅದಕ್ಕೆಲ್ಲ ಕಾಲ ಕೂಡಿ ಬಂದಿದೆ. ವಾರ್ಡ್ ರಸ್ತೆಗಳು, ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳು ಮತ್ತು ಅಗತ್ಯವಿರುವ ಎಲ್ಲ ಕಡೆಯಲ್ಲಿ ಎಲ್ಇಡಿ ದೀಪಗಳನ್ನು ಅಳವಡಿಸಲಾಗುತ್ತದೆ," ಎಂದು ಹಿರಿಯ ನಾಗರಿಕ ಅಧಿಕಾರಿ ಹೇಳಿದ್ದಾರೆ. ಪ್ರಸ್ತುತ ಬೀದಿದೀಪ ಇಲ್ಲದ ಹೊಸ ಪ್ರದೇಶಗಳಲ್ಲೂ ಸಹ ಹೊಸ ದೀಪಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.

ಬೀದಿ ದೀಪಕ್ಕಾಗಿ ಪಾವತಿ ಆಗುವ ಮೊತ್ತವೆಷ್ಟು?

ಬೀದಿ ದೀಪಕ್ಕಾಗಿ ಪಾವತಿ ಆಗುವ ಮೊತ್ತವೆಷ್ಟು?

ಬೆಂಗಳೂರಿನಲ್ಲಿ ಸೋಡಿಯಂ ವೇಪರ್ ಲ್ಯಾಂಪ್‌ಗಳ ವಿದ್ಯುತ್ ಶುಲ್ಕಕ್ಕಾಗಿ ಬಿಬಿಎಂಪಿಯು ತಿಂಗಳಿಗೆ 17 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಇದರ ಜೊತೆಗೆ ವಾರ್ಷಿಕ ನಿರ್ವಹಣೆಗೆ 50 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಕಳೆದ ನಾಲ್ಕು ವರ್ಷಗಳಿಂದ ವಿದ್ಯುತ್‌ ದೀಪಗಳನ್ನು ಬದಲಾಯಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಬಿಲ್ಡ್, ಓನ್, ಆಪರೇಟ್ ಮತ್ತು ಟ್ರಾನ್ಸ್‌ಫರ್ (ಬೂಟ್) ಮಾದರಿಯಡಿಯಲ್ಲಿ ದೀಪಗಳನ್ನು ಬದಲಿಸಲು ಜನವರಿ 2018 ರಲ್ಲಿ ಜಾಗತಿಕ ಟೆಂಡರ್ ಅನ್ನು ಕರೆಯಲಾಗಿತ್ತು. ವ್ಯಾಪಾರ ಒಕ್ಕೂಟವು ಟೆಂಡರ್ ಅನ್ನು ಪಡೆದುಕೊಂಡಿದ್ದು ವರ್ಕ್ ಆರ್ಡರ್ ನೀಡಲಾಯಿತು. ಆದಾಗ್ಯೂ, ಇದನ್ನು ನಂತರ 2021ರಲ್ಲಿ ರದ್ದುಗೊಳಿಸಲಾಯಿತು.

English summary
smart streetlights system in Bengaluru every corner; How its effects on city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X