Get Updates
Get notified of breaking news, exclusive insights, and must-see stories!

AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ನಮ್ಮ ದೈನಂದಿನ ಕೆಲಸಗಳನ್ನು ಸುಲಭಗೊಳಿಸಿದೆ ಎಂಬುದು ನಿಜ. ಆದರೆ, ಉದ್ಯೋಗ ಹುಡುಕುವ ಪ್ರಕ್ರಿಯೆಯಲ್ಲಿ ಇದು ನಕಾರಾತ್ಮಕ ಪರಿಣಾಮವನ್ನು ಸಹ ಬೀರುತ್ತಿದೆ. ಹೌದು, ಕೇವಲ ಕೃತಕ ಬುದ್ಧಿಮತ್ತೆಯನ್ನು ಬಳಸಿ, ಯಾವುದೇ ಸ್ವಂತ ಶ್ರಮವಿಲ್ಲದೆ ಕಾಪಿ-ಪೇಸ್ಟ್ ಮಾಡಿ ಅರ್ಜಿ ಸಲ್ಲಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದಾಗಿ ನೈಜ ಪ್ರತಿಭೆಗಳನ್ನು ಮತ್ತು ಕೌಶಲ್ಯವುಳ್ಳ ಅಭ್ಯರ್ಥಿಗಳನ್ನು ಗುರುತಿಸುವುದು ಕಂಪನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಬೆಂಗಳೂರು ಮೂಲದ ಸ್ಟಾರ್ಟ್-ಅಪ್ 'ಟೇಕ್ ಯು ಫಾರ್ವರ್ಡ್' (takeUforward) ಸಂಸ್ಥಾಪಕ ರಾಜ್ ವಿಕ್ರಮಾದಿತ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಅವರು, ಪ್ರಸ್ತುತ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ಅತಿ ದೊಡ್ಡ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ. "ಇತ್ತೀಚೆಗೆ ನೇಮಕಾತಿ ಪ್ರಕ್ರಿಯೆಯು ತುಂಬಾ ಗದ್ದಲದಿಂದ (noise) ಕೂಡಿದೆ. ದೊಡ್ಡ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿವೆ, ಆದರೆ ಗುಣಮಟ್ಟದ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ನಾನು ಸುಮ್ಮನೆ ಈ ಮಾತನ್ನು ಹೇಳುತ್ತಿಲ್ಲ. ಪ್ರಸ್ತುತ ನೇಮಕಾತಿ ಮಾಡುತ್ತಿರುವ ಯಾರನ್ನು ಬೇಕಾದರೂ ಕೇಳಿ ನೋಡಿ, ಅವರು ಇದೇ ಪರಿಸ್ಥಿತಿಯನ್ನು ವಿವರಿಸುತ್ತಾರೆ" ಎಂದು ಅವರು ಬರೆದುಕೊಂಡಿದ್ದಾರೆ.

Bengaluru

ಕೇವಲ ಒಬ್ಬ ಅಭ್ಯರ್ಥಿ ಆಯ್ಕೆ

ತಮ್ಮದೇ ಕಂಪನಿಯ ನೇಮಕಾತಿಯ ಉದಾಹರಣೆ ನೀಡಿದ ರಾಜ್, ಇತ್ತೀಚೆಗೆ ತಮ್ಮ ಸಂಸ್ಥೆಯಲ್ಲಿ ಯೂಸರ್ ಎಕ್ಸ್-ಪೀರಿಯನ್ಸ್ (UX) ಹುದ್ದೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು ಎಂದು ತಿಳಿಸಿದ್ದಾರೆ. ಬಂದಂತಹ ರೆಸ್ಯೂಮ್‌ಗಳ ಆಧಾರದ ಮೇಲೆ ಕೆಲವು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಆದರೆ, ಮೊದಲ ಸುತ್ತಿನ ಮೌಲ್ಯಮಾಪನವು ತೀವ್ರ ನಿರಾಸೆ ಮೂಡಿಸಿತು ಎಂದು ಅವರು ಹೇಳಿದ್ದಾರೆ.

ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ

ಬಹುಪಾಲು ಅಭ್ಯರ್ಥಿಗಳು ನೀಡಿದ್ದ ಅಸೈನ್‌ಮೆಂಟ್‌ಗಳು ಎಐ ಪರಿಕರಗಳ ಸಹಾಯದಿಂದ ಸಂಪೂರ್ಣವಾಗಿ ಕಾಪಿ ಮಾಡಿದ್ದಾಗಿವೆ. ಅದರಲ್ಲಿ ಅಭ್ಯರ್ಥಿಗಳ ಸ್ವಂತ ಶ್ರಮ, ಸಂಶೋಧನೆ ಅಥವಾ ಆ ಹುದ್ದೆಯ ಕುರಿತಾದ ಯಾವುದೇ ಕನಿಷ್ಠ ತಿಳುವಳಿಕೆ ಇರಲಿಲ್ಲ. "ಇದೊಂದು ಸರಳವಾದ ಕಾಪಿ-ಪೇಸ್ಟ್ ಕೆಲಸವಾಗಿತ್ತು. ಶಾರ್ಟ್‌ಲಿಸ್ಟ್ ಆದ ಸುತ್ತಿನಲ್ಲಿ ಅಭ್ಯರ್ಥಿಗಳಿಂದ ಶೂನ್ಯ ಶ್ರಮ ಮತ್ತು ಶೂನ್ಯ ಸಂಶೋಧನೆ ಕಂಡುಬಂತು" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂತಿಮವಾಗಿ ಈ ಹಂತಕ್ಕೆ ತಲುಪಿದ್ದ 35 ಅಭ್ಯರ್ಥಿಗಳಲ್ಲಿ ಕೇವಲ ಒಬ್ಬರು ಮಾತ್ರ ಅಸಲಿ ಶ್ರಮ ಮತ್ತು ಸ್ವಂತಿಕೆ ಪ್ರದರ್ಶಿಸಿದ್ದರು. "35 ಜನರಲ್ಲಿ ಕೇವಲ ಒಬ್ಬರು ಮಾತ್ರ ಎಐ ಕಾಪಿ-ಪೇಸ್ಟ್ ಮಾಡದೆ, ಸ್ವಂತ ಶ್ರಮ ಹಾಕಿ ಕೆಲಸ ಮಾಡಿದ್ದರು. ಹಾಗಾಗಿ ಅವರನ್ನೇ ಆ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ. ಉಳಿದವರು ಕನಿಷ್ಠ ಸಿದ್ಧತೆಯನ್ನೂ ಮಾಡಿಕೊಂಡಿರಲಿಲ್ಲ" ಎಂದು ರಾಜ್ ವಿಕ್ರಮಾದಿತ್ಯ ವಿವರಿಸಿದ್ದಾರೆ.

Bank Jobs: ಸರ್ಕಾರಿ ಬ್ಯಾಂಕ್‌ ಕೆಲಸಕ್ಕೆ ಇನ್ಮುಂದೆ ಸಿಬಿಲ್ ಸ್ಕೋರ್ ಕಡ್ಡಾಯ
Bank Jobs: ಸರ್ಕಾರಿ ಬ್ಯಾಂಕ್‌ ಕೆಲಸಕ್ಕೆ ಇನ್ಮುಂದೆ ಸಿಬಿಲ್ ಸ್ಕೋರ್ ಕಡ್ಡಾಯ

ನೆಟ್ಟಿಗರ ಪ್ರತಿಕ್ರಿಯೆ

ರಾಜ್ ಅವರ ಈ ಪೋಸ್ಟ್ ವೈರಲ್ ಆಗಿದ್ದು, ಅನೇಕರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. "ಎಐ ಬಳಸಿ ರೆಸ್ಯೂಮ್ ಸಿದ್ಧಪಡಿಸುವುದು ಈಗ ಸಾಮಾನ್ಯವಾಗಿದೆ. ರೆಸ್ಯೂಮ್‌ಗಳು ನೋಡಲು ಅತ್ಯುತ್ತಮವಾಗಿ ಕಾಣುತ್ತವೆ, ಆದರೆ ನೇರ ಸಂದರ್ಶನದಲ್ಲಿ ಅಭ್ಯರ್ಥಿಯ ಅಸಲಿ ಕೌಶಲ್ಯ ಬಯಲಾಗುತ್ತದೆ" ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, "ಎಐ ಹೊರಗಿನ ಮೆರಗು ನೀಡಬಹುದು, ಆದರೆ ಮನುಷ್ಯನ ಶ್ರಮವನ್ನು ನಕಲು ಮಾಡಲು ಅದಕ್ಕೆ ಸಾಧ್ಯವಿಲ್ಲ" ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+