DK Shivakumar: ಶರದ್ ಪವಾರ್ ಮೊಮ್ಮಗಳ ಹೃದಯ ಕದ್ದ ಬಿಜೆಪಿ ನಾಯಕನ ಪುತ್ರ, ಪ್ರೇಮ ವಿವಾಹ ಅಸಲಿ ಕಥೆ - ಡಿಕೆಶಿ ಭಾಗಿ ಚರ್ಚೆ
ಮಹಾರಾಷ್ಟ್ರದ ಪ್ರಭಾವಿ ರಾಜಕೀಯ ಕುಟುಂಬದಲ್ಲಿ ನಡೆದಿರುವ ಪ್ರೇಮ ವಿವಾಹ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪ್ರತಿಸ್ಪರ್ಧಿ ಅಥವಾ ಎದುರಾಳಿ ಪಕ್ಷದ ರಾಜಕೀಯ ನಾಯಕರ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಕಳೆದ ಹಲವು ದಶಕಗಳಿಂದ ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಭಾವಿ ರಾಜಕೀಯ ನಾಯಕರಾಗಿ ಶರದ್ ಪವಾರ್ (85) ಗುರುತಿಸಿಕೊಂಡಿದ್ದಾರೆ. 2026ರ ಜೂನ್ ತಿಂಗಳಿನಲ್ಲಿ ಯಾವುದೇ ಚುನಾವಣೆ, ಮೈತ್ರಿ ಅಥವಾ ರಾಜಕೀಯ ಹೇಳಿಕೆಗಳಿಗೆ ಗಮನ ಸೆಳೆಯದೆ ಅವರ ಮೊಮ್ಮಗಳು ರೇವತಿ ಸುಳೆ ಅವರ ವಿವಾಹ ಕಾರಣಕ್ಕೆ ಚರ್ಚೆಯಲ್ಲಿದ್ದಾರೆ. ಜೂನ್ 20 ರಂದು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಈ ಅದ್ಧೂರಿ ವಿವಾಹ ಸಮಾರಂಭವು ಎರಡು ಕುಟುಂಬಗಳನ್ನು ಒಂದುಗೂಡಿಸಿದ್ದಲ್ಲದೆ. ರಾಜಕೀಯ, ವ್ಯವಹಾರ ಮತ್ತು ಬದಲಾಗುತ್ತಿರುವ ರಾಜಕೀಯ ವಿಷಯದ ಕಾರಣಗಳಿಗೂ ಫೋಟೋಗಳು ವೈರಲ್ ಆಗುತ್ತಿವೆ.
ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಮತ್ತು ಕೈಗಾರಿಕೋದ್ಯಮಿ ಸದಾನಂದ ಸುಳೆ ಅವರ ಪುತ್ರಿ ರೇವತಿ ಸುಳೆ, ನಾಗ್ಪುರದ ಉದ್ಯಮಿ ಮತ್ತು ಬಿಜೆಪಿ ನಾಯಕನ ಪುತ್ರ ಸಾರಂಗ್ ಲಖಾನಿ ಅವರನ್ನು ವಿವಾಹವಾಗಿದ್ದಾರೆ. ಸಮಾರಂಭದಲ್ಲಿ ರಾಜಕೀಯದಿಂದ ಬಾಲಿವುಡ್‌ವರೆಗಿನ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ಅದರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ಒಬ್ಬರು. ಸುಪ್ರಿಯಾ ಸುಳೆ ಮತ್ತು ಸದಾನಂದ ಸುಳೆ ಅವರದ್ದು ಪ್ರೇಮಕಥೆಯೇ ಅಥವಾ ಕುಟುಂಬದ ಒಪ್ಪಿಗೆಯೊಂದಿಗೆ ನಡೆಸಿದ ಅಂತರ್ಜಾತಿ ವಿವಾಹವೇ ಎನ್ನುವುದು ಚರ್ಚೆ ಆಗುತ್ತಿದೆ.

ಸಾರಂಗ್ ಲಖಾನಿ ಅವರು ನಾಗ್ಪುರದ ಪ್ರಮುಖ ವ್ಯಾಪಾರ ಕುಟುಂಬದಿಂದ ಬಂದವರು. ಅವರ ತಂದೆ, ಬಿಜೆಪಿ ನಾಯಕ ಅರುಣ್ ಲಖಾನಿ, ಉದ್ಯಮ ಮತ್ತು ಸಾಮಾಜಿಕ ಕೆಲಸಗಳಲ್ಲಿ ಫೇಮಸ್ ಆಗಿದ್ದಾರೆ. ಲಖಾನಿ ಕುಟುಂಬ ಸಿಂಧಿ ಸಮುದಾಯದವರು ಎಂದು ಹೇಳಲಾಗುತ್ತದೆ. ಸಾರಂಗ್ ನಾಗ್ಪುರ ವಿಶ್ವವಿದ್ಯಾಲಯದಿಂದ ಬಿ.ಕಾಂ. ಅಧ್ಯಯನ ಮಾಡಿದರು. ನಂತರ ಅವರು ಬೆಂಗಳೂರಿನ ಐಐಎಂನಲ್ಲಿ ಮ್ಯಾನೇಜ್ಮೆಂಟ್ ಶಿಕ್ಷಣ ಪಡೆದಿದ್ದರು. ಇನ್ನು ರೇವತಿ ಸುಳೆ ಮಹಾರಾಷ್ಟ್ರದ ಪ್ರಮುಖ ರಾಜಕಾರಣಿ ಮತ್ತು ಸಂಸದೆ ಸುಪ್ರಿಯಾ ಸುಳೆ ಅವರ ಪುತ್ರಿ. ಅವರು ಯುಕೆಯ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತಮ್ಮ ಅಧ್ಯಯನ ಪೂರ್ಣಗೊಳಿಸಿದ್ದಾರೆ. ರೇವತಿ ಯಾವಾಗಲೂ ರಾಜಕೀಯದಿಂದ ದೂರವಿದ್ದರೂ, ಬಾರಾಮತಿ ಲೋಕಸಭಾ ಚುನಾವಣೆಯ ಸಮಯದಲ್ಲಿ ತಮ್ಮ ತಾಯಿಯ ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಮೊದಲು ಸಾರ್ವಜನಿಕವಾಗಿ ಕಾಣಿಸಿಕೊಂಡರು. ಆ ಸಮಯದಲ್ಲಿ ಅವರ ಸರಳತೆ ಮತ್ತು ಶಾಂತ ಸ್ವಭಾವದ ಬಗ್ಗೆಯೂ ಚರ್ಚೆ ನಡೆಯಿತು.
ರೇವತಿ ಸುಳೆ ಮತ್ತು ಸಾರಂಗ್ ಲಖಾನಿಯವರ ವಿವಾಹವು ಶುದ್ಧ 'ಪ್ರೇಮ ವಿವಾಹ' ಅಥವಾ 'ಅರೇಂಜ್ಡ್ ಮ್ಯಾರೇಜ್' ಎಂದು ನಿರ್ಧರಿಸುವುದು ಕಷ್ಟ. ಆದಾಗ್ಯೂ, ಹಲವಾರು ಮರಾಠಿ ಮಾಧ್ಯಮ ವರದಿಗಳು ಇದನ್ನು ಕುಟುಂಬ-ಅರೇಂಜ್ಡ್ ಮ್ಯಾರೇಜ್ ಎಂದು ವಿವರಿಸಿವೆ, ಆದರೆ ಕೆಲವು ವರದಿಗಳು ಇದನ್ನು ಸ್ಪಷ್ಟವಾಗಿ ಅರೇಂಜ್ಡ್ ಮ್ಯಾರೇಜ್ ಎಂದು ಹೇಳಿವೆ.

DK Shivakumar: ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭಾಗಿ
ಇನ್ನು ಈ ಪ್ರೇಮ ವಿವಾಹ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭಾಗಿ ಆಗಿರುವುದು ಸಹ ಭಾರೀ ಚರ್ಚೆಗೆ ಕಾರಣವಾಗಿದೆ. ಡಿ.ಕೆ ಶಿವಕುಮಾರ್ ಅವರು ವಿವಾಹ ಸಮಾರಂಭದಲ್ಲಿ ಭಾಗಿ ಆಗಿದ್ದು, ಶುಭ ಆರೈಸಿದ್ದಾರೆ. ಮುಂಬೈನಲ್ಲಿ ನಡೆದ ರೇವತಿ ಸುಳೆ ಮತ್ತು ಸಾರಂಗ್ ಲಖಾನಿ ಅವರ ವಿವಾಹದಲ್ಲಿ ಭಾಗವಹಿಸಿದ್ದೆ. ನವವಿವಾಹಿತರು ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಅವರ ಜೀವನವು ಸಂತೋಷ ಮತ್ತು ಶಾಶ್ವತ ಒಡನಾಟದಿಂದ ತುಂಬಿರಲಿ ಎಂದು ಶುಭಕೋರಿದ್ದರು. ಕಾಂಗ್ರೆಸ್ ಪಕ್ಷದ ಪ್ರತಿಸ್ಪರ್ಧಿ ಹಾಗೂ ಬಿಜೆಪಿ ನಾಯಕನ ಮದುವೆ ಸಮಾರಂಭದಲ್ಲಿ ಭಾಗಿಯಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.














Click it and Unblock the Notifications