ಹಳಿಗಿಳಿದ 6 ಬೋಗಿಯ ಮೆಟ್ರೋ: ಅಧಿಕೃತ ಸಂಚಾರ ಜೂನ್‌ನಿಂದ ಆರಂಭ
ಬೆಂಗಳೂರು, ಏಪ್ರಿಲ್ 19: ನಮ್ಮ ಮೆಟ್ರೋ ಪ್ರಥಮ 6 ಬೋಗಿಯ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಆರಂಭವಾಗಿದೆ. ಬೈಯಪ್ಪನಹಳ್ಳಿ ಮತ್ತು ನಾಯಂಡಹಳ್ಳಿ ಮಾರ್ಗದಲ್ಲಿ ಪರೀಕ್ಷಾರ್ಥವಾಗಿ ಸಂಚಾರ ಆರಂಭಿಸಿರುವ ಈ ರೈಲು ಜೂನ್ ವೇಳೆಗೆ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ.
2018ರ ಫೆ.4ರಂದು ಬಿಇಎಂಎಲ್ 3 ಹೊಸ ಬೋಗಿಗಳನ್ನು ಬಿಎಂಆರ್ ಸಿಎಲ್ ಗೆ ಹಸ್ತಾಂತರಿಸಿತ್ತು. ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ 3 ಬೋಗಿಯ ರೈಲಿಗೆ ಹೊಸ 3 ಬೋಗಿ ಜೋಡಿಸಲಾಗಿದ್ದು,ಬೈಯಪ್ಪನಹಳ್ಳಿ ಡಿಪೋದ ಒಳಗಿರುವ ಪರೀಕ್ಷಾ ಹಳಿಯಲ್ಲಿ 4ದಿನ ಪರೀಕ್ಷೆ ಬಳಿಕ ಇದೀಗ ಮುಖ್ಯ ಹಳಿಗೆ ರೈಲನ್ನು ತರಲಾಗಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ರಾತ್ರಿ 12.30ರಿಂದ ಬೆಳಗಿನ ಜಾವ 4.30ರವರೆಗೆ ಮುಖ್ಯ ಹಳಿಯಲ್ಲಿ ರೈಲಿನ ಪರೀಕ್ಷೆ ನಡೆಸುವ ಸವಾಲನ್ನು ಬಿಎಂಆರ್ ಸಿಎಲ್ ಹೊಂದಿದೆ. ಪ್ರಸ್ತುತ ನಮ್ಮ ಮೆಟ್ರೋ ಬೆಳಗಿನ ಜಾವ 5ರಿಂದ ರಾತ್ರಿ 11.30ರವರೆಗೆ ಕಾರ್ಯಾಚರಣೆ ನಡೆಸುತ್ತದೆ. ಈ ಸಂದರ್ಭದಲ್ಲಿ ಪರೀಕ್ಷೆ ನಡೆಸಲು ಅನುಮತಿ ಇಲ್ಲ. ಕಾರ್ಯಾಚರಣೆ ಮುಕ್ತಾಯವಾದ ಬಳಿಕವಷ್ಟೇ 6 ಬೋಗಿಯ ರೈಲನ್ನು ಮುಖ್ಯ ಹಳಿಗೆ ತರಬೇಕು.
ಪ್ರಯಾಣಿಕರ ಹೆಚ್ಚಳ ನಿರೀಕ್ಷೆ: ಮೂರು ಬೋಗಿಯ ರೈಲುಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ. ಇದೇ ಕಾರಣದಿಂದಾಗಿ ಜನರು ಮೆಟ್ರೋ ಪ್ರಯಾಣದ ಬದಲು ಖಾಸಗಿ ವಾಹನಗಳ ಬಳಕೆಗೆ ಮುಂದಾಗಿದ್ದಾರೆ. 6 ಬೋಗಿಯ ರೈಲು ಬಂದ ಬಳಿಕ ಪ್ರತಿ ರೈಲಿನಲ್ಲಿ 1,900 ಪ್ರಯಾಣಿಕರು ಆರಾಮವಾಗಿ ಸಂಚರಿಸಬಹುದಾಗಿದೆ.












Click it and Unblock the Notifications