ಉಕ್ರೇನ್‌ನಲ್ಲಿ ಸಿಲುಕಿದ ಬೆಂಗಳೂರಿನ ರುಚಿತಾ: ಪೋಷಕರ ಆತಂಕ

ಬೆಂಗಳೂರು, ಫೆ. 25: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿದೆ. ಎರಡನೇ ದಿನವಾದ ಶುಕ್ರವಾರ ರಷ್ಯಾ ಕ್ಷಿಪಣಿ ದಾಳಿ ಮಾಡಿದೆ. ಯುದ್ಧದ ಕಾರ್ಮೋಡದಲ್ಲಿ ಮುಳಗಿರುವ ಉಕ್ರೇನ್‌ನಲ್ಲಿ ಬೆಂಗಳೂರಿನ ಯುವತಿಯೊಬ್ಬಳು ಸಿಲುಕಿದ್ದು, ರಕ್ಷಣೆಗಾಗಿ ಮೊರೆಯಿಟ್ಟದ್ದಾಳೆ.

ಬೆಂಗಳೂರಿನ ನಾಗರಬಾವಿ ನಿವಾಸಿ ರುಚಿತಾ ವಿದ್ಯಾಭ್ಯಾಸಕ್ಕೆ ಉಕ್ರೇನ್‌ಗೆ ತೆರಳಿದ್ದು ಇದೀಗ ರಕ್ಷಣೆ ಕೋರಿ ತನ್ನ ತಾಯಿಗೆ ಮನವಿ ಮಾಡಿದ್ದಾರೆ. ಗುರುವಾರ ಮಧ್ಯರಾತ್ರಿ 12.30ರ ನಂತರ ರುಚಿರಾ ಪೋಷಕರ ಸಂಪರ್ಕಕ್ಕೆ ಸಿಲುಕಿಲ್ಲ. ಹೀಗಾಗಿ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ವಿದ್ಯಾಭ್ಯಾಸ ಮಾಡುವ ಸಲುವಾಗಿ ನಾಗರಭಾವಿಯ ನಿವಾಸಿ ರುಚಿತಾಉಕ್ರೇನ್‌ಗೆ ತೆರಳಿದ್ದಾಳೆ. ಉಕ್ರೇನ್‌ನಲ್ಲಿ ಯುದ್ಧ ಹಿನ್ನೆಲೆಯಲ್ಲಿ ಗುರುವಾರ ರುಚಿತಾ ತನ್ನ ಪೋಷಕರೊಂದಿಗೆ ಮಾತನಾಡಿದ್ದಾರೆ. ಭಾರತೀಯ ಮೂಲದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿರುವ ವಿಷಯವನ್ನು ತಿಳಿಸಿದ್ದಾರೆ. ಉಕ್ರೇನ್‌ನಲ್ಲಿರುವ ರಾಯಭಾರ ಕಚೇರಿಯಿಂದ ಯಾವುದೇ ನೆರವು ಸಿಕ್ಕಿಲ್ಲ ಎಂಬುದನ್ನು ರುಚಿತಾತನ್ನ ಪೋಷಕರಿಗೆ ತಿಳಿಸಿದ್ದಾಳೆ. ಯುದ್ಧದಿಂದ ಆಗಿರುವ ಆತಂಕದ ಸ್ಥಿತಿಯ ಬಗ್ಗೆಯೂ ವಿವರಿಸಿದ್ದಾಳೆ. ಅದಾದ ಬಳಿಕ ರುಚಿತಾ ಪೋಷಕರ ಸಂಪರ್ಕಕ್ಕೆ ಸಿಕ್ಕಿಲ್ಲ.

Russia-Ukraine War: Bengaluru Girl Stranded in Ukraine, Parents Worried

ಈ ಕುರಿತು ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರುಚಿತಾ ತಾಯಿ ಪೂರ್ಣಿಮಾ, ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಮಗಳು ಕರೆ ಮಾಡಿ ಉಕ್ರೇನ್ ಬಗ್ಗೆ ತಿಳಿಸಿದಳು. ರಾಯಭಾರ ಕಚೇರಿ ಸಂಪರ್ಕಿಸಿದರೂ ಯಾವುದೇ ನೆರವು ಸಿಕ್ಕಿಲ್ಲ. ಈ ಕೂಡಲೇ ಕೇಂದ್ರ ಸರ್ಕಾರ ಉಕ್ರೇನ್‌ನಲ್ಲಿರುವ ಮಗಳನ್ನು ರಕ್ಷಿಸಬೇಕು. ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ರಕ್ಷಿಸಬೇಕು. ಆದಷ್ಟು ಬೇಗ ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ಸರ್ಕಾರ ಭಾರತಕ್ಕೆ ಕರೆತರಬೇಕು ಎಂದು ಕುಟುಂಬ ಮನವಿ ಮಾಡಿದೆ.

Recommended Video

      ಉಕ್ರೇನ್ ನ ಅಮಾಯಕರ ಮೇಲೂ ಅಟ್ಯಾಕ್ ಮಾಡಿದ ರಷ್ಯಾ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+