• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು; ಕಸ ಸಂಗ್ರಹಣೆ ಟಿಪ್ಪರ್ ಮಾಹಿತಿ ಬೆರಳ ತುದಿಯಲ್ಲಿ

|

ಬೆಂಗಳೂರು, ಸೆಪ್ಟೆಂಬರ್ 22 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ 38 ವಾರ್ಡ್‌ನಲ್ಲಿ ಕಸ ಸಂಗ್ರಹಣೆಗೆ ಹೊಸ ವ್ಯವಸ್ಥೆ ಮಾಡಿದೆ. ಜನರು ಕಸದ ಗಾಡಿ ಯಾವ ಸಮಯಕ್ಕೆ ಬರಲಿದೆ ಎಂದು ಮೊಬೈಲ್ ಮೂಲಕ ತಿಳಿಯಬಹುದಾಗಿದೆ.

ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಈ ಕುರಿತು ಮಾಹಿತಿ ನೀಡಿದ್ದಾರೆ. ಜನರು ಕಸದ ಬ್ಯಾಗ್ ಸಿದ್ಧಪಡಿಸಿಕೊಂಡು ಕಾಯಬೇಕಿಲ್ಲ. ಟಪ್ಪರ್ ಎಷ್ಟೊತ್ತಿಗೆ ಮನೆ ಬಾಗಿಲಿಗೆ ಬರಲಿದೆ ಎಂದು ಮಾಹಿತಿ ಮೊಬೈಲ್‌ನಲ್ಲಿಯೇ ಸಿಗಲಿದೆ.

ಕಸ ಸಂಗ್ರಹಕ್ಕೆ ಬಿಬಿಎಂಪಿ ಹೊಸ ವ್ಯವಸ್ಥೆ

ಸೆಪ್ಟೆಂಬರ್ 20ರಿಂದ ಕಸ ಸಂಗ್ರಹಣೆಗೆ ಹೊಸ ವ್ಯವಸ್ಥೆ ಮಾಡಲಾಗಿದೆ. ಕಸ ಸಂಗ್ರಹ ಮಾಡುವ ಟಿಪ್ಪರ್‌ಗಳಿಗೆ ಜಿಪಿಎಸ್ ಆಳವಡಿಕೆ ಮಾಡಲಾಗಿದೆ. ಮೊಬೈಲ್ ಮೂಲಕ ಟಿಪ್ಪರ್ ಎಲ್ಲಿದೆ? ಎಂಬ ಮಾಹಿತಿ ಅಧಿಕಾರಿಗಳು, ಜನರಿಗೆ ತಿಳಿಯಲಿದೆ.

ಕಸ ಸಂಗ್ರಹ ಮಾಡುವ ಕಾರ್ಮಿಕನ ಮೇಲೆ ಹೂಮಳೆ ಸುರಿದ ನಾಗರಿಕರು

ಪ್ರಸ್ತುತ 38 ವಾರ್ಡ್‌ನಲ್ಲಿ ಹೊಸ ಮಾದರಿಯಲ್ಲಿ ಕಸ ಸಂಗ್ರಹಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಇನ್ನೂ 78 ವಾರ್ಡ್‌ಗಳಲ್ಲಿ ಇದೇ ಮಾದರಿಯಲ್ಲಿ ಕಸ ಸಂಗ್ರಹಣೆ ಆರಂಭಿಸಲಾಗುತ್ತದೆ.

198 ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ ಬಿಬಿಎಂಪಿ

ಜನರು ದೂರು ನೀಡಬಹುದು

ಜನರು ದೂರು ನೀಡಬಹುದು

ಕಸ ಸಂಗ್ರಹಣೆ ಮಾಡುವ ಟಿಪ್ಪರ್ ಎಲ್ಲಿದೆ? ಎಂದು ಜನರು ಮೊಬೈಲ್ ಮೂಲಕ ಟ್ರಾಕ್ ಮಾಡಬಹುದು. ಒಂದು ವೇಳೆ ಕಸ ಸಂಗ್ರಹ ಮಾಡದೆ ಟಿಪ್ಪರ್ ಮುಂದೆ ಹೋದರೆ ಜನರು ದೂರು ದಾಖಲು ಮಾಡಲು ಸಹ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಬೇರೆ-ಬೇರೆ ವಾಹನದಲ್ಲಿ ಸಂಗ್ರಹ

ಬೇರೆ-ಬೇರೆ ವಾಹನದಲ್ಲಿ ಸಂಗ್ರಹ

ಒಂದೇ ವಾಹನದಲ್ಲಿ ಹಸಿ ಮತ್ತು ಒಣ ಕಸವನ್ನು ಸಂಗ್ರಹ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಬೇರೆ ಬೇರೆ ವಾಹನಗಳಲ್ಲಿ ಸಂಗ್ರಹ ಮಾಡಲಾಗುತ್ತದೆ. ಕಸ ಒಟ್ಟಾಗದಂತೆ ಜಾಗೃತೆ ವಹಿಸಲಾಗುತ್ತದೆ. ಜನರು ಸಹ ಕಸವನ್ನು ಬೇರ್ಪಡಿಸಿಯೇ ನೀಡಬೇಕಾಗುತ್ತದೆ.

ನಮ್ಮ ಕಸ ನಮ್ಮ ಜವಾಬ್ದಾರಿ

ನಮ್ಮ ಕಸ ನಮ್ಮ ಜವಾಬ್ದಾರಿ

ಪ್ರತಿ ವಾರ್ಡ್‌ನಲ್ಲಿ ಕಾಂಪೋಸ್ಟ್ ಯೂನಿಟ್ ಸ್ಥಾಪನೆ ಮಾಡಲಾಗುತ್ತದೆ. ಇದಕ್ಕಾಗಿ ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ಸಮಿತಿಯನ್ನು ಮಾಡಲಾಗುತ್ತಿದೆ. ವೈಜ್ಞಾನಿಕವಾಗಿ ಕಸವನ್ನು ಹೇಗೆ ವಿಂಗಡನೆ ಮಾಡಬೇಕು, ಹೇಗೆ ವಿಲೇವಾರಿಯಾಗಲಿದೆ ಎಂಬ ಬಗ್ಗೆ ಜನರಿಗೂ ಮಾಹಿತಿ ನೀಡಲಾಗುತ್ತದೆ.

  ಮೊದಲನೇ ಮ್ಯಾಚ್ ಬಗೆ RCB ಆರಂಭಿಕ ಬ್ಯಾಟ್ಸ್ ಮನ್ Finch ಹೇಳಿದ್ದೇನು | Oneindia Kannda
  25 ಎಕರೆ ಜಾಗವನ್ನು ಗುರುತಿಸಲಾಗಿದೆ

  25 ಎಕರೆ ಜಾಗವನ್ನು ಗುರುತಿಸಲಾಗಿದೆ

  ಬಿಡದಿ ಸಮೀಪ ಕಸದಿಂದ ವಿದ್ಯುತ್ ತಯಾರು ಮಾಡುವ ಘಟಕ ನಿರ್ಮಾಣ ಮಾಡಲು 25 ಎಕರೆ ಜಾಗ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ವಿದ್ಯುತ್ ಖರೀದಿ ಒಪ್ಪಂದ ಮಾತ್ರ ಇನ್ನೂ ಬಾಕಿ ಇದೆ.

  English summary
  BBMP introduced new garbage collection system Bengaluru. City residents can now track garbage collection vehicles with a new mobile applications.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X