ಅಕ್ಷಯ ತೃತೀಯ: ಒಂದೇ ದಿನ ಸಾವಿರ ಕೋಟಿ ರೂ. ವಹಿವಾಟು

ಬೆಂಗಳೂರು, ಏಪ್ರಿಲ್ 19: ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಬುಧವಾರ ರಾಜ್ಯಾದ್ಯಂತ 3,495 ಕೆ.ಜಿಗೂ ಅಧಿಕ ಚಿನ್ನ ಹಾಗೂ 2325 ಕೆ.ಜಿಗೂ ಅಧಿಕ ಬೆಳ್ಳಿ ಮಾರಾಟವಾಗಿದೆ. ಒಂದೇ ದಿನ 1,100 ಕೋಟಿ ರೂ ಮೀರಿದ ವಹಿವಾಟು ನಡೆದಿದೆ.

ಬಂಗಾರದ ದರದಲ್ಲಿ ಪ್ರತಿ ಗ್ರಾಂ ಗೆ 200ರಿಂದ 250 ರೂ ಹೆಚ್ಚಾದರೂ ಕೂಡ ನಿರೀಕ್ಷೆಗೂ ಮೀರಿದ ವಹಿವಾಟು ನಡೆದಿದೆ. ಬೆಳ್ಳಿಯ ಬೆಲೆಯೂ ಏರಿಕೆಯಾಗಿತ್ತು. ಕಳೆದ ವರ್ಷ ಎರಡು ದಿನ ಅಕ್ಷಯ ತೃತೀಯ ಬಂದಿತ್ತು. 2,795 ಕೆ.ಜಿ ಗೂ ಅಧಿಕ ಚಿನ್ನ ಹಾಗೂ 1,860 ಕೆಜಿಗೂ ಅಧಿಕ ಬೆಳ್ಳಿ ಮಾರಾಟವಾಗಿತ್ತು. ಒಟ್ಟಾರೆ 796 ಕೋಟಿ ರೂ ವಹಿವಾಟು ನಡೆದಿತ್ತು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಕೂಪನ್ ಮೂಲಕ ಖರೀದಿ: ಕೆಲ ಮಳಿಗೆಗಳಲ್ಲಿ ಮೊದಲೇ ಡೀಲ್ ನಡೆದಿದ್ದರಿಂದಗ್ರಾಹಕರು ಹಾಲಿನ ಕೂಪನ್ ಗಳ ಮಾದರಿಯಲ್ಲಿ ಟೋಕನ್ ಗಳನ್ನು ತಂದು ಆಭರಣ ಕೊಂಡೊಯ್ದು ಸಂಗತಿಯೂ ಬುಧವಾರದ ಅಕ್ಷಯ ತೃತೀಯದಂದ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

On a lucky day, 3500 kg gold sold in the state

ಬೆಳಗ್ಗ ಸುಮಾರು 6.30ರಿಂದಲೇ ಆಭರಣ ಮಳಿಗೆಗಳನ್ನು ತೆರಿಯಲಾಗಿತ್ತು. ಕೆಲವೆಡೆ ರಾತ್ರಿ 10ರವರೆಗೂ ವ್ಯಾಪಾರ ನಡೆಯಿತು. ಹಲವು ಪ್ರತಿಷ್ಠಿತ ಆಭರಣ ಮಳಿಗೆಗಳಲ್ಲಿ ಜನ ಸಾಲುಗಟ್ಟಿ ನಿಂತಿದ್ದರು. ಮತ್ತೆ ಕೆಲವೆಡೆ ಮೊದಲೇ ಖರೀದಿಸಿಟ್ಟಿದ್ದು, ಈ ದಿನ ಮನೆಗೊಯ್ದರು ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ ಕಾರ್ಯದರ್ಶಿ ಡಾ. ಬಿ. ರಾಮಾಚಾರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+