ಹಲಸೂರು ಕೆರೆಯ ಅಂದ ನೋಡಿ; ಸ್ವಚ್ಛಗೊಳಿಸಿದವರಿಗೆ ಸಲಾಂ
ಬೆಂಗಳೂರು, ಡಿಸೆಂಬರ್ 27 : ಬೆಂಗಳೂರಿನ ಹಲಸೂರು ಕೆರೆ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಬಿಬಿಎಂಪಿ ಮತ್ತು ಮಾಜಿ ಸೈನಿಕರ ನೆರವಿನಿಂದ ಕೆರೆಯನ್ನು ಸ್ವಚ್ಛಗೊಳಿಸಲಾಗಿದೆ. 25 ಲೋಡ್ ತ್ಯಾಜ್ಯವನ್ನು ಕೆರೆಯಿಂದ ಹೊರ ಹಾಕಲಾಗಿದೆ.
113 ಎಕರೆ ಪ್ರದೇಶದಲ್ಲಿರುವ ಹಲಸೂರು ಕೆರೆ ತ್ಯಾಜ್ಯದಿಂದ ತುಂಬಿ ಹೋಗಿತ್ತು. ಜೊಂಡು ಬೆಳೆದು ನಿಂತಿತ್ತು. ವಾಸನೆ ಸಹ ಹಬ್ಬಿದ್ದರಿಂದ ವಾಯುವಿಹಾರಿಗಳಿಗೆ ತೊಂದರೆಯಾಗಿತ್ತು. ಡಿಸೆಂಬರ್ 23 ರಿಂದ 27ರ ತನಕ ಸ್ವಚ್ಛತಾ ಕಾರ್ಯವನ್ನು ಕೈಗೊಂಡು, ಕೆರೆಯನ್ನು ಶುಚಿಗೊಳಿಸಲಾಗಿದೆ.
ಬಿಬಿಎಂಪಿ ಅಧಿಕಾರಿಗಳು, ಮಾಜಿ ಸೈನಿಕರು 10 ಬೋಟ್‌ಗಳ ಜೊತೆಗೆ ಸತತ ಪರಿಶ್ರಮದಿಂದ ಕೆರೆ ಸ್ವಚ್ಛಗೊಳಿಸಿದ್ದಾರೆ. ಈಗ ಹಲಸೂರು ಕೆರೆ ಈಗ ನಳನಳಿಸುತ್ತಿದೆ. ವಾಯು ವಿಹಾರಿಗಳಿಗೆ ಆಹ್ಲಾದ ಉಂಟುಮಾಡುತ್ತಿದೆ.

10 ಬೋಟ್‌ಗಳ ಸಹಾಯದಿಂದ ಕೆರೆಯಲ್ಲಿ ಬೆಳೆದಿರುವ ಜೊಂಡು ತೆರವುಗೊಳಿಸಲಾಗಿದೆ. ಕೆರೆಗೆ ಎಸೆಯಲಾಗಿದ್ದ ಪ್ಲಾಸ್ಟಿಕ್, ಥರ್ಮಾಕೋಲ್ ಸೇರಿದಂತೆ 25 ಲೋಡ್ ತ್ಯಾಜ್ಯಗಳನ್ನು ಶುಚಿಗೊಳಿಸಲಾಗಿದೆ. ಕೆರೆಯ ಅಂಗಳದಲ್ಲಿ ಬೆಳೆದಿದ್ದ ಕಳೆ ತೆರವುಗೊಳಿಸಿ ಔಷಧಿ ಸಿಂಪಡಿಸಲಾಗಿದೆ.

ಬೆಂಗಳೂರು ನಗರದ ಸ್ಯಾಂಕಿ ಕೆರೆ, ಹಲಸೂರು ಕೆರೆಗಳಿಗೆ ಹಲವು ವರ್ಷಗಳ ಇತಿಹಾಸವಿದೆ. ಇಂತಹ ಕೆರೆಗಳನ್ನು ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಪಾಲಿಕೆ ಸಿಬ್ಬಂದಿ ಸಹ ಕೆರೆಯನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದಾರೆ.












Click it and Unblock the Notifications