ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್ ಅಂತ್ಯದವರೆಗೂ ಬೆಂಗಳೂರಲ್ಲಿ ಕುಡಿವ ನೀರಿಗೆ ಸಮಸ್ಯೆಯಿಲ್ಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಬೇಸಿಗೆ ಈಗಾಗಲೇ ಆರಂಭವಾಗಿದೆ, ಆದರೆ ಕಳೆದ ವರ್ಷ ಬಂದ ಉತ್ತಮ ಮಳೆಯಿಂದಾಗಿ ಜೂನ್ ಅಂತ್ಯದವರೆಗೂ ಬೆಂಗಳೂರಿನಲ್ಲಿ ನೀರಿನ ತೊಂದರೆ ಇಲ್ಲ ಎಂದು ಜಲಮಂಡಳಿ ಅಭಯ ನೀಡಿದೆ.

ಐದು ವರ್ಷಗಳಲ್ಲಿ 37 ಕೆರೆಗಳಿಗೆ ಮರುಜೀವ ನೀಡಿದ ಬಿಬಿಎಂಪಿಐದು ವರ್ಷಗಳಲ್ಲಿ 37 ಕೆರೆಗಳಿಗೆ ಮರುಜೀವ ನೀಡಿದ ಬಿಬಿಎಂಪಿ

ನಗರಕ್ಕೆ ನೀರು ಪೂರೈಸುವ ಜಲಮೂಲಗಳಲ್ಲಿ ಅಗತ್ಯ ಪ್ರಮಾಣದ ನೀರು ಸಂಗ್ರಹವಿದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಕೃಷ್ಣರಾಜ ಸಾಗರ ಹಾಗೂ ಕಬಿನಿ ಜಲಾಶಯಗಳಲ್ಲಿ ಅಗತ್ಯಕ್ಕಿಂತ ನೀರು ಸಂಗ್ರಹವಿದ್ದು, ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವುದಿಲ್ಲ. ನಗರಕ್ಕೆ ಜೂನ್ ಅಂತ್ಯದ ವೇಳೆಗೆ ಬೆಂಗಳೂರು ನಗರಕ್ಕೆ 4 ಟಿಎಂಸಿ ನೀರು ಅಗತ್ಯವಿದೆ. ಕೆಆರ್ ಎಸ್ ಜಲಾಶಯದಲ್ಲಿ ಪ್ರಸ್ತುತ ಡೆಡ್ ಸ್ಟೋರೇಜ್ ಹೊರತುಪಡಿಸಿ 4.66 ಟಿಎಂಸಿ ನೀರು ಅಗತ್ಯವಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಕಬಿನಿ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಹೊರತುಪಡಿಸಿ 2.76 ಟಿಎಂಸಿ ನೀರು ಸಂಗ್ರಹವಿದ್ದು, ಒಟ್ಟು 7.42ಟಿಎಂಸಿ ನೀರಿದೆ. ಹಾಗಾಗಿ ಬೆಂಗಳೂರು ನಗರಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರು ಸಂಗ್ರಹವಿರುವುದರಿಂದ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ಜಲ ಮಂಡಳಿ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ ತಿಳಿಸಿದ್ದಾರೆ.

No water scarcity for Bengaluru up to June

ಕಳೆದ ವರ್ಷ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಹಿಂಗಾರು ಮಳೆ ಚೆನ್ನಾಗಿ ಆಗಿದ್ದು, ನಗರದಲ್ಲಿ ಅಂತರ್ಜಲ ಮಟ್ಟ ವೃದ್ಧಿಸಿತ್ತು. ಪರಿಣಾಮ ಕೊಳವೆ ಬಾವಿಗಳಲ್ಲಿಯೂ ಅಗತ್ಯವಾದ ನೀರಿನ ಪ್ರಮಾಣ ಲಭ್ಯವಿದೆ. ಅಲ್ಲದೆ, ಜೂನ್ ಅಂತ್ಯದ ವೇಳೆಗೆ ಮುಂಗಾರು ಪ್ರಾರಂಭವಾಗಲಿದ್ದು ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

English summary
Bengaluru will get sufficient water even in summer this year up to end of June. BWSSB has said KRS reservoir has 4.66 TMC feet of water since the city needed 4 TMC feet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X