RCB: ಆರ್‌ಸಿಬಿಯಲ್ಲಿ ಜೋಶ್ ಹ್ಯಾಜಲ್‌ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ
RCB Josh Hazlewood: ಐಪಿಎಲ್ 19ನೇ ಸೀಸನ್ ಮಾರ್ಚ್ 28ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ. ಕಾರಣ ಸ್ಟಾರ್ ಬೌಲರ್ ಜೋಶ್ ಹೇಜಲ್‌ವುಡ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವುದು. ಒಂದು ವೇಳೆ ಇವರು ಹೊರಗುಳಿದರೆ, ಇವರ ಸ್ಥಾನ ತುಂಬುವ ಮತ್ತೊಬ್ಬ ದಾಂಡಿಗ ಯಾರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಫಿಟ್ನೆಸ್ ಸಮಸ್ಯೆಯ ಕಾರಣದಿಂದ ಐಪಿಎಲ್ 2026ರ ಆರಂಭಿಕ ಪಂದ್ಯಗಳನ್ನು ಆಡುವುದು ಅನುಮಾನ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರಿಂದ ಆರ್‌ಸಿಬಿ ಆಘಾತಕ್ಕೆ ಒಳಗಾಗಿದ್ದು, ಇವರ ಸ್ಥಾನವನ್ನು ತುಂಬುವವರು ಯಾರು ಎನ್ನುವ ಯೋಚನೆಯಲ್ಲಿದೆ.

ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಹ್ಯಾಜಲ್‌ವುಡ್
ಆರ್‌ಸಿಬಿ ಸ್ಟಾರ್ ಜೋಶ್ ಹ್ಯಾಜಲ್‌ವುಡ್ ಪೂರ್ಣ ಪ್ರಮಾಣದ ಫಿಟ್‌ನೆಸ್ ಹೊಂದಿಲ್ಲದ ಕಾರಣ, ಈ ಬಾರಿಯ ಸೀಸನ್‌ನ ಆರಂಭಿಕ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಐಪಿಎಲ್ ಸೀಸನ್‌ನಲ್ಲಿ ಆಡಲು ಹ್ಯಾಜಲ್‌ವುಡ್ ಅವರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ವೈದ್ಯಕೀಯ ತಂಡದಿಂದ ಇನ್ನೂ ಅಧಿಕೃತ ಕ್ಲಿಯರೆನ್ಸ್ ಸಿಕ್ಕಿಲ್ಲ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅವರು ಪಂದ್ಯಕ್ಕೆ ಬೇಕಾದ ಸಂಪೂರ್ಣ ದೈಹಿಕ ಸಾಮರ್ಥ್ಯ ಸಾಧಿಸಲು ಇನ್ನಷ್ಟು ಸಮಯ ಬೇಕಾಗಬಹುದು ಎನ್ನಲಾಗಿದೆ.
ಆರ್‌ಸಿಬಿ ಬೌಲಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿರುವ ಹ್ಯಾಜಲ್‌ವುಡ್ ಅನುಪಸ್ಥಿತಿ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅವರು ಯಾವಾಗ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಬಗ್ಗೆ ಫ್ರಾಂಚೈಸಿ ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುವ ನಿರೀಕ್ಷೆ ಇದೆ. ಅಭಿಮಾನಿಗಳು ಕೂಡ ಹ್ಯಾಜಲ್‌ವುಡ್ ಬರುವಿಕೆಗಾಗಿಯೇ ಕಾತರದಿಂದ ಕಾದು ಕುಳಿತಿದ್ದಾರೆ.
ಹ್ಯಾಜಲ್‌ವುಡ್ ಸದ್ಯ ಚೇತರಿಸಿಕೊಳ್ಳುವ ಹಂತದಲ್ಲಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅವರಿಗೆ ಪಂದ್ಯಕ್ಕೆ ಬೇಕಾದ ಸಂಪೂರ್ಣ ಫಿಟ್‌ನೆಸ್ ಪಡೆಯಲು ಇನ್ನೂ ಕಾಲಾವಕಾಶ ಬೇಕಿದೆ.
ಮಾರ್ಚ್ 28ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2026ರ ಉದ್ಘಾಟನಾ ಪಂದ್ಯದ ವೇಳೆಗೆ ಹ್ಯಾಜಲ್‌ವುಡ್ ಫಿಟ್ ಆಗುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ. ಆದ್ದರಿಂದ ತಂಡವು ಇವರ ಸ್ಥಾನ ತುಂಬಬಲ್ಲ ಪರ್ಯಾಯ ಆಟಗಾರನ ಆಯ್ಕೆ ಪ್ರಕ್ರಿಯೆಯಲ್ಲಿದೆ ಎಂದು ತಿಳಿದುಬಂದಿದೆ.
ಅಧಿಕಾರಿಗಳು ಹೇಳುವುದೇನು?
"ಸದ್ಯ ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹ್ಯಾಜಲ್‌ವುಡ್ ಇಬ್ಬರೂ ಆಟಗಾರರು ಚೇತರಿಸಿಕೊಳ್ಳುವ ಹಂತದಲ್ಲಿದ್ದಾರೆ. ಮಾರ್ಚ್ 28ರಿಂದ ಆರಂಭ ಆಗಲಿರುವ ಟೂರ್ನಿಯ ಮೊದಲ ಕೆಲವು ಪಂದ್ಯಗಳಿಗೆ ಇವರಿಬ್ಬರು ಲಭ್ಯವಿರುವುದಿಲ್ಲ. ಅಲ್ಲದೆ, ಆಸ್ಟ್ರೇಲಿಯಾದ ಈ ಇಬ್ಬರು ವೇಗಿಗಳು ಟೂರ್ನಿಯ ಮಧ್ಯದಲ್ಲಿ ತಂಡವನ್ನು ಸೇರಿಕೊಂಡರೂ ಸಹ, ಅವರು ಆಡುವ ಪಂದ್ಯಗಳ ಸಂಖ್ಯೆ ತೀರಾ ಕಡಿಮೆ ಇರಲಿದೆ," ಎಂದು ಅಧಿಕಾರಿಯೊಬ್ಬರು ಸುಳಿವು ನೀಡಿದ್ದಾರೆ ಅಂತಾ ವರದಿಯಾಗಿದೆ.
ಫಿಟ್‌ನೆಸ್ ಪ್ರಮಾಣಪತ್ರದ ಮೇಲೆ ಅವಲಂಬನೆ
ಆದರೆ, ತಂಡಕ್ಕೆ ಎಂಟ್ರಿ ಕೊಡುವುದು ಅವರ ಫಿಟ್‌ನೆಸ್ ಪ್ರಮಾಣಪತ್ರದ ಮೇಲೆ ಅವಲಂಬಿತವಾಗಿದೆ. ಹ್ಯಾಜಲ್‌ವುಡ್‌ಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ವೈದ್ಯಕೀಯ ತಂಡದಿಂದ ಒಮ್ಮೆ ಒಪ್ಪಿಗೆ ಸಿಕ್ಕರೆ ಸಾಕು, ಅವರು ಭಾರತಕ್ಕೆ ಪ್ರಯಾಣಿಸಲು ಸಿದ್ಧರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಆರ್‌ಸಿಬಿ ಬೌಲಿಂಗ್ ಜವಾಬ್ದಾರಿ ಯಾರ ಮೇಲೆ?
ಜೋಶ್ ಹ್ಯಾಜಲ್‌ವುಡ್ ಅವರ ಅನುಪಸ್ಥಿತಿಯಲ್ಲಿ ಆರ್‌ಸಿಬಿ ಬೌಲಿಂಗ್ ವಿಭಾಗದ ಸಂಪೂರ್ಣ ಜವಾಬ್ದಾರಿ ಈಗ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಹೆಗಲ ಮೇಲಿದೆ. ಹಾಲಿ ಚಾಂಪಿಯನ್ಸ್ ಪರವಾಗಿ ಬೌಲಿಂಗ್ ಪಡೆಯನ್ನು ಮುನ್ನಡೆಸುವ ಹೊಣೆಗಾರಿಕೆ ಇವರದ್ದೇ ಆಗಿರಲಿದೆ. ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವ ಇವರ ಚಾಣಾಕ್ಷತನ ತಂಡಕ್ಕೆ ಅತ್ಯಂತ ಅಗತ್ಯವಾಗಿದೆ. ಹ್ಯಾಜಲ್‌ವುಡ್ ಬದಲಿಗೆ ಇವರೇ ಬೌಲಿಂಗ್ ವಿಭಾಗದ 'ಬಾಸ್' ಆಗಲಿದ್ದಾರೆ.
ಹ್ಯಾಜಲ್‌ವುಡ್ ಸ್ಥಾನ ತುಂಬುವರು ಯಾರು?
ಇನ್ನೂ ಭುವಿ ಅವರಿಗೆ ಸಾಥ್ ನೀಡಲು ಕಿವೀಸ್ ವೇಗಿ ಜಾಕೋಬ್ ಡಫ್ಪಿ ಮತ್ತು ಶ್ರೀಲಂಕಾದ ಲಸಿತ್ ಮಾಲಿಂಗ ಶೈಲಿಯ ಬೌಲರ್ ನುವಾನ್ ತುಷಾರ ಸಜ್ಜಾಗಿದ್ದಾರೆ. ಹ್ಯಾಜಲ್‌ವುಡ್ ಅಲಭ್ಯತೆಯಿಂದ ಉಂಟಾಗಿರುವ ಶೂನ್ಯವನ್ನು ತುಂಬಲು ಆರ್‌ಸಿಬಿ ಈಗ ಈ ಮೂವರು ವೇಗಿಗಳ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದೆ ಎನ್ನಲಾಗಿದೆ.
ಆರ್‌ಸಿಬಿ ಟ್ರೋಫಿ ಗೆಲುವಿನ ಸೂತ್ರದಾರ
ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ₹12.5 ಕೋಟಿ ಭಾರಿ ಮೊತ್ತ ನೀಡಿ ಜೋಶ್ ಹ್ಯಾಜಲ್‌ವುಡ್ ಅವರನ್ನು ಖರೀದಿಸಿತ್ತು. ಫ್ರಾಂಚೈಸಿ ಇವರ ಮೇಲೆ ಇಟ್ಟಿದ್ದ ನಂಬಿಕೆಗೆ ತಕ್ಕಂತೆ ಹ್ಯಾಜಲ್‌ವುಡ್ ಅದ್ಭುತ ಪ್ರದರ್ಶನ ನೀಡಿದ್ದಾರೆ. 2025ರಲ್ಲಿ ಆರ್‌ಸಿಬಿ ಟ್ರೋಫಿ ಗೆಲುವಿನ ಪ್ರಮುಖ ಪಾತ್ರದಾರಿಗಳಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.
ಇವರು ಕೇವಲ 12 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿ ಎದುರಾಳಿ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಿದ್ದರು. 17.54ರ ಸರಾಸರಿಯಲ್ಲಿ ಬೌಲಿಂಗ್ ಮಡುವ ಮೂಲಕ ಅವರು ಅತ್ಯಂತ ಪರಿಣಾಮಕಾರಿ ಬೌಲರ್ ಎನಿಸಿಕೊಂಡಿದ್ದರು. ಪಂದ್ಯದ ಮಹತ್ವದ ಹಂತಗಳಲ್ಲಿ ಬೌಲಿಂಗ್ ಮಾಡಿದರೂ 8.77ರ ಎಕಾನಮಿ ಕಾಯ್ದುಕೊಂಡಿದ್ದರು. ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಹ್ಯಾಜಲ್‌ವುಡ್ ಅವರ ಪಾತ್ರವು ಪ್ರಮಯಖವಾಗಿದೆ. ಇದೇ ಕಾರಣಕ್ಕೆ ಈ ಬಾರಿ ಆರಂಭಿಕ ಪಂದ್ಯಗಳಲ್ಲಿ ಅವರ ಅನುಪಸ್ಥಿತಿ ಅಭಿಮಾನಿಗಳು ಹಾಗೂ ತಂಡದ ಮ್ಯಾನೇಜ್‌ಮೆಂಟ್‌ಗೆ ಆತಂಕ ಮೂಡಿಸಿದೆ. ಒಟ್ಟಿನಲ್ಲಿ ಹೇಳುವುದಾದರೆ, ಜೋಶ್ ಹ್ಯಾಜಲ್‌ವುಡ್ ಗಾಯದಿಂದ ಚೇತರಿಸಿಕೊಂಡು ಆರ್‌ಸಿಬಿ ಪಡೆಗೆ ಯಾವಾಗ ಸೇರಿಕೊಳ್ಳಲಿದ್ದಾರೆಯೋ ಎನ್ನುವ ಪ್ರಶ್ನೆ ಮೂಡಿದೆ.












Click it and Unblock the Notifications