ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸೆಂಬರ್ 22ರಿಂದ ನಮ್ಮ ಮೆಟ್ರೋ ಪಿಲ್ಲರ್ ದುರಸ್ತಿ ಕಾರ್ಯ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 21: ಮೈಸೂರುರಸ್ತೆ-ಬೈಯಪ್ಪನಹಳ್ಳಿ ನೇರಳೆ ಮಾರ್ಗದ ಟ್ರಿನಿಟಿ ವೃತ್ತ ಬಳಿಯ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಬಳಿಕ ಅದು ಬಿರುಕಲ್ಲ ಮಳೆ ಬಂದಾಗ ನೀರು ಸರಾಗವಾಗಿ ಹೋಗಲು ಮಾಡಿರುವ ಹನಿಕೊಂಬ್ ವ್ಯವಸ್ಥೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದರು.

ಮೆಟ್ರೋ ಟ್ರಿನಿಟಿ ಸರ್ಕಲ್ ವಯಾಡಕ್ಟ್ ನ ಬೀಮ್ ದುರಸ್ತಿ ಶನಿವಾರ ಮತ್ತು ಭಾನುವಾರ ನಡೆಯುವುದು ಇನ್ನೂ ಖಾತರಿಯಾಗಿಲ್ಲ, ಐಐಎಸ್‌ಸಿ ತಜ್ಞರು ಹಾಗೂ ಅಧಿಕಾರಿಗಳು ಮತ್ತೊಮ್ಮೆ ಕಾಂಕ್ರೀಟ್ ಪರೀಕ್ಷೆ ನಡೆಸುತ್ತಿದ್ದಾರೆ.

ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ

ಕಾಂಕ್ರೀಟ್ ತುಂಬಿದ ಕನಿಷ್ಠ ಎರಡು ದಿನ ಒಣಗಲು ಬಿಡಬೇಕಾಗುತ್ತದೆ. ಹೀಗಾಗಿ ಪ್ರಯಾಣಿಕರಿಗೆ ತೊಂದರೆಯಾಗದಿರಲು ಶನಿವಾರ ಮತ್ತು ಭಾನುವಾರ ದುರಸ್ತಿ ಕಾರ್ಯ ನಡೆಸಲು ಬಿಎಂಆರ್‌ಸಿಎಲ್ ಮುಂದಾಗಿತ್ತು.

Metro pillar repair work resume from Tomorrow

ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ? ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ?

ಆದರೆ ವಾರ ಅಂತ್ಯವಾಗುತ್ತಾ ಬಂದರೂ ದುರಸ್ತಿ ಬಗ್ಗೆ ಜನರಿಗೆ ಮಾಹಿತಿ ನೀಡಿಲ್ಲ. ಕ್ರಿಸ್‌ಮಸ್ ಹಾಗೂ ವಾರ್ಷಚರಣೆ ಹಿನ್ನೆಲೆಯಲ್ಲಿ ತಡರಾತ್ರಿವರೆಗೂ ಮೆಟ್ರೋ ಸೇವೆ ವಿಸ್ತರಿಸಬೇಕಾಗುತ್ತದೆ. ಅಷ್ಟರಲ್ಲೇ ರಿಪೇರಿ ಕಾರ್ಯ ಪೂರ್ಣಗೊಳಿಸಲು ಸಿದ್ಧತೆ ನಡೆದಿದೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.

English summary
BMRCL has decided to repair the Namma metro pillar of Trinity circle. As per officials information it will resume from tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X