ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಪ್ರಮುಖ ಬಸ್ ಟರ್ಮಿನಲ್ ನಿರ್ಮಾಣ ಪೂರ್ಣ, ಉದ್ಘಾಟನೆ ಶೀಘ್ರ

ನಿತ್ಯ ಲಕ್ಷಾಂತರ ಮಂದಿಯ ಪ್ರಯಾಣಕ್ಕೆ ಆಸರೆಯಾದ, ನಗರದ ಹೃದಯಭಾಗದಿಂದ ಅಷ್ಟ ದಿಕ್ಕುಗಳಿಗೂ ಸಂಪರ್ಕ ಒದಗಿಸುವ ಬೆಂಗಳೂರಿನ ಬಸ್ ನಿಲ್ದಾಣ ಟರ್ಮಿನಲ್ ಉದ್ಘಾಟನೆಗೆ ಸಜ್ಜಾಗಿದೆ. ಯಾವ ನಿಲ್ದಾಣ ತಿಳಿಯಿರಿ.

|
Google Oneindia Kannada News

ಬೆಂಗಳೂರು, ಫೆಬ್ರವರಿ 08: ನಿತ್ಯ ಲಕ್ಷಾಂತರ ಮಂದಿಯ ಪ್ರಯಾಣಕ್ಕೆ ಆಸರೆಯಾದ, ನಗರದ ಹೃದಯಭಾಗದಿಂದ ಅಷ್ಟ ದಿಕ್ಕುಗಳಿಗೂ ಸಂಪರ್ಕ ಒದಗಿಸುವ ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣದ ಟರ್ಮಿನಲ್ ಉದ್ಘಾಟನೆಗೆ ಸಜ್ಜಾಗಿದೆ.

ಸುಮಾರು ಆರು ವರ್ಷಗಳ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಶಂಕುಸ್ಥಾಪನೆ ಆಗಿದ್ದ ಸಿಲಿಕಾನ್ ಸಿಟಿಯ ಬೆಂಗಳೂರಿಗೆ ವಿವಿಧ ಅಷ್ಟ ದಿಕ್ಕುಗಳಿಂದಲೂ ಸಂರ್ಪಕ ಹೊಂದುವ ಕಲಾಸಿಪಾಳ್ಯ ಬಸ್ ನಿಲ್ದಾಣ ಟರ್ಮಿನಲ್ ಕೆಲಸ ಪೂರ್ಣಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಯು ಆಗಲಿದೆ. ಈ ನಿಲ್ದಾಣಕ್ಕೆ ಬರುವ ಬಸ್‌ಗಳು ಕೇವಲ ಬೆಂಗಳೂರಿಗೆ ಮಾತ್ರ ಸಿಮೀತವಾಗಿಲ್ಲ. ಬದಲಾಗಿ ನಗರದಿಂದ ದೇಶದ ವಿವಿಧ ನಗರಗಳು, ರಾಜ್ಯಗಳಿಗೆ ಇಲ್ಲಿಂದಲೂ ಬಸ್‌ಗಳು ತೆರಳುತ್ತವೆ.

ಖಾಸಗಿ ಬಸ್​ಗಳ ನಿಲುಗಡೆ, ಸಾರ್ವಜನಿಕರ ನೆಚ್ಚಿನ ತಾಣವು ಆಗಿರುವ ಕಲಾಸಿಪಾಳ್ಯದಲ್ಲಿ ಟರ್ಮಿನಲ್ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು 4.13 ಎಕರೆ ಪ್ರದೇಶದಲ್ಲಿರುವ ಈ ಯೋಜನೆಗೆ ಒಟ್ಟು 60 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಇದನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಿರ್ಮಾಣ ಮಾಡಿಸಿದೆ. ಅನೇಕ ವರ್ಷಗಳಿಂದ ಇಂತದ್ದೊಂದು ವ್ಯವಸ್ಥೆಗೆ ಬೇಡಿಕಿ ಇತ್ತು ಎನ್ನಲಾಗಿದೆ.

Bengaluru Kalasipalya BMTC Bus Stand Terminal Construction Completed, Inauguration Soon

2016ರ ಆಸುಪಾಸಿಗೆ ಆರಂಭವಾದ ಟರ್ಮಿನಲ್ ಯೋಜನೆ ನಿರ್ಮಾಣ ಯೋಜನೆಯು 2018ರ ಡಿಸೆಂಬರ್​ನಲ್ಲಿಯೇ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸುಮಾರು ನಾಲ್ಕು ವರ್ಷ ನಂತರ ತಡವಾಗಿ ಪೂರ್ಣಗೊಂಡಿದೆ.

ಸಂಚಾರ, ನಿಲುಗಡೆ ಕಿರಿಕಿರಿ ತಪ್ಪಲಿದೆ

ಇದುವರೆಗೆ ಕಲಾಸಿಪಾಳ್ಯದಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಅಂತರ್‌ರಾಜ್ಯ ಸರ್ಕಾರಿ ಹಾಗೂ ಖಾಸಗಿ ಬಸ್​ಗಳು ಪಕ್ಕದ ರಸ್ತೆಯಲ್ಲೇ ನಿಲುಗಡೆ ಮಾಡುತ್ತಿವೆ. ಅವುಗಳಿಗೆ ಆದಷ್ಟ ಶೀಘ್ರವೇ ಈ ನಿಲ್ದಾಣ ಸಹಾಯಕ್ಕೆ ಬರಲಿದೆ. ಒಟ್ಟು 60 ಕೋಟಿ ರೂ. ಪೈಕಿ ಕೇಂದ್ರ ಸರ್ಕಾರ ನಗರ ಭೂ ಸಾರಿಗೆ ನಿರ್ದೇಶನಾಲಯದಡಿ 25 ಕೋಟಿ ರೂಪಾಯಿಗಳನ್ನು ಭರಿಸಿದರೆ ಬಾಕಿ ಹಣವನ್ನು ಬೆಂಗಳೂರ ಮಹಾನಗರ ಸಾರಿಗೆ ಸಂಸ್ಥೆಯೇ ಒದಗಿಸಿ ಟರ್ಮಿನಲ್ ನಿರ್ಮಿಸಿದೆ.

Bengaluru Kalasipalya BMTC Bus Stand Terminal Construction Completed, Inauguration Soon

ಸದಾ ಜನದಟ್ಟಣೆಯಿಂದ ಕೂಡಿರುವ ಕಲಾಸಿಪಾಳ್ಯ ಪ್ರದೇಶಕ್ಕೆ ನಿತ್ಯ ಲಕ್ಷಾಂತರ ಮಂದಿ ಭೇಟಿ ಕೊಡುತ್ತಾರೆ. ಈ ನಿಲ್ದಾಣದಿಂದಲೇ ಅವರೆಲ್ಲ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಾರೆ. ಬೆಂಗಳೂರಿಗೆ ಹತ್ತಿರವಿರುವ ಪ್ರದೇಶಗಳು, ಹೊರವಲಯದ ಸ್ಥಳಗಳ ರೈತರು ತಾವು ಬೆಳೆದ ಹೂವು, ಹಣ್ಣು, ತರಕಾರಿಗಳನ್ನು ಇನ್ನಿತರ ಕೃಷಿ ಉತ್ಪನ್ನಗಳನ್ನು ಬಸ್​ಗಳಲ್ಲಿಯೇ ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಅವರೆಲ್ಲ ಓಡಾಟಕ್ಕೆ ರಸ್ತೆಯಲ್ಲೇ ನಿಲ್ಲುವ ಬಸ್‌ಗಳಿಂದ ತೊಂದರೆ ಆಗುತ್ತಿತ್ತು, ಆದಷ್ಟು ಶೀಘ್ರವೇ ಇದೆಲ್ಲ ಕಿರಿಕಿರಿಗಳು ನಿವಾರಣೆ ಆಗಲಿವೆ.

ಈ ಟರ್ಮಿನಲ್ ಏಕಕಾಲದಲ್ಲಿ 18 ಬಿಎಂಟಿಸಿ, ಆರು ಕೆಎಸ್​ಆರ್​ಟಿಸಿ ಹಾಗೂ ಆರು ಖಾಸಗಿ ಬಸ್​ಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

English summary
Bengaluru Kalasipalya BMTC bus stand Terminal construction completed, Inauguration soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X