ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಲಂಬೋದಲ್ಲಿ ಜೆಡಿಎಸ್ ಸಭೆ: ಖರ್ಚು ಯಾರದ್ದು?

By Srinath
|
Google Oneindia Kannada News

ಬೆಂಗಳೂರು, ಜೂ.11: ಅಕ್ಕಪಕ್ಕದ ರಾಜ್ಯಗಳಲ್ಲಿ ಐಷಾರಾಮಿ ರೆಸಾರ್ಟುಗಳತ್ತ ರಾಜಕೀಯ ಗುಳೆ ಹೋಗುವುದು ನಮ್ಮ ರಾಜಕಾರಣಿಗಳಿಗೆ ಹೊಸದೇನೂ ಅಲ್ಲ. ಆದರೆ ಈ ಬಾರಿ ಜಾತ್ಯಾತೀತ ಜನತಾದಳ ಪಕ್ಷದ ನಾಯಕರು ಪಕ್ಕದ ಕೊಲಂಬೋಕ್ಕೆ ತೆರಳುತ್ತಿರುವುದು ಹಲವರ ಹುಬ್ಬೇರಿಸಿದೆ. ಪಕ್ಷದ ಶಾಸಕರು ಇಂದು ಬುಧವಾರ ಬೆಂಗಳೂರಿನಲ್ಲಿ ಸಭೆ ಸೇರಿ ತಮ್ಮ ವಿದೇಶ ಪ್ರವಾಸದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಅಂದಹಾಗೆ ಜೆಡಿಎಸ್ ನಾಯಕರಿಗೆ ತಾವೂ ವಿದೇಶಿ ನೆಲೆಯಲ್ಲಿ ರಾಜಕೀಯ ಸಭೆಗಳನ್ನು ನಡೆಸುವಂತಾಗಬೇಕು ಎಂಬ ಸುಪ್ತ ಬಯಕೆಯಿತ್ಥಾದರೂ ಹಣಕಾಸು ಮುಗ್ಗಟ್ಟು ಅವರನ್ನು ಕಟ್ಟಿಹಾಕುತ್ತಿತ್ತು. (ಪಕ್ಷಕ್ಕೆ ಜೀವ ತುಂಬಲು ವಿದೇಶ ಪ್ರವಾಸಕ್ಕೆ ಹೊರಟ ಜೆಡಿಎಸ್)

ಆದರೆ ಇದೀಗ ರಾಜ್ಯಸಭೆ ಚುನಾವಣೆ ಜೆಡಿಎಸ್ ಪಕ್ಷಕ್ಕೆ ಬಯಸೆ ಬಂದ ಭಾಗ್ಯದಂತಾಗಿದೆ. ಮೂಲತಃ ಕಾಂಗ್ರೆಸ್ಸಿನವರೇ ಆದರೂ ರಿಯಲ್ ಎಸ್ಟೇಟ್ ಧಣಿ ಕುಪೇಂದ್ರ ರೆಡ್ಡಿ ಈ ಬಾರಿ ತುಸು ಕಾಂಗ್ರೆಸ್ ನೆರವಿನೊಂದಿಗೆ ತಮ್ಮ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆ ಅಖಾಡಕ್ಕೆ ಇಳಿದಿರುವುದು ಜೆಡಿಎಸ್ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ.

jds-meet-in-colombo-from-june-15-who-will-bear-expenses

ಏಕೆಂದರೆ ಪಕ್ಷದ ಒಳ ಮೂಲಗಳ ಪ್ರಕಾರ ಕುಪೇಂದ್ರ ರೆಡ್ಡಿ ಅವರು ಜೆಡಿಎಸ್ಸಿನ ಕೊಲಂಬೊ ಸಭೆಯ ಅಷ್ಟೂ ಖರ್ಚು ವೆಚ್ಚವನ್ನು ತಾವೇ ನೋಡಿಕೊಳ್ಳುವುದಾಗಿ ವಾಗ್ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. (ರಾಜ್ಯಸಭೆ ಚುನಾವಣೆ ಕುಪೇಂದ್ರ ರೆಡ್ಡಿ ಜೆಡಿಎಸ್ ಅಭ್ಯರ್ಥಿ)

39 ಮಂದಿ ಶಾಸಕರೊಂದಿಗೆ ವಿಧಾನಸಭೆಯಲ್ಲಿ ಜೆಡಿಎಸ್ ನಾಯಕರಾಗಿರುವ ಕುಮಾರಸ್ವಾಮಿ ಅವರು ಪಕ್ಷದ ಇತರೆ ಕೆಲ ನಾಯಕರೊಂದಿಗೆ ಶ್ರೀಲಂಕಾದ ಕೊಲಂಬೋದಲ್ಲಿ ಮೂರು ದಿನಗಳ ಕಾಲ ಮುಕ್ತವಾಗಿ ಸಮಾಲೋಚನೆ ನಡೆಸಲಿದ್ದಾರೆ.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬ್ಯಾಕ್ ಟು ಬ್ಯಾಕ್ ಎಂಬಂತೆ ಸೋತು ಕಳೆಗುಂದಿರುವ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಚೈತನ್ಯ ತುಂಬಲು, ಪಕ್ಷ ಸಂಘಟನೆಯನ್ನು ಬಲಪಡಿಸಲು ಮತ್ತು ಶಾಸಕರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಜೆಡಿಎಸ್ ಅಧಿನಾಯಕರು ಇದೇ 15ನೇ ತಾರೀಕಿನಿಂದ ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ.

English summary
JDS Meet in Colombo from June 15 who will bear expenses? Kupendra reddy, a passionate Congressman, a builder by profession and now JDS candidate for Rajya Sabha nomination could be the answer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X