ನ.30ರಂದು 'ಜನ ಕಲ್ಯಾಣ ಮಹೋತ್ಸವ': ಜಿಬಿಎ ವ್ಯಾಪ್ತಿಯ ಸಾವಿರಾರು ಜನರಿಗೆ ಸಿಗಲಿವೆ ಪ್ರಯೋಜನಗಳು: ಸಚಿವ

ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಇನ್ನಷ್ಟು ಕಾಳಜಿಪೂರ್ವಕವಾಗಿ ಮತ್ತು ಸಬಲೀಕೃತ ನಗರವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ( GBA) ಮಹತ್ವದ ಹೆಜ್ಜೆ ಇಟ್ಟಿದೆ. ನವೆಂಬರ್ 30ರಂದು 'ಜನ ಕಲ್ಯಾಣ ಮಹೋತ್ಸವ'ವನ್ನು ಆಯೋಜಿಸಿದೆ. ಇದರಿಂದ ಜಿಬಿಎ ವ್ಯಾಪ್ತಿಯಲ್ಲಿ ಆಯ್ಕೆಯಾದ 17,771 ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಅಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 'ಜನ ಕಲ್ಯಾಣ ಮಹೋತ್ಸವ'ಕ್ಕೆ ಚಾಲನೆ ನೀಡಲಿದ್ದಾರೆ. ಸಮಾಜದ ಬಡ, ಹಿಂದುಳಿದ ಮತ್ತು ದುರ್ಬಲ ವರ್ಗದವರನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ 10 ಕಲ್ಯಾಣ ಯೋಜನೆಗಳನ್ನು ಈ ಉಪಕ್ರಮವು ಒಟ್ಟುಗೂಡಿಸಿದೆ. ಅದರಲ್ಲಿ ಆಯ್ಕೆಯಾಗುವ ಫಲಾನುಭವಿಗಳಿಗೆ ಪ್ರಯೋಜನ ತಲುಪಲಿದೆ. ಇದು ಜಿಬಿಎ ಐದು ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಾಗಲಿದೆ.

GBA Jan Kalyana Mahotsava on Nov-30 to Benefit 17 771 People Under Rs 352 81 Cr Drive Krishna Byre Gowda

ಕೇವಲ ಕಲ್ಯಾಣ ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕಿಂತ ಮಿಗಿಲಾಗಿ, ಬೆಂಗಳೂರಿನ ಬೆಳವಣಿಗೆಯ ಲಾಭವು ಅತೀ ಹೆಚ್ಚು ನೆರವಿನ ಅಗತ್ಯವಿರುವ ಕುಟುಂಬಗಳಿಗೆ ತಲುಪುವಂತೆ ಮಾಡುವ ಸರ್ಕಾರದ ಬದ್ಧತೆ ಜನ ಕಲ್ಯಾಣ ಮಹೋತ್ಸವ ಪ್ರತಿಬಿಂಬಿಸುತ್ತದೆ.

Bengaluru Metro: ಹಳಿಗೆ ಬಿದ್ದ 17 ಪ್ರಕರಣ ಬಳಿಕವೂ ಎಚ್ಚೆತ್ತುಕೊಳ್ಳದ ಮೆಟ್ರೋ! PSD ಅಳವಡಿಕೆಗೆ ಸಂಸದ ಮತ್ತೆ ಆಗ್ರಹ
Bengaluru Metro: ಹಳಿಗೆ ಬಿದ್ದ 17 ಪ್ರಕರಣ ಬಳಿಕವೂ ಎಚ್ಚೆತ್ತುಕೊಳ್ಳದ ಮೆಟ್ರೋ! PSD ಅಳವಡಿಕೆಗೆ ಸಂಸದ ಮತ್ತೆ ಆಗ್ರಹ

ಒಟ್ಟು 352.81 ಕೋಟಿ ರೂ.ಆರ್ಥಿಕ ಗುರಿಯೊಂದಿಗೆ, ಕುಟುಂಬಗಳ ಅತ್ಯಂತ ಪ್ರಮುಖ ಅಗತ್ಯಗಳಾದ ಜೀವನೋಪಾಯ, ಶಿಕ್ಷಣ, ಸಂಚಾರ ವ್ಯವಸ್ಥೆ ಮತ್ತು ವಸತಿ ಒದಗಿಸುವ ಮೂಲಕ, ಅವರಿಗೆ ಹೆಚ್ಚಿನ ಭದ್ರತೆ, ಸ್ವಾತಂತ್ರ್ಯ ಮತ್ತು ಘನತೆಯ ಬದುಕನ್ನು ಕಲ್ಪಿಸಲು ಈ ಉಪಕ್ರಮವು ಶ್ರಮಿಸುತ್ತದೆ ಎಂದು ತಿಳಿಸಿದರು.

ಜನರನ್ನು ಸ್ವಾವಲಂಬಿ ಆಗಿಲು ಪಣ

ಈ ಉಪಕ್ರಮದಿಂದ ಜನರು ಸಂಪಾದಿಸಲು, ಬೆಳೆಯಲು ಮತ್ತು ಸ್ವಾವಲಂಬಿಗಳಾಗಲು ಅನುವಾಗುತ್ತದೆ ಎಂದು ಜಿಬಿಎ ತಿಳಿಸಿದೆ. ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ (CNG) ಮಾರಾಟದ ಬಂಡಿಗಳು, ಆಟೋರಿಕ್ಷಾಗಳು ಮತ್ತು ಹೊಲಿಗೆ ಯಂತ್ರಗಳಿಗೆ ನೀಡುವ ಆರ್ಥಿಕ ನೆರವು, ಅರ್ಹ ಫಲಾನುಭವಿಗಳು ತಮ್ಮ ಜೀವನೋಪಾಯದ ಚಟುವಟಿಕೆ ಆರಂಭಿಸಲು ಅಥವಾ ಬಲಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಜನರ ಆದಾಯ ಗಳಿಕೆಯ ಪ್ರಯತ್ನಗಳಿಗೆ ಬೆಂಬಲ ನೀಡುವ ಮೂಲಕ, ಕೇವಲ ತಾತ್ಕಾಲಿಕ ಪರಿಹಾರ ನೀಡುವ ಬದಲು ಕುಟುಂಬಗಳಿಗೆ ಶಾಶ್ವತ ಪ್ರಯೋಜನ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.

ಈ ಸಬಲೀಕರಣ ಉಪಕ್ರಮವು, ಜನರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡುವುದು ಮತ್ತು ತಮ್ಮ ಕುಟುಂಬಗಳಿಗೆ ಸುರಕ್ಷಿತ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ನೆರವಾಗುತ್ತುದೆ. ಇದು ಕೇವಲ ಆರ್ಥಿಕ ಸಹಾಯವಲ್ಲ. ಬದಲಾಗಿ ಕುಟುಂಬಗಳು ಸಂಪಾದಿಸುವ, ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಹಾಗೂ ಘನತೆ ಮತ್ತು ಸ್ವಾವಲಂಬನೆಯಿಂದ ಬದುಕುವ ಸಾಮರ್ಥ್ಯದ ಮೇಲೆ ಮಾಡುತ್ತಿರುವ ಹೂಡಿಕೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಚಾರ, ಶಿಕ್ಷಣ, ಅವಕಾಶಗಳಿಗೆ ಉತ್ತೇಜನ

ಹಲವಾರು ನಾಗರಿಕರಿಗೆ, ಸುಲಭ ಸಂಚಾರದ ಸೌಲಭ್ಯವು ಪರಾವಲಂಬನೆ ಮತ್ತು ಸ್ವಾವಲಂಬನೆಯ ನಡುವಿನ ವ್ಯತ್ಯಾಸ ನಿರ್ಧರಿಸುತ್ತದೆ. ಪೌರಕಾರ್ಮಿಕರು ಮತ್ತು ದುಡಿಯುವ ಮಹಿಳೆಯರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ವಿಕಲಚೇತನರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನಗಳು ಮತ್ತು ಎಲೆಕ್ಟ್ರಿಕ್ ವೀಲ್‌ಚೇರ್‌ಗಳು ಈ ಯೋಜನೆಗಳಲ್ಲಿ ಸೇರಿವೆ. ದೈನಂದಿನ ಓಡಾಟ ಸುಲಭಗೊಳಿಸುವುದು, ಕೆಲಸಕ್ಕೆ ಹೋಗಲು ನೆರವಾಗುವುದು ಮತ್ತು ಸಂಚಾರದ ಸವಾಲುಗಳನ್ನು ಎದುರಿಸುತ್ತಿರುವವರ ಸ್ವಾವಲಂಬನೆ ಹೆಚ್ಚಿಸುವ ಉದ್ದೇಶವನ್ನೂ ಹೊಂದಿದೆ.

Metro Pink Line: ಟನಲ್ ಪಿಂಕ್ ಲೈನ್‌ನಲ್ಲಿ ಟ್ರಯಲ್ ರನ್‌ಗೆ ಸಿದ್ಧತೆ: ನಾಗವಾರ ತೆರಳಿದ್ರೆ ಬೆಂಗಳೂರು ಏರ್‍‌ಪೋರ್ಟ್ ಹತ್ತಿರ!
Metro Pink Line: ಟನಲ್ ಪಿಂಕ್ ಲೈನ್‌ನಲ್ಲಿ ಟ್ರಯಲ್ ರನ್‌ಗೆ ಸಿದ್ಧತೆ: ನಾಗವಾರ ತೆರಳಿದ್ರೆ ಬೆಂಗಳೂರು ಏರ್‍‌ಪೋರ್ಟ್ ಹತ್ತಿರ!

ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯು ಈ ಉಪಕ್ರಮದ ಮತ್ತೊಂದು ಪ್ರಮುಖ ಆಧಾರಸ್ತಂಭವಾಗಿದೆ. ಶುಲ್ಕ ಮರುಪಾವತಿ ನೆರವು ಅರ್ಹ ವಿದ್ಯಾರ್ಥಿಗಳು ತಮ್ಮ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಂಡು ಶಿಕ್ಷಣ ಮುಂದುವರಿಸಲು ಸಹಾಯ ಮಾಡುತ್ತದೆ

'ಅಮೃತ ಮಹೋತ್ಸವ', 'ಒಂಟಿ ಮನೆ' ಯೋಜನೆ

ಇದೇ ಉಪಕ್ರಮವು ನಗರದಲ್ಲಿ 'ಅಮೃತ ಮಹೋತ್ಸವ' ಮತ್ತು 'ಒಂಟಿ ಮನೆ' ಯೋಜನೆಗಳ ಮೂಲಕ ವಸತಿ ಸಂಬಂಧಿಸಿದವರಿಗೆ ನೆರವು ನೀಡಲಿದೆ. ಈ 10 ಕಲ್ಯಾಣ ಯೋಜನೆಗಳು ಒಟ್ಟಾಗಿ ಕುಟುಂಬದ ಯೋಗಕ್ಷೇಮದ ಪ್ರಮುಖ ಅಂಶಗಳಾದ ಜೀವನೋಪಾಯ ಗಳಿಕೆ, ಶಿಕ್ಷಣ, ಸುಲಭ ಸಂಚಾರ ಮತ್ತು ಸುರಕ್ಷಿತ ಸೂರು ನಿರ್ಮಿಸಿಕೊಳ್ಳಲು ಸಹಾಯ ಮಾಡಲಿವೆ.

35,610 ಅರ್ಜಿ ಸಲ್ಲಿಕೆ

ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 35,610 ಅರ್ಜಿಗಳು ಸಲ್ಲಿಕೆಯಾಗುವ ಮೂಲಕ ಈ ಯೋಜನೆಗಳಿಗೆ ವ್ಯಾಪಕ ಸ್ಪಂದನೆ ಸಿಕ್ಕಿದೆ. 17,771 ಫಲಾನುಭವಿಗಳ ಆಯ್ಕೆಯು ಈ ಉಪಕ್ರಮದ ವ್ಯಾಪ್ತಿಯನ್ನು ಮತ್ತು ಹಿಂದುಳಿದ ಸಮುದಾಯಗಳು, ಪೌರಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ವಿಕಲಚೇತನರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಗೆ ತಲುಪಿದೆ ಎಂದು ತಿಳಿಸಿದರು.

10 ಕಲ್ಯಾಣ ಯೋಜನೆಗಳನ್ನು ಒಂದೇ ಬೃಹತ್ ಕಾರ್ಯಕ್ರಮದಡಿ ತರುವ ಮೂಲಕ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಕಲ್ಯಾಣ ಕಾರ್ಯಕ್ರಮಗಳನ್ನು ಮತ್ತಷ್ಟು ಸುಲಭವಾಗಿ ತಲುಪುವಂತೆ ಮತ್ತು ಅರ್ಥಪೂರ್ಣವಾಗಿಸಲು ಪ್ರಯತ್ನಿಸುತ್ತಿದೆ. ಇದೊಂದು ಜನವಿಶ್ವಾಸದ ಹೆಜ್ಜೆ ಎಂದು ಸಚಿವರು ಬಣ್ಣಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+