ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪ್ಪು ಅಂತ್ಯಕ್ರಿಯೆಗೆ ಕುಟುಂಬದ ಸದಸ್ಯರು ಹಾಗೂ ಗಣ್ಯರಿಗೆ ಮಾತ್ರ ಅವಕಾಶ: ಸಿಎಂ

|
Google Oneindia Kannada News

ಬೆಂಗಳೂರು ಅಕ್ಟೋಬರ್ 30: ಅಕಾಲಿಕ ಮರಣ ಹೊಂದಿದ ಸ್ಯಾಂಡಲ್‌ವುಡ್‌ ನಟ ಪುನೀತ್ ರಾಜುಕುಮಾರ್ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ. ನಿನ್ನೆಯಿಂದಲೂ ಅಭಿಮಾನಿಗಳಿಗೆ, ಸ್ನೇಹಿತರಿಗೆ, ಆಪ್ತರಿಗೆ, ಕುಟುಂಬಸ್ಥರಿಗೆ ಅಪ್ಪು ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇಂದು ಕೂಡ ರಾತ್ರಿಯಿಡಿ ಅಪ್ಪು ಕೊನೆ ದರ್ಶನ ಪಡೆಯಲು ಅಭಿಮಾಣಿಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, ನಾಳೆ ಬೆಳಗ್ಗೆ ಅಂತ್ಯ ಸಂಸ್ಕಾರಕ್ಕೆ ಕುಟುಂಬ ತೀರ್ಮಾನಿಸಿದೆ. ಆದರೆ ನಾಳೆ ನಡೆಯುವ ಅಂತ್ಯ ಸಂಸ್ಕಾರದಲ್ಲಿ ಅಪ್ಪು ಕುಟುಂಬ ಸದಸ್ಯರು ಹಾಗೂ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಕುಟುಂಬದವರ ಇಚ್ಛೆಯಂತೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಕುಟುಂಬದ ಸದಸ್ಯರು ಹಾಗೂ ಕೆಲವು ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಮಾಧ್ಯಮದವರಿಗೆ ಇಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ಕಂಠೀರವ ಕ್ರೀಡಾಂಗಣದಿಂದ ಪಾರ್ಥಿವ ಶರೀರದ ಮೆರವಣಿಗೆ ನಾಳೆ ಬೆಳಿಗ್ಗೆ 5.30 ರಿಂದ 6.30 ವೇಳೆಗೆ ಹೊರಟು ಕಂಠೀರವ ಸ್ಟುಡಿಯೋಕ್ಕೆ ತಲುಪಲಿದೆ ಎಂದರು.

ಸ್ಟುಡಿಯೋದೊಳಗೆ ಸ್ಥಳಾವಕಾಶ ಕಡಿಮೆ ಇರುವುದರಿಂದ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಹಾಲು ತುಪ್ಪ ಕಾರ್ಯ ನೆರವೇರಿದ ಮೇಲೆ ಸೂಕ್ತ ವ್ಯವಸ್ಥೆಗಳನ್ನು ಹಾಗೂ ಸುರಕ್ಷತೆ ಕಲ್ಪಿಸಿದ ನಂತರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Family members and dignitaries allowed only for funeral: CM

ಈ ವೇಳೆ ಮುಖ್ಯಮಂತ್ರಿಗಳು ನಾಡಿನ ಮಹಾಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆಸ್ಪತ್ರೆ ಹಾಗೂ ಕ್ರೀಡಾಂಗಣದಲ್ಲಿ ಪುನೀತ್ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸುವ ವೇಳೆ ನಾಡಿನ ಮಹಾಜನತೆ ಹಾಗೂ ಪುನೀತ್ ಅವರ ಅಭಿಮಾನಿ ಬಂಧುಗಳು ಸಂಯಮ, ಶಾಂತಿ ಮತ್ತು ಶಿಸ್ತಿನಿಂದ ನಡೆದುಕೊಂಡಿದ್ದಕ್ಕಾಗಿ ರಾಜ್ಯದ ಮಹಾಜನತೆಗೆ ಮುಖ್ಯಮಂತ್ರಿಗಳು ಕೃತಜ್ಞತೆಗಳನ್ನು ಸಲ್ಲಿಸಿದರು.

ಪುನೀತ್ ರಾಜಕುಮಾರ್ ಅವರಿಗೆ ಸಕಲ ಸರ್ಕಾರಿ​ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಡಾ.ರಾಜ್​​ ಹಾಗೂ ಪಾರ್ವತಮ್ಮ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಪುನೀತ್ ನಿಧನಕ್ಕೆ ದೇಶದ ವಿವಿಧ ಭಾಷೆಗಳ ಚಿತ್ರರಂಗಗಳು, ಕಲಾವಿದರು ಸಂತಾಪ ಸೂಚಿಸಿದ್ದಾರೆ. ಇಂದು ಅಂತಿಮ ದರ್ಶನ ಪಡೆಯಲು ಟಾಲಿವುಡ್ ನಟರು ಆಗಮಿಸುವ ನಿರೀಕ್ಷೆ ಇದೆ. ರಾಜ್ಯದ ವಿವಿದೆಡೆಯಿಂದ ಅಭಿಮಾನಿಗಳು ಆಗಮಿಸುತ್ತಿದ್ದು, ಕಂಠೀರವ ಸ್ಟೇಡಿಯಂ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ರೈಲ್ವೆ ನಿಲ್ದಾಣ, ಮೆಜೆಸ್ಟಿಕ್​ಗಳಲ್ಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅಂತ್ಯಕ್ರಿಯೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದೇವೆ. ಈ ಬಗ್ಗೆ ರಾಜ್‌ಕುಮಾರ್ ಕುಟುಂಬಸ್ಥರ ಜತೆ ಚರ್ಚಿಸಿದ್ದೇವೆ. ಇಂದು ಇಡೀ ದಿನ ದರ್ಶನ ಪಡೆಯುವುದಕ್ಕೆ ಅವಕಾಶವಿದೆ. ಅಭಿಮಾನಿಗಳು ಶಾಂತಿಯುತವಾಗಿ ಬಂದು ದರ್ಶನ ಪಡೆಯಿರಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Family members and dignitaries allowed only for funeral: CM

ನಿನ್ನೆ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾದರು. ಅವರ ಅಕಾಲಿಕ ಮರಣಕ್ಕೆ ಇಡೀ ನರುನಾಡೇ ಕಂಬನಿ ಮಿಡಿದಿದೆ. ನಿನ್ನೆಯಿಂದಲೂ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪ್ರಸ್ತುತ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ದರ್ಶನ ಇಂದು ಇಡೀ ದಿನ ನಡೆಯಲಿದ್ದು, ನಾಳೆ ಬೆಳಗ್ಗೆ 6 ಗಂಟೆಯಿಂದ ಪಾರ್ಥೀವ ಶರೀರವನ್ನು ಕಂಠೀರವ ಸ್ಟುಡಿಯೋಗೆ ಮೆರವಣಿಗೆ ಮೂಲಕ ತರಲಾಗುತ್ತದೆ. ನಾಳೆ ಬೆಳಗ್ಗೆ 10.30 ರ ಒಳಗೆ ನಟ ಪುನೀತ್ ಅಂತ್ಯಕ್ರಿಯೆ ನಡೆಯಲಿರುವುದರಿಂದ ಬೆಳಗ್ಗೆ 6 ರಿಂದ ಕಂಠೀರವ ಸ್ಟೇಡಿಯಂನಿಂದ ಅಂತಿಮಯಾತ್ರೆ ಸಾಗಲಿದೆ.

Recommended Video

ಅಪ್ಪು ಸಾವಿನಿಂದ ಕಂಗೆಟ್ಟು ಜಯದೇವ ಆಸ್ಪತ್ರೆಯಲ್ಲಿ ತುಂಬಿದ ಜನಸಾಗರ | Oneindia Kannada

English summary
The funeral will be held at Kanteerava Studio as per the wishes of Puneet Raj Kumar's family. Chief Minister Basavaraja Bommai said Only family members and few dignitaries are allowed at Puneet funeral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X