ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾಸ್ಕರ್ ರಾವ್ ವಿರುದ್ಧ ಡಿಸಿಎಂ ಗಂಭೀರ ಆರೋಪ: ಸಿಎಂ ಎದುರು ಕಣ್ಣೀರಿಟ್ಟರಾ ಕಮಿಷನರ್?

|
Google Oneindia Kannada News

ಬೆಂಗಳೂರು, ಮಾರ್ಚ್ 26: ದೇಶಾದ್ಯಂತ ಲಾಕ್‌ಡೌನ್‌ ಚಾಲ್ತಿಯಲ್ಲಿದ್ದು, ರಾಜ್ಯದಲ್ಲೂ ಲಾಕ್‌ಡೌನ್‌ ಮುಂದುವರಿದಿದೆ. ಬೆಂಗಳೂರಿನಲ್ಲೂ ಸೆಕ್ಷನ್ 144 ಜಾರಿಯಲ್ಲಿದ್ದು, ಜನರು ರಸ್ತೆಗೆ ಬರದಂತೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಇದೀಗ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಗಂಭೀರ ಆರೋಪ ಮಾಡಿದ್ದಾರೆ. ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ವೀಡಿಯೋ ಕಾನ್ಫಿರೆನ್ಸ್ ಮೂಲಕ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಿಎಂ ಎದುರಲ್ಲಿ ಪೊಲೀಸ್ ಆಯುಕ್ತರ ವಿರುದ್ಧ ಡಿಸಿಎಂ ದೂರಿದ್ದಾರೆ ಎಂದು ತಿಳಿದು ಬಂದಿದೆ.

ಆನ್ ಲೈನ್ ಮಾರಾಟಗಾರರೊಂದಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಭೆಆನ್ ಲೈನ್ ಮಾರಾಟಗಾರರೊಂದಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಭೆ

ಬೆಂಗಳೂರಿನಲ್ಲಿ ಶಾಪ್ ತೆರೆಯಲು ಹಣ ಪಡೆದು ಕಮಿಷನರ್ ಅವಕಾಶ ಕೊಡುತ್ತಿದ್ದಾರೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಬಾಂಬ್ ಸಿಡಿಸಿದ್ದಾರೆ. ಇಂದು ನಗರದಲ್ಲಿ ತುರ್ತು ಸೇವೆ ಸಲ್ಲಿಸುವ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವ ಕಾರ್ಮಿಕರಿಗೆ ವಿಶೇಷ ಪಾಸ್ ವಿತರಿಸಿದ್ದು, ಸ್ವಿಗ್ಗಿ, ಜೊಮ್ಯಾಟೊ ಆಹಾರ ವಿತರಣೆ ಮಾಡುವವರಿಗೆ ಹೆಚ್ಚು ಪಾಸ್ ಕೊಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

DCM Ashwath Narayana Alleged Against Bhaskar Rao

ಸ್ವಿಗ್ಗಿ, ಜೊಮ್ಯಾಟೊ ಆಹಾರ ವಿತರಣೆ ಮಾಡುವವರಿಗೆ ಹೆಚ್ಚು ಪಾಸ್ ಕೊಡಬೇಕು ಎಂದ ಅಶ್ವತ್ಥ ನಾರಾಯಣ ಆಗ್ರಹಿಸಿದ್ದು, ಹೆಚ್ಚು ಪಾಸ್ ಕೊಡುವುದಕ್ಕೆ ಆಗುವುದಿಲ್ಲ ಎಂದು ಭಾಸ್ಕರ್ ರಾವ್ ನಿರಾಕರಿಸಿದ್ದಾರೆ.

25ಕ್ಕೂ ಹೆಚ್ಚು ಆನ್‌ಲೈನ್ ಸಂಸ್ಥೆಗಳ ವ್ಯವಹಾರಕ್ಕೆ ಪೊಲೀಸರ ಅನುಮತಿ25ಕ್ಕೂ ಹೆಚ್ಚು ಆನ್‌ಲೈನ್ ಸಂಸ್ಥೆಗಳ ವ್ಯವಹಾರಕ್ಕೆ ಪೊಲೀಸರ ಅನುಮತಿ

ಈ ನಡುವೆ ಡಿಸಿಎಂ ಮತ್ತು ಭಾಸ್ಕರ್ ರಾವ್ ನಡುವೆ ನಡೆದ ಮಾತಿನ ಆರೋಪ-ಪ್ರತ್ಯಾರೋಪದಲ್ಲಿ ಪೊಲೀಸ್ ಆಯುಕ್ತ ಕಣ್ಣೀರಿಟಿದ್ದಾರೆ ಎನ್ನಲಾಗಿದೆ. ಸಿಎಂ ಎದುರು ಕಣ್ಣೀರಿಟ್ಟ ಭಾಸ್ಕರ್ ರಾವ್‌ ಅವರನ್ನು ಖುದ್ದು ಸಿಎಂ ಸಮಾಧಾನ ಪಡಿಸಲು ಯತ್ನಿಸಿದರು ಎನ್ನಲಾಗಿದೆ.

English summary
Karnataka Lockdown: DCM Ashwath Narayana alleged that Bengaluru police commissioner Bhasker Rao is taking money from shop owners and gives permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X