ಮಲ್ಲತ್ತಹಳ್ಳಿ ಕಂಟೈನ್ಮೆಂಟ್ ವಲಯ ಎಂದು ಘೋಷಿಸಿದ ಬಿಬಿಎಂಪಿ

ಬೆಂಗಳೂರು, ಮೇ 20 : ಬೆಂಗಳೂರು ನಗರದ ನಾಗರಬಾವಿ 2ನೇ ಹಂತದ ಮಲ್ಲತ್ತಹಳ್ಳಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಟೈನ್ಮೆಂಟ್ ವಲಯ ಎಂದು ಘೋಷನೆ ಮಾಡಿದೆ. ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು.

ರಾಜರಾಜೇಶ್ವರಿ ನಗರ ವಲಯದ ಜ್ಞಾನಭಾರತಿ ವಾರ್ಡ್ 129ರ ನಾಗರಬಾವಿ 2ನೇ ಹಂತದ ಮಲ್ಲತ್ತಹಳ್ಳಿಯನ್ನು ಕಂಟೈನ್ಮೆಂಟ್ ವಲಯ ಎಂದು ಬುಧವಾರ ಘೋಷಿಸಲಾಗಿದೆ. ಬಿಬಿಎಂಪಿಯು ಕೋವಿಡ್ - 19 ಸೋಂಕು ಹರಡದಂತೆ ಸೂಕ್ತ ಕ್ರಮಗಳನ್ನು ಕೈಗೊಂಡಿದೆ.

ಕೋವಿಟ್ -1 9 ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಮಲ್ಲತ್ತಹಳ್ಳಿಯನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಲಾಗಿದ್ದು, ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಸಹ ಜನರು ಮನೆಯಿಂದ ಹೊರ ಬಾರದಂತೆ ಕ್ರಮ ಕೈಗೊಳ್ಳಲಾಗುತ್ತದೆ.

COVID 19 Case Found BBMP Announced Mallathahalli As Containment Zone

ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಜೊತೆ ಬಡಾವಣೆಯಲ್ಲಿ ಕೊರೊನಾ ಹರಡದಂತೆ ತಡೆಯಲು ಕೈಗೊಂಡ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಮುಂದಿನ ಆದೇಶದ ತನಕ ಕಂಟೈನ್ಮೆಂಟ್ ವಲಯ ಎಂಬ ಆದೇಶ ಜಾರಿಯಲ್ಲಿರುತ್ತದೆ.

ಮೇ 18ರ ತನಕ ಬೆಂಗಳೂರು ನಗರದಲ್ಲಿ 19 ಕಂಟೈನ್ಮೆಂಟ್ ಝೋನ್‌ಗಳಿದ್ದವು. ಬುಧವಾರ ಎರಡು ಬಡಾವಣೆಗಳು ಹೊಸಗಾಗಿ ಕಂಟೈನ್ಮೆಂಟ್ ಝೋನ್‌ಗೆ ಸೇರಿವೆ. ಯಾವುದೇ ಬಡಾವಣೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾದರೆ ಅದನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗುತ್ತದೆ.

ಲಾಕ್ ಡೌನ್ 4ನೇ ಹಂತದಲ್ಲಿ ಕೊರೊನಾ ಪ್ರಕರಣಗಳನ್ನು ಆಧರಿಸಿ ಕೆಂಪು, ಹಸಿರು ಮತ್ತು ಕಿತ್ತಲೆ ವಲಯ ಎಂದು ವಿಂಗಡನೆ ಮಾಡುವುದಿಲ್ಲ. ಕೊರೊನಾ ಪ್ರಕರಣ ಪತ್ತೆಯಾದರೆ ಅದನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+