ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ‘ಸತ್ಯಮೇವ ಜಯತೆ’ ರ್ಯಾಲಿ ಹಾಸ್ಯಾಸ್ಪದ- ಯಡಿಯೂರಪ್ಪ

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 'ಸತ್ಯಮೇವ ಜಯತೆ' ಹೆಸರಿನಲ್ಲಿ ಬೃಹತ್ ರ್ಯಾಲಿಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 22: ನಾಳೆ (ಫೆಬ್ರವರಿ 23) ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 'ಸತ್ಯಮೇವ ಜಯತೆ' ಹೆಸರಿನಲ್ಲಿ ಬೃಹತ್ ರ್ಯಾಲಿಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ಜೀಪ್ ಹಗರಣದಿಂದ ಹಿಡಿದು 2ಜಿ, ಕಲ್ಲಿದ್ದಲು, ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದವರೆಗೆ ಕಳೆದ 60 ವರ್ಷಗಳಿಂದ ದೇಶವನ್ನೇ ಕೊಳ್ಳೆ ಹೊಡೆದವರು 'ಸತ್ಯಮೇವ ಜಯತೆ' ರ್ಯಾಲಿ ಮಾಡುತ್ತಿದ್ದಾರೆ. ನನಗೆ ನಗು ಬರುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.[ಅವರಪ್ಪನಾಣೆಗೂ ಯಡಿಯೂರಪ್ಪ ಮತ್ತೆ ಸಿಎಂ ಆಗಲ್ಲಾ, ಉಗ್ರಪ್ಪ ಉವಾಚ]

ನಾಳೆ ರ್ಯಾಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ, ಸಚಿವರು, ಶಾಸಕರುಗಳ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಾಂಗ್ರೆಸ್ ಬೃಹತ್ ರ್ಯಾಲಿ ಹಮ್ಮಿಕೊಂಡಿದೆ.

Congress organizing ‘Satyameva Jayate’ rally, Yeddyurappa says its laughable

ಈ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಪಾಲ್ಗೊಳ್ಳಲಿದ್ದು ಬಿಜೆಪಿ ಪಕ್ಷದ ಆರೋಪಕ್ಕೆ ಸೂಕ್ತ ತಿರುಗೇಟು ನೀಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಈಗಾಗಲೇ ಹೇಳಿದ್ದಾರೆ.[ಅನಂತ್-ಯಡಿಯೂರಪ್ಪ ಸಂಭಾಷಣೆಯೇ ತಿರುಚಿದ್ದಂತೆ, ಕೇಸ್ ದಾಖಲಿಸಿದ ಬಿಜೆಪಿ]

ಇದೇ ವೇಳೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎನ್ನುವ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಕಾಂಗ್ರೆಸ್ ಹೈಕಮಾಂಡಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ 1,000 ಕೋಟಿ ಕಿಕ್ ಬ್ಯಾಕ್ ನೀಡಿರುವುದು ಸತ್ಯ ಎಂದು ಪುನರುಚ್ಚರಿಸಿದ್ದಾರೆ.

English summary
Congress party organized ‘Satyameva Jayate’ rally in Freedom Park Bengaluru on February 23. For this rally BJP state president B S Yeddyurappa replied that, “Laughable that Congress is organizing Satyameva Jayate rallies after looting India for 60 years from Jeep Scam to 2G to Coal to Augusta,” in his twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X