• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಹನ ದಟ್ಟಣೆ: ಬಿಎಂಟಿಸಿ ಸಂಚಾರದಲ್ಲಿ ದಿನಕ್ಕೆ 1.5 ಲಕ್ಷ ಕಿ.ಮೀ ಕತ್ತರಿ

|

ಬೆಂಗಳೂರು, ಫೆಬ್ರವರಿ 26 : ವಾಹನ ದಟ್ಟಣೆಯಿಂದಾಗಿ ಕಳೆದ 5 ವರ್ಷದಿಂದ ಬಿಎಂಟಿಸಿ ಬಸ್ ಪ್ರತಿನಿತ್ಯ ಸಂಚಾರದಲ್ಲಿ 1.5 ಲಕ್ಷ ಕಿ.ಮೀ ಕಡಿತಗೊಳ್ಳುತ್ತಿದೆ.

ಬಿಎಂಟಿಸಿ ಅಂಕಿ ಅಂಶಗಳ ಪ್ರಕಾರ, ಪ್ರತಿನಿತ್ಯ ಬಿಎಂಟಿಸಿ ಓಡಾಟ 2013-14 ರಲ್ಲಿ 13.1 ಲಕ್ಷ ಕಿ.ಮೀ ಇದ್ದರೆ 2017-18 ನಲ್ಲಿ ಅದು 11.6 ಕಿ.ಮೀಗೆ ಇಳಿಕೆಯಾಗಿದೆ. ಇದರಿಂದ ಪ್ರತಿನಿತ್ಯ ಬಿಎಂಟಿಸಿ ಬಸ್ ಸಂಚಾರದ ಅಂತರ 218 ಕಿ.ಮೀ ಯಿಂದ2016 ಕಿ.ಮೀಗೆ ಕಡಿಮೆಯಾಗಿದೆ.

ಸಣ್ಣ ರಸ್ತೆಗಳು, ಬೆಂಗಳೂರು ವಾಹನ ದಟ್ಟಣೆ, ಜನಸಂಖ್ಯೆ ಹೆಚ್ಚಳ ಇದೆಲ್ಲವುಗಳಿಂದಾಗಿ ಹಲವಾರು ಬಿಎಂಟಿಸಿ ಬಸ್ ತಮಗೆ ನೀಡಲಾದ ಟಾರ್ಗೆಟ್ ತಲುಪಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ವಾಹನಗಳ ಸಂಖ್ಯೆ50.5 ಲಕ್ಷದಿಂದ 72.7 ಲಕ್ಷಕ್ಕೆ ಏರಿಕೆಯಾಗಿದೆ. ಪೀಕ್ ಅವರ್ ನಲ್ಲಿ ಗಂಟೆಗೆ 10 ಕಿ.ಮೀ ಮಾತ್ರ ಸಂಚರಿಸಲು ಸಾಧ್ಯವಾಗುತ್ತದೆ.

ಬಿಎಂಟಿಸಿಯು ತಿಂಗಳಿಗೊಮ್ಮೆ ರೂಟ್ ಬದಲಾವಣೆ, ಟ್ರಿಪ್ ಗಳ ಸಂಖ್ಯೆ ಕಡಿಮೆ ಮಾಡುತ್ತಿದೆ. ಹಲವು ಬಸ್ ಗಳನ್ನು ರದ್ದು ಮಾಡಿದೆ.ಬಿಎಂಟಿಸಿ ವರದಿ ಪ್ರಕಾರ 2013-14 ಹಾಗೂ2017-18 ರ ಅವಧಿಯಲ್ಲಿ ರದ್ದುಪಡಿಸಲಾದ ಬಸ್ ಗಳು ಶೇ.4.5 ರಿಂದ ಶೇ.15 ಕ್ಕೆ ಏರಿಕೆಯಾಗಿದೆ.

ಬಿಎಂಟಿಸಿ ವರದಿ ಪ್ರಕಾರ ಪ್ರತಿ ಬಸ್ ಮೂರು ನಿಮಿಷಕ್ಕೆ ಒಂದು ಕಿ.ಮೀ ಕ್ರಮಿಸಬೇಕು ಆದರೆ ಇದೀಗ ದುಪ್ಪಟ್ಟು ಸಮಯವನ್ನು ತೆಗೆದುಕೊಳ್ಳುತ್ತಿದೆ. ಹಾಗಾಗಿ ತಮ್ಮ ಟ್ರಿಪ್ ಗಳನ್ನು ಪೂರ್ಣ ಮಾಡಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಸವಾರರ ಸಂಖ್ಯೆ ಅಧಿಕವಾಗಿದೆ ಜತೆಗೆ ವೇಗ ಚಾಲನೆ ಮಾಡುವ ಕಾರಣ ಬಸ್ ನ್ನು ವೇಗವಾಗಿ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಚಾಲಕರೊಬ್ಬರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The city's traffic crawl is taking a tollon its public transport system with BMTC losing 1.5 lakh km per day over the past five years. Records with BMTC show the total average daily distance covered by its buses has come down from 13.1 lakh km in 2013-14 to 11.6 lakh km in 2017-18
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more